
ಮುಂಬೈ(ಜು.11) ಬಾಲಿವುಡ್‌ನ ಸೆಲೆಬ್ರೆಟಿ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ ಸಿಂಗ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ರಣವೀರ್ ಹಾಗೂ ದೀಪಿಕಾ ಹಳೇ ವಿಡಿಯೋ ಒಂದು ಬಹಿರಂಗವಾಗಿದೆ. ದೀಪಿಕಾ ಶೂಟಿಂಗ್ ಸೆಟ್‌ಗೆ ತೆರಳಿದ್ದ ರಣವೀರ್ ಸಿಂಗ್, ದೀಪಿಕಾ ಬಿದಿದಪ್ಪಿ ಮುದ್ದಾಡಿದ ವಿಡಿಯೋ ಒಂದು ಬಹಿರಂಗವಾಗಿದೆ. ಈ ವಿಡಿಯೋ ರೆಡಿಟ್‌ನಲ್ಲಿ ಬಹಿರಂಗವಾಗಿದೆ. ಇದೀಗ ಈ ಜೋಡಿಗಳ ಹಳೇ ರೋಮ್ಯಾನ್ಸ್ ವಿಡಿಯೋಗೆ ಅಭಿಮಮಾನಿಗಳು ಭರ್ಜಿ ಕಮೆಂಟ್ ಮಾಡುತ್ತಿದ್ದಾರೆ.
ಈ ರೊಮ್ಯಾನ್ಸ್ ನಡೆದಿದ್ದು ದೀಪಿಕಾ ಅಭಿನಯದ ಫೈಟರ್ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ. ಹೃತಿಕ್ ರೋಶನ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಶೂಟಿಂಗ್ ಸೆಟ್‌ಗೆ ಆಗಮಸಿದ್ದ ರಣವೀರ್, ಅದೇ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಜೊತೆಗೆ ದೀಪಿಕಾ ಜೊತೆ ಮುದ್ದಾಡಿ ರೊಮ್ಯಾನ್ಸ್ ಮಾಡಿದ್ದಾರೆ.
ದೀಪಿಕಾ ಪಡುಕೋಣೆ-ರಣವೀರ್‌ಗೆ ಗಂಡು ಮಗು, ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!
ಫೈಟರ್ ಚಿತ್ರದ ಶೇರ್ ಖುಲ್ ಗಯೆ ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ರಣವೀರ್ ಶೂಟಿಂಗ್ ಸೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ದೀಪಿಕಾ ಈ ಚಿತ್ರದ ಶೂಟಿಂಗ್‌ನಲ್ಲಿದ್ದಾಗಲೇ ರಣವೀರ್ ಸೆಟ್‌ಗೆ ಎಂಟ್ರಿಕೊಟ್ಟಿದ್ದರು. ಹೀಗಾಗಿ ದೀಪಿಕಾ ಸಿನಿಮಾದ ಪಾತ್ರದ ಡ್ರೆಸ್‌ನಲ್ಲಿದ್ದರು. ಇತ್ತ ರಣವೀರ್ ರೋಹಿತ್ ಶೆಟ್ಟಿಯ ಸಿಂಘಮ್ ಅಗೈನ್ ಚಿತ್ರದ ಶೂಟಿಂಗ್‌ನಲ್ಲಿದ್ದರು. ಈ ಚಿತ್ರದ ನಡುವೆ ದೀಪಿಕಾ ಅಭಿನಯದ ಫೈಟರ್ ಚಿತ್ರದ ಸೆಟ್‌ಗೆ ತೆರಳಿದ ರಣವೀರ್ ಸಿಂಗ್, ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸ್ಟೇಜ್ ಕೆಳಗಿದ್ದ ದೀಪಿಕಾ ಪಡುಕೋಣೆಯನ್ನು ಕರೆದ ರಣವೀರ್ ಒಂದೆಡೆ ಸ್ಟೆಪ್ಸ್ ಹಾಕಿದ್ದಾರೆ. ಬಳಿಕ ದೀಪಿಕಾ ಬಿಗಿದಪ್ಪಿದ್ದಾರೆ. ಆರಂಭದಲ್ಲಿ ದೀಪಿಕಾಳನ್ನು ಎತ್ತಿಕೊಂಡ ರಣವೀರ್ ಬಳಿಕ ರೊಮ್ಯಾಂಟಿಕ್ ಕಿಸ್ ನೀಡಿದ್ದಾರೆ.
ಫೈಟರ್ ಸಿನಿಮಾ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಆದರೆ ಈ ರೊಮ್ಯಾನ್ಸ್ ವಿಡಿಯೋ ಇದೀಗ ಬಹಿರಂಗವಾಗಿದೆ. ಈ ವಿಡಿಯೋಗೆ ರಣವೀರ್ ಹಾಗೂ ದೀಪಿಕಾ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಸ್ ಮಾಡಿದ್ದಾರೆ. ವಿಡಿಯೋ ಕೊನೆಯಲ್ಲಿ ಈ ರೀತಿಯ ರೊಮ್ಯಾನ್ಸ್ ಇದೆ ಎಂದುಕೊಂಡಿರಲಿಲ್ಲ. ಕೊನೆಯವರೆಗೂ ವಿಡಿಯೋ ನೋಡಿದ್ದು ಸಾರ್ಥಕವಾಯಿತು ಎಂದು ಕಮೆಂಟ್ ಮಾಡಿದ್ದಾರೆ.
ಬಾಲಿವುಡ್‌ನ ಕ್ಯೂಟ್ ಕಪಲ್, ಇವರು ಪ್ರತಿ ಕ್ಷಣವನ್ನು ಆನಂದಿಂದ ಕಳೆಯುತ್ತದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ 12 ವರ್ಷಗಳಿಂದ ದೀಪಿಕಾ ಹಾಗೂ ರಣವೀರ್ ಪರಸ್ಪರ ಶೂಟಿಂಗ್ ಸೆಟ್‌ಗೆ ತೆರಳಿ ಕೆಲ ಕ್ಷಣಗಳನ್ನು ಕಳೆಯುತ್ತಾರೆ. ಇವರಿಬ್ಬರ ಜೋಡಿ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಬ್ಬ ನನ್ ಹಾರ್ಟ್ ಚೂರ್ ಮಾಡಿದ, ಇನ್ನೊಬ್ಬ ಬಂದು ಎಲ್ಲಾ ಸರಿ ಮಾಡಿದ: ದೀಪಿಕಾ ಪಡುಕೋಣೆ ಉವಾಚ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.