ಬ್ರೆಸ್ಟ್ ಕ್ಯಾನ್ಸರ್ ನೋವು ತಾಳಲಾರದೆ ದೇವರು ಅಲ್ಲಾನ ಮೊರೆ ಹೋದ ಹೀನಾ, ಪೋಸ್ಟ್ ನೋಡಿ ಫ್ಯಾನ್ಸ್ ಭಾವುಕ

By Roopa Hegde  |  First Published Jul 11, 2024, 1:34 PM IST

ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಕಿರುತೆರೆ ನಟಿ ಹೀನಾ ಖಾನ್ ಇನ್ಸ್ಟಾ ಸ್ಟೋರಿ ಕಣ್ಣಂಚಲ್ಲಿ ನೀರು ತರಿಸಿದೆ. ನೋವು ತಾಳಲಾರದೆ ನಟಿ ಹೀನಾ ಖಾನ್ ಮಧ್ಯರಾತ್ರಿ ಅಲ್ಲಾನನ್ನು ನೆನೆದಿದ್ದಾಳೆ. 


ಯಾವುದೇ ವ್ಯಕ್ತಿ ಹೊರಗಿಂದ ಎಷ್ಟೇ ಸ್ಟ್ರಾಂಗ್ ಕಂಡ್ರೂ ಒಳಗಿನ ನೋವು ಅವರನ್ನು ಕಿತ್ತು ತಿನ್ನುತ್ತಿರುತ್ತದೆ. ಇದರಲ್ಲಿ ಕಿರುತೆರೆ ನಟಿ ಹೀನಾ ಖಾನ್ ಒಬ್ಬರು. ತಮಗೆ ಏನೂ ಆಗಿಲ್ಲ ಅಂತಾ ಅಭಿಮಾನಿಗಳ ಮುಂದೆ ಹೇಳ್ತಿದ್ದರೂ ಬ್ರೆಸ್ಟ್ ಕ್ಯಾನ್ಸರ್ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿದೆ. ಬ್ರೆಸ್ಟ್ ಕ್ಯಾನ್ಸರ್ ಮೂರನೇ ಸ್ಟೇಜ್ ನಲ್ಲಿರುವ ಹೀನಾ ಖಾನ್ ಗೆ ಚಿಕಿತ್ಸೆ ಶುರುವಾಗಿದೆ. ಈ ಮಧ್ಯೆ ಹೀನಾ ಖಾನ್, ಅಲ್ಲಾ ಮೊರೆ ಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೀನಾ ಖಾನ್ (Hina Khan), ತಮ್ಮ ಆರೋಗ್ಯದ ಅಪ್ಡೇಟ್ ನೀಡ್ತಿದ್ದಾರೆ. ಈ ಬಾರಿ ಹೀನಾ, ಅಲ್ಲಾನನ್ನು ನೆನೆದಿದ್ದಾರೆ. ಇನ್ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ ಹೀನಾ ಖಾನ್ ಹಾಕಿರುವ ಪೋಸ್ಟ್ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಕಿಮೋಥೆರಪಿ ಎಷ್ಟು ನೋವು ನೀಡ್ತಿದೆ ಎಂಬುದು ಅವರ ಒಂದು ಪೋಸ್ಟ್ ನಿಂದ ಅರ್ಥವಾಗ್ತಿದೆ.

Tap to resize

Latest Videos

ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು

ಹೀನಾ ಖಾನ್ ತಮ್ಮ ಪೋಸ್ಟ್ ನಲ್ಲಿ ಅಲ್ಲಾ ಹೊರತುಪಡಿಸಿ ಯಾರೂ ನಿಮ್ಮ ನೋವನ್ನು ನಿವಾರಿಸಲು ಸಾಧ್ಯವಿಲ್ಲ. ದಯವಿಟ್ಟು ಅಲ್ಲಾ ಎಂದು ಬರೆದಿದ್ದಾರೆ. ಹೀನಾ ಖಾನ್ ಈ ಪೋಸ್ಟ್ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಆದಷ್ಟು ಬೇಗ ನಟಿ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

ಕ್ಯಾನ್ಸರ್ ಬಗ್ಗೆ ಬಹಿರಂಗವಾಗಿ ಹೇಳಿದ್ದ ಹೀನಾ : ಹೀನಾ ಖಾನ್ ತಮಗೆ ಬ್ರೆಸ್ಟ್ ಕ್ಯಾನ್ಸರ್ ಇದೆ ಎಂಬುದನ್ನು ಅಭಿಮಾನಿಗಳ ಮುಂದೆ ಹೇಳಲು ಹಿಂಜರಿಯಲಿಲ್ಲ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡ ಅವರು, ಬ್ರೆಸ್ಟ್ ಕ್ಯಾನ್ಸರ್ ಇರೋದು ಹೇಗೆ ಗೊತ್ತಾಯ್ತು ಎಂಬುದನ್ನು ಹೇಳಿದ್ದರು. ಆಗಾಗ ನನಗೆ ಆರೋಗ್ಯ ಹದಗೆಡುತ್ತಿತ್ತು. ಜ್ವರ ಬರಲು ಶುರುವಾಗಿತ್ತು. ವೈದ್ಯರನ್ನು ಸಂಪರ್ಕಿಸಿದಾಗ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗುವಂತೆ ಹೇಳಿದ್ದರು. ಈ ಸಮಯದಲ್ಲಿ ನೆಲ ಕುಸಿದ ಅನುಭವವಾಗಿತ್ತು. ಕ್ಯಾನ್ಸರ್ ವರದಿ ಪಾಸಿಟಿವ್ ಬರ್ತಿದ್ದಂತೆ ಕತ್ತಲೆಯಲ್ಲಿ ಮುಳುಗಿದ್ದ ನಟಿ, ಎದ್ದು ನಿಲ್ಲುವ ನಿರ್ಧಾರಕ್ಕೆ ಬಂದಿದ್ದರು. 

ಕೆಲ ದಿನಗಳ ಹಿಂದಷ್ಟೆ ಹೀನಾ ಖಾನ್, ತಮ್ಮ ಕೂದಲು ಕತ್ತರಿಸಿಕೊಂಡ ವಿಡಿಯೋವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದರು. ಬಿಗ್ ಬಾಸ್ ನಲ್ಲಿ ಕೂದಲು ಕತ್ತರಿಸುವ ಸಮಯ ಬಂದಾಗ ಬಿಕ್ಕಿ ಅತ್ತಿದ್ದ ಹೀನಾ, ಈ ಬಾರಿ ಧೈರ್ಯ ತಂದುಕೊಂಡು ಕೂದಲು ಕತ್ತರಿಸಿಕೊಂಡಿದ್ದರು. ಅದಲ್ಲದೆ ಅವರು ಕಿಮೊಥೆರಪಿ ತನ್ನ ದೇಹದ ಮೇಲೆ ಹೇಗೆ ಪರಿಣಾಮ ಬೀರಲು ಪ್ರಾರಂಭಿಸಿದೆ ಎಂಬುದನ್ನು ಕೂಡ ಹೇಳಿದ್ದರು. ಕೆಲ ಫೋಟೋ ಹಂಚಿಕೊಂಡಿದ್ದ ಅವರು, ಡಾರ್ಕ್ ಸರ್ಕಲ್ ಹೇಗೆ ಬರ್ತಿದೆ ನೋಡಿ ಎಂದಿದ್ದರು. ಈಗ ನೋವಿನ ಇನ್ನೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಹೀನಾ ಖಾನ್ ಮೇಲ್ನೋಟಕ್ಕೆ ಸ್ಟ್ರಾಂಗ್ ಆಗಿ ಕಂಡ್ರೂ ಕಿಮೋಥೆರಪಿ ನೋವು ಅವರನ್ನು ಕಾಡುತ್ತಿದೆ ಎಂಬುದು ಈ ಪೋಸ್ಟ್ ಸ್ಪಷ್ಟ ಮಾಡ್ತಿದೆ. 

ಕ್ಯಾನ್ಸರ್‌ ಗಂಭೀರ ಕಾಯಿಲೆ. ವ್ಯಕ್ತಿ ಎಷ್ಟೇ ಸ್ಟ್ರಾಂಗ್ ಇರಲಿ, ಹಣವಂತನಾಗಿರಲಿ ಅದಕ್ಕೆ ಭಯಪಡುತ್ತಾನೆ. ಹೀನಾ ತಮ್ಮನ್ನು ತಾವು ಸ್ಟ್ರಾಂಗ್ ಮಾಡಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ನೋವು ಮರೆಯುವ ಪ್ರಯತ್ನ ಮಾಡ್ತಿದ್ದಾರೆ. ಅವರ ತಾಯಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇಷ್ಟಾದ್ರೂ 36 ವರ್ಷದ ಹೀನಾ ಎಲ್ಲೋ ತಮ್ಮ ಅನಾರೋಗ್ಯದ ಬಗ್ಗೆ ಹೆದರುತ್ತಿದ್ದಂತೆ ಕಾಣ್ತಿದೆ. ಅವರು ತಡರಾತ್ರಿ ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.     

ಮುಖೇಶ್ ಅಂಬಾನಿಯ ಮೂವರು ಮಕ್ಕಳಲ್ಲಿ ಶ್ರೀಮಂತರು ಯಾರು? ಆಕಾಶ್, ಇಶಾ,ಅನಂತ್ ಆಸ್ತಿ ಮೌಲ್ಯ ಎಷ್ಟು?

ಹಿನಾ 2009 ರಿಂದ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ್ದರು. ಬಿಗ್ ಬಾಸ್ 11 ಮತ್ತು ಬಿಗ್ ಬಾಸ್ 14 ನಲ್ಲಿ ಸ್ಪರ್ಧಿಯಾಗಿದ್ದ ಅವರು,  ಕಸೌತಿ ಜಿಂದಗಿ ಕೆಯಲ್ಲಿ ಕೊಮೊಲಿಕಾ ಪಾತ್ರದಲ್ಲಿ ನಟಿಸಿದ್ದರು. ಆ ನಂತ್ರ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಅವರು, ಅನೇಕ ಮ್ಯೂಜಿಕ್ ವಿಡಿಯೋದಲ್ಲಿ ಮಿಂಚಿದ್ದಾರೆ. 

click me!