ಮಗು ಹುಟ್ಟುವ ಸಮಯದಲ್ಲಿ ಮದ್ವೆ ಫೋಟೋ ಡಿಲೀಟ್​ ಮಾಡಿದ್ದೇಕೆ ರಣವೀರ್‌​ ಸಿಂಗ್​? ಕೊನೆಗೂ ಸಿಕ್ತು ಕಾರಣ...

By Suvarna News  |  First Published May 8, 2024, 12:58 PM IST

ಮಗು ಹುಟ್ಟುವ ಸಮಯದಲ್ಲಿ ಮದ್ವೆ ಫೋಟೋ ಡಿಲೀಟ್​ ಮಾಡಿದ್ದೇಕೆ ರಣವೀರ್‌​ ​ ಸಿಂಗ್​? ಕೊನೆಗೂ ಸಿಕ್ತು ಕಾರಣ... 


ಸದ್ಯ ಪಠಾಣ್​ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆಯ ಗರ್ಭಧಾರಣೆಯ ವಿಷಯ ಹಾಟ್ ವಿಷಯವಾಗಿದೆ. ನಟಿಯೇನೋ ಅಮ್ಮನಾಗುವ ಸುದ್ದಿ ಕೊಟ್ಟರು. ಸೆಪ್ಟೆಂಬರ್​ನಲ್ಲಿ ಮಗು ಜನಿಸಲಿದೆ ಎಂದೂ ಹೇಳಿದ್ದಾರೆ. ಆದರೆ ಈಕೆಗೆ ಇನ್ನೂ ಬೇಬಿ ಬಂಪ್​  ಕಾಣಿಸುತ್ತಿಲ್ಲ. ದೀಪಿಕಾ ಕೊಟ್ಟಿರುವ ಲೆಕ್ಕದ ಪ್ರಕಾರ ಅವರಿಗೆ ಈಗ ಮೂರು ತಿಂಗಳು ಮುಗಿದು ನಾಲ್ಕು ತಿಂಗಳು ಆಗಿದೆ. ಆದರೆ ಇದುವರೆಗೂ ಅವರು ಶೂಟಿಂಗ್​ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಆದ್ದರಿಂದ  ದೀಪಿಕಾ ಪಡುಕೋಣೆ ಗರ್ಭಿಣಿ ಅಲ್ಲವೇ ಅಲ್ಲ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ.  

ಕೆಲ ದಿನಗಳ ಹಿಂದೆ ನಟಿ, ಟ್ಯಾನ್‌ ಆಗಿರುವ ಫೋಟೋ ಶೇರ್‌ ಮಾಡಿದ್ದರು. ಅದನ್ನು ನೋಡಿದರೆ ಅವರು ಶೂಟಿಂಗ್‌ನಲ್ಲಿ ಫುಲ್‌ ಬಿಜಿ ಇರುವುದು ತಿಳಿದುಬರುತ್ತದೆ. ನಾಲ್ಕು ತಿಂಗಳ ಗರ್ಭಿಣಿ ಈ ರೀತಿ ಶೂಟಿಂಗ್‌ನಲ್ಲಿ ಬಿಜಿಯಾಗುವುದು ಕಷ್ಟ ಎನ್ನುತ್ತಿದ್ದಾರೆ ನೆಟ್ಟಿಗರು. ಇದಕ್ಕಿಂತಲೂ ಮುಖ್ಯವಾಗಿ ನಟಿ, ಇದೀಗ ನಟಿ  ಶೂಟಿಂಗ್‌ ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಪೊಲೀಸ್‌ ಅಧಿಕಾರಿಯಾಗಿ. ಪೊಲೀಸ್‌ ಅಧಿಕಾರಿಯೆಂದರೆ ಸಾಮಾನ್ಯವಾಗಿ ಫೈಟಿಂಗ್‌ ಇದ್ದೇ ಇರುತ್ತದೆ. ಇಂಥ ಶೂಟಿಂಗ್‌ ನಾಲ್ಕು ತಿಂಗಳ ಗರ್ಭಿಣಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಅಷ್ಟೇ ಅಲ್ಲದೇ, ನಾಲ್ಕು ತಿಂಗಳು ಎಂದರೆ ಸಾಮಾನ್ಯವಾಗಿ ಸ್ವಲ್ಪವಾದರೂ ಹೊಟ್ಟೆ ಕಾಣಿಸುತ್ತದೆ. ಆದರೆ ನಟಿಯ ಹೊಟ್ಟೆಯೂ ಕಾಣಿಸುತ್ತಿಲ್ಲ ಎನ್ನುವುದು ಡಿಪ್ಪಿ ಫ್ಯಾನ್ಸ್‌ ಅಭಿಮತ.

Tap to resize

Latest Videos

undefined

ದೀಪಿಕಾ ಗರ್ಭಧಾರಣೆಗೆ ತಲೆ ಕೆಡಿಸಿಕೊಳ್ತಿರೋ ಫ್ಯಾನ್ಸ್​! ಮಗು ಹೆರುವುದು ನಿಜನಾ, ಅಲ್ವಾ ಅನ್ನೋದೇ ಡೌಟು...

ಇವೆಲ್ಲವುಗಳ ನಡುವೆಯೇ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿಯ ಫ್ಯಾನ್ಸ್​ಗೂ ಸಕತ್​ ಆಘಾತಕಾರಿಯಾಗಿರುವ ವಿಷಯವೊಂದು ನಿನ್ನೆ ನಡೆದಿದೆ. ಅದೇನೆಂದರೆ, ರಣವೀರ್​ ಸಿಂಗ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇದ್ದ ಮದುವೆಯ ಫೋಟೋಗಳನ್ನು ರಣವೀರ್​ ಸಿಂಗ್​ ಅವರು ಡಿಲೀಟ್​ ಮಾಡಿದ್ದಾರೆ. ಇದರಿಂದ  ದಂಪತಿ ನಡುವೆ ಕಿರಿಕ್ ಆಗಿರಬಹುದೇ ಎಂಬ ಅನುಮಾನ ಕಾದಿದೆ. ಪದ್ಮಾವತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿ ಜನಮೆಚ್ಚುಗೆ ಗಳಸಿದ್ದಾರೆ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ.  ಇಬ್ಬರೂ 5 ವರ್ಷಗಳಿಗೂ ಹೆಚ್ಚು ಕಾಲ ಈ ಜೋಡಿ ಹಾಯಾಗಿ ಸಂಸಾರ ಮಾಡಿಕೊಂಡಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿದೆ. ಈಗ ಇದ್ದಕ್ಕಿದ್ದಂತೆ ದೀಪಿಕಾ ಪತಿರಾಯ ತಮ್ಮ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಪೇಜ್‌ಗಳಿಂದ ಕಿತ್ತುಹಾಕಿದ್ದು ಯಾಕೆ? ಎಲ್ಲರಿಗೂ ಸಂಶಯವಂತೂ ಮೂಡಿದೆ.   

ಇದೀಗ ಈ ಬಗ್ಗೆ ರಣವೀರ್​ ಸಿಂಗ್​ ಟೀಂ ಸ್ಪಷ್ಟನೆ ಕೊಟ್ಟಿದೆ. ಸದ್ಯ ರಣವೀರ್​ ಅವರು  47 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಣವೀರ್ 133 ಪೋಸ್ಟ್‌ಗಳನ್ನು ಹೊಂದಿದ್ದಾರೆ.  ಅವರ ಖಾತೆಯಲ್ಲಿ ಕಾಣಿಸಿಕೊಂಡ ಕೊನೆಯ ಪೋಸ್ಟ್ ಏಪ್ರಿಲ್ 26 ರಂದು ಪೋಸ್ಟ್ ಮಾಡಲಾದ ನಟಿ ಆಲಿಯಾ ಭಟ್ ಅವರ ಜಾಹೀರಾತು. ಆದಾಗ್ಯೂ, ಅವರ ಖಾತೆಯು ಇನ್ನೂ ದಂಪತಿಗಳ ಕೆಲವು ಫೋಟೋಗಳನ್ನು ಒಳಗೊಂಡಿದೆ. ಇದೀಗ ಎಲ್ಲವೂ ಡಿಲೀಟ್​ ಆಗಿದೆ. ಅದರಲ್ಲಿ ಮದುವೆಯ ಫೋಟೋಗಳೂ ಸೇರಿವೆ. ಇದೀಗ ತಂಡ ಸ್ಪಷ್ಟನೆ ಕೊಟ್ಟಿದ್ದು, ಹಲವಾರು ಫೋಟೋ, ವಿಡಿಯೋಗಳು ಇದ್ದ ಹಿನ್ನೆಲೆಯಲ್ಲಿ, 2023 ರ ಹಿಂದಿನ ಎಲ್ಲಾ ಫೋಟೊ, ವಿಡಿಯೋಗಳನ್ನು ಆರ್ಕೈವ್ ಮಾಡಲಾಗಿದೆಯೇ ವಿನಾ ಡಿಲೀಟ್​ ಮಾಡಲಾಗಿಲ್ಲ.  ಅದರಲ್ಲಿ ಮದುವೆಯ ಫೋಟೋ, ವಿಡಿಯೋಗಳು ಇವೆಯಷ್ಟೇ. ಅಷ್ಟೇ ಅಲ್ಲದೇ ದೀಪಿಕಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಎಲ್ಲವೂ ಇನ್ನೂ ಇದೆ ಎಂದಿದೆ. ಇದನ್ನು ಕೇಳಿ ಸ್ಟಾರ್​ ದಂಪತಿಯ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಸಂಪೂರ್ಣ ಬೆತ್ತಲಾದ ರಣಬೀರ್​ ರಾಮನಾದ ಬಳಿಕ ಈಗ ಅರೆಬೆತ್ತಲ ರಾಣಿ ಅಂಜಲಿ ಸೀತಾಮಾತೆ! ಭಾರಿ ಆಕ್ರೋಶ
 

click me!