ರಾತ್ರಿಯ ಅಂಡರ್​ವೇರ್​​ ಗುಟ್ಟು ಪಬ್ಲಿಕ್​ನಲ್ಲೇ ರಟ್ಟು ಮಾಡಿದ ರಣವೀರ್​ ಸಿಂಗ್​: 'ಥೂ ಅಸಹ್ಯ' ಎಂದ ಜನರು!

Published : Mar 05, 2025, 05:51 PM ISTUpdated : Mar 05, 2025, 07:12 PM IST
ರಾತ್ರಿಯ ಅಂಡರ್​ವೇರ್​​ ಗುಟ್ಟು ಪಬ್ಲಿಕ್​ನಲ್ಲೇ ರಟ್ಟು ಮಾಡಿದ ರಣವೀರ್​ ಸಿಂಗ್​: 'ಥೂ ಅಸಹ್ಯ' ಎಂದ ಜನರು!

ಸಾರಾಂಶ

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿಗಳು ಮಗಳೊಂದಿಗೆ ಸಂತೋಷದಿಂದಿದ್ದಾರೆ. ಇತ್ತೀಚೆಗೆ, ರಣವೀರ್ ಸಿಂಗ್ ಅವರು ಹಳೆಯ ಸಂದರ್ಶನದಲ್ಲಿ ತಮ್ಮ ಅಂಡರ್‌ವೇರ್ ಧರಿಸದ ಅಭ್ಯಾಸದ ಬಗ್ಗೆ ಬಹಿರಂಗಪಡಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಟೀಕಿಸಿದ್ದಾರೆ. ಈ ಹಿಂದೆ ಫೋಟೋಶೂಟ್‌ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ರಣವೀರ್, ತಮ್ಮ ವೈಯಕ್ತಿಕ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ದೀಪಿಕಾ ಮದುವೆಯ ನಂತರವೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ.

 ಸದ್ಯ ಬಾಲಿವುಡ್​ನ ಕ್ಯೂಟ್​ ಕಪಲ್ ಎನ್ನಿಸಿರುವ  ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಇಬ್ಬರೂ ಮಗಳು ದುವಾ ಜೊತೆ ಕಾಲ ಕಳೆಯುತ್ತಿದ್ದಾರೆ. 2018ರಲ್ಲೇ ಹಸೆಮಣೆ ಏರಿರುವ ಈ ಜೋಡಿಗೆ ಆರು ವರ್ಷಗಳ ಬಳಿಕ ಮಗುವಾಗಿದ್ದು, ಸದ್ಯ ನಟಿ ಮಗುವಿನ ಆರೈಕೆಯಲ್ಲಿದ್ದಾರೆ. ಕೆಲ ಕಾಲ ಲವ್-ಡೇಟಿಂಗ್ ಬಳಿಕ ಮದುವೆ ಆಗಿದ್ದ ಈ ಜೋಡಿ ಇದಾಗಲೇ ತಮ್ಮ ಮದುವೆಯ ಹಲವಾರು ಗುಟ್ಟುಗಳನ್ನು ವೇದಿಕೆಯ ಮೇಲೆ ಹಂಚಿಕೊಂಡಿದ್ದಾರೆ. ಈಗಿನಷ್ಟು ಸೋಷಿಯಲ್​ ಮೀಡಿಯಾ ಕೆಲವು ವರ್ಷಗಳ ಹಿಂದೆ ಅಷ್ಟೊಂದು ಪ್ರಚಾರದಲ್ಲಿ ಇರದ ಹಿನ್ನೆಲೆಯಲ್ಲಿ ಹಳೆಯ ವಿಡಿಯೋಗಳೆಲ್ಲವೂ ಈಗ ಪುನಃ ಪುನಃ ವೈರಲ್​ ಆಗುವುದು ಸಾಮಾನ್ಯವಾಗಿದೆ. ಅದೇ ರೀತಿ, ರಣವೀರ್​ ಸಿಂಗ್​ ಅವರು ತಮ್ಮ ಅಂಡರ್​ವೇರ್​ ಗುಟ್ಟನ್ನು ಸಂದರ್ಶನವೊಂದರಲ್ಲಿ ಬಯಲು ಮಾಡಿರುವ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. ಪಬ್ಲಿಕ್​ನಲ್ಲಿಯೇ ಇದನ್ನು ಹೇಳಿರುವ ಕಾರಣದಿಂದ ನಟನಿಗೆ ಸೆನ್ಸ್​ ಇಲ್ವಾ ಎಂದು ಜನರು ಬೈದುಕೊಳ್ಳುತ್ತಿದ್ದಾರೆ.

ಸಂಪೂರ್ಣ ಬೆತ್ತಲಾಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದ ರಣವೀರ್​ ಇದಾಗಲೇ ಎರಡು ವರ್ಷಗಳ ಹಿಂದೆ  ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದರು. ಅದೇ ಸಮಯದಲ್ಲಿ ನಿರ್ದೇಶಕ ಕರಣ್​ ಜೋಹರ್​ ಅವರ ಕಾಫಿ ವಿತ್​ ಕರಣ್​ ಷೋನಲ್ಲಿ ರಣವೀರ್​ ಕಾಣಿಸಿಕೊಂಡಿದ್ದಾಗ ಈ ಅಂಡರ್​ವೇರ್​ ವಿಷಯವನ್ನು ತಿಳಿಸಿದ್ದರು. ಅಷ್ಟಕ್ಕೂ ಆ ಸಮಯದಲ್ಲಿ ಅವರು ಚಿತ್ರವೊಂದರ ಪ್ರಮೋಷನ್​ನಲ್ಲಿ ಇದ್ದರು. ಆದ್ದರಿಂದ ನಟಿ  ಅನುಷ್ಕಾ ಶರ್ಮಾ ಜೊತೆಗೆ ಈ ಷೋನಲ್ಲಿ ರಣವೀರ್​ ಸಿಂಗ್​ ಬಂದಿದ್ದರು. ಕರಣ್​ ಜೋಹರ್​ ಎಂದರೆ ಬೇರೆ ಹೇಳಬೇಕಾಗಿಲ್ಲ. ತೀರಾ ವೈಯಕ್ತಿಕ ವಿಷಯಗಳನ್ನು ಕೆದಕುವುದು, ಬೆಡ್​ರೂಮ್​ ವಿಷಯಗಳಿಗೇ ಹೆಚ್ಚು ಆದ್ಯತೆ ನೀಡುವುದು ಮಾಮೂಲು. ಅದೇ ಕಾರಣಕ್ಕೆ ಕೆಲವೊಂದು ಪರ್ಸನಲ್​ ವಿಷಯಗಳನ್ನು ಕೇಳಿದ್ದರು.

ರಣ್‌ಬೀರ್ ಕಪೂರ್​ ನನ್ನ ಬ್ರಾ... ಎಂದು ದೀಪಿಕಾ ಹೇಳ್ತಿದ್ದಂತೆಯೇ ಆಕೆಯನ್ನು ತಡೆದ ನಟ! ವಿಡಿಯೋ ವೈರಲ್​

ಆಗ ರಣವೀರ್​ ಸಿಂಗ್​ ಯಾವುದೇ ಮುಜುಗರ ಇಲ್ಲದೆಯೇ ಅದರ ಬಗ್ಗೆ ಮಾತನಾಡಿದ್ದರು. ನಾನು ಪ್ರತಿನಿತ್ಯ ರಾತ್ರಿ 10 ಗಂಟೆಯ ಬಳಿಕ ಅಂಡರ್​ವೇರ್​ ಧರಿಸುವುದಿಲ್ಲ ಎಂದಿದ್ದರು. ಅದಕ್ಕೆ ಕಾರಣವಕ್ಕೂ ಅವರು ಕೊಟ್ಟಿದ್ದರು.  ನನಗೆ ರಾತ್ರಿಯ ಸಮಯದಲ್ಲಿ ಅಂಡರ್​ವೇರ್​ ಹಾಕಿಕೊಂಡು ಮಲಗಿದರೆ  ಕನ್​ಫರ್ಟ್​ ಎನಿಸುವುದಿಲ್ಲ. ಅದಕ್ಕಾಗಿಯೇ ಹಾಕುವುದಿಲ್ಲ ಎಂದಿದ್ದರು. ಬೆತ್ತಲೇ ಫೋಟೋಶೂಟ್​ ಮಾಡಿಸಿಕೊಂಡ ನಟನಿಗೆ ಈ ವಿಷಯ ಓಪನ್​ ಆಗಿ ಹೇಳಲು ನಾಚಿಕೆ ಎನ್ನಿಸಲಿಲ್ಲ. ಆದರೆ ಪಕ್ಕದಲ್ಲಿಯೇ ಇದ್ದ ಅನುಷ್ಕಾ ಶರ್ಮಾ ಮುಜುಗರ ಪಟ್ಟುಕೊಂಡಿದ್ದರು.  
 
ಕೆಲ ದಿನಗಳ ಹಿಂದಷ್ಟೇ ರಣವೀರ್​ ಸಿಂಗ್​ ಫಸ್ಟ್​ ನೈಟ್​ ಕುರಿತು ಹೇಳಿದ್ದರು. ಅದರಲ್ಲಿ ಅವರು,  ನಮಗೆ ಮದುವೆಯ ದಿನ ಅಷ್ಟೊಂದು ಸುಸ್ತಾಗಿರಲಿಲ್ಲ. ಆದ್ದರಿಂದ ಆವತ್ತೇ ಫಸ್ಟ್‌ನೈಟ್ ಆಗಿತ್ತು. ನನಗೆ ದೀಪಿಕಾಗೆ ಮೂಡ್ ತರಿಸುವ ಟಿಪ್ಸ್​ ಗೊತ್ತಿತ್ತು.  ನಾವು ವ್ಯಾನಿಟಿ ವ್ಯಾನ್‌ನಲ್ಲಿ ಕೂಡ ಒಂದು ಸಲ ಅದನ್ನು ಮಾಡಿದ್ದೆವು' ಎಂದು ರಣವೀರ್​ ಹೇಳಿದ್ದರು. ಅಂದಹಾಗೆ, ದೀಪಿಕಾ ಪಡುಕೋಣೆ ಮದುವೆ ಬಳಿಕವೂ ತಮ್ಮ ನಟನಾವೃತ್ತಿಯನ್ನು ಮುಂದುವರೆಸಿದ್ದಾರೆ. ಕಳೆದ ವರ್ಷ, ಅಂದರೆ 27 ಜೂನ್ 2024ರಂದು ದೀಪಿಕಾ ಪಡುಕೋಣೆ, ಪ್ರಭಾಸ್, ಅಮಿತಾಬ್ ಬಚ್ಚನ್, ದುಲ್ಕರ್ ಸಲ್ಮಾನ್ ಹಾಗೂ ಕಮಲ್ ಹಾಸನ್ ತಾರಾಬಳಗದ 'ಕಲ್ಕಿ 2898 ಎಡಿ (Kalki 2898 AD) ಚಿತ್ರವು ಬಿಡುಗಡೆಯಾಗಿ ಸದ್ದು ಮಾಡಿತ್ತು. ದೀಪಿಕಾ ನಟಿಸಿರುವ ಲವ್ 4 ಎವರ್ (Love 4 Ever) ಚಿತ್ರವು ಈ ವರ್ಷ, ಅಂದರೆ 09 ನವೆಂಬರ್ 2025ರಂದು ಬಿಡುಗಡೆ ಆಗಲಿದೆ. 

ಹೇಳಲೇಬಾರದ ದೀಪಿಕಾಗೆ ಮೂಡ್ ತರಿಸುವ ಗುಟ್ಟು ಹೇಳಿದ ರಣವೀರ್ ಸಿಂಗ್; ಅದೀಗ ವೈರಲ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?