ಮೂರನೇ ತಿಂಗಳಿಗೆ ಕಾಲಿಟ್ಟ ಡಿಪ್ಪಿ ಮಗಳು ದುವಾ, ಮೊಮ್ಮಗಳಿಗಾಗಿ ಕೂದಲು ದಾನ ಮಾಡಿದ ಅಜ್ಜಿ

By Roopa Hegde  |  First Published Dec 11, 2024, 2:45 PM IST

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮಗಳು ದುವಾ ಹುಟ್ಟಿ ಮೂರು ತಿಂಗಳಾಗಿದೆ. ಒಂದ್ಕಡೆ ದೀಪಿಕಾ ಕೆಲಸಕ್ಕೆ ಮರಳಿದ್ರೆ ಮತ್ತೊಂದು ಕಡೆ ಅವರ ಅತ್ತೆ ಹಾಗೂ ದುವಾ ಅಜ್ಜಿ, ಮೊಮ್ಮಗಳಿಗಾಗಿ ಮಹಾನ್ ಕೆಲಸ ಮಾಡಿದ್ದಾರೆ. 
 


ಬಾಲಿವುಡ್ ಡಿಂಪಲ್ ಕ್ವೀನ್, ನಟಿ ದೀಪಿಕಾ ಪಡುಕೋಣೆ (Bollywood  dimple queen actress Deepika Padukone) ಹಾಗೂ ನಟ ರಣವೀರ್ ಸಿಂಗ್ (Ranveer Singh) ಮಗಳು ದುವಾ (Dua) ಈಗ ಸ್ಟಾರ್ ಕಿಡ್ ಪಟ್ಟಿಗೆ ಸೇರಿದ್ದಾಳೆ. ಡಿಸೆಂಬರ್ 8ರಂದು ದುವಾಗೆ ಮೂರು ತಿಂಗಳು ತುಂಬಿದೆ. ಇದನ್ನು ದೀಪಿ ಕುಟುಂಬ ಖುಷಿಯಿಂದ ಆಚರಿಸಿಕೊಂಡಿದೆ. ಮನೆಗೆ ಮಹಾಲಕ್ಷ್ಮಿ ಬಂದ ಸಂತೋಷದಲ್ಲಿರುವ ದುವಾ ಅಜ್ಜಿ ಅಂದ್ರೆ ರಣವೀರ್ ಸಿಂಗ್ ತಾಯಿ ಅಂಜು ಭವಾನಾನಿ, ಮೊಮ್ಮಗಳಿಗಾಗಿ ವಿಶೇಷ ಕೆಲಸ ಮಾಡಿದ್ದಾರೆ. ಮೊಮ್ಮಗಳಿಗೆ ಮೂರು ತಿಂಗಳಾದ ಸಂತೋಷದಲ್ಲಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಂಜು ಭವಾನಾನಿ ಫೋಟೋ ವೈರಲ್ ಆಗಿದೆ. ಅಂಜು ಭವಾನಾನಿ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೊದಲ ಫೋಟೋದಲ್ಲಿ ಅಂಜು ಹೆಣೆದ ಕೂದಲನ್ನು ಹಿಡಿದಿದ್ದು, ದಾನ ಎಂಬ ಶೀರ್ಷಿಕೆ ಹಾಕಿದ್ದಾರೆ. ಎರಡನೇ ಫೋಟೋದಲ್ಲಿ ಕೂದಲನ್ನು ಅಳತೆ ಮಾಡುತ್ತಿರೋದನ್ನು ಕಾಣ್ಬಹುದು. ಮೂರನೇ ಫೋಟೋದಲ್ಲಿ ತನ್ನ ಹೊಸ ಹೇರ್ ಸ್ಟೈಲ್ ತೋರಿಸಿದ್ದಾರೆ ಅಂಜು. ಹಾಗೆ ಕೊನೆಯದಾಗಿ ಒಂದು ನೋಟ್  ಹಂಚಿಕೊಂಡಿದ್ದಾರೆ. ಹ್ಯಾಪಿ ಮೂರನೇ ತಿಂಗಳ ಹುಟ್ಟುಹಬ್ಬ ನನ್ನ ಡಾರ್ಲಿಂಗ್ ದುವಾ ಎಂಬ ಶೀರ್ಷಿಕೆಯಲ್ಲಿ ಅಂಜು, ದೊಡ್ಡ ನೋಟ್ ಒಂದನ್ನು ಬರೆದಿದ್ದಾರೆ. ಈ ವಿಶೇಷ ದಿನವನ್ನು ಪ್ರೀತಿ ಮತ್ತು ಭರವಸೆಯೊಂದಿಗೆ ಸಂತೋಷದಿಂದ ಆಚರಿಸುತ್ತಿದ್ದೇವೆ. ದುವಾ ಬೆಳೆಯುತ್ತಿದ್ದು, ಸಂತೋಷ ಮತ್ತು ಸೌಂದರ್ಯವನ್ನು ನಾವು ಎಂಜಾಯ್ ಮಾಡ್ತಿದ್ದೇವೆ. ಈ ನನ್ನ ಸಣ್ಣ ಕಾರ್ಯ ಕಷ್ಟದ ಸಮಯದಲ್ಲಿರುವ ಯಾರಿಗಾದರೂ ಸಾಂತ್ವನ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನಂಬಿದ್ದೇನೆ ಎಂದು ಅಂಜು ಭವಾನಾನಿ ಬರೆದಿದ್ದಾರೆ. ಅಂಜು ಭವಾನಾನಿ ಈ ಕೆಲಸಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದುವಾ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದಾರೆ. 

Tap to resize

Latest Videos

ಖಡಕ್ ಡೈಲಾಗ್ ಹೇಳಿ ಅಬ್ಬರಿಸಿದ ಸುಬ್ಬಿ, ಓವರ್ ಆಯ್ತು ಎಂದ ಫ್ಯಾನ್ಸ್

ಸೆಪ್ಟೆಂಬರ್ 8, 2024ರಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಮುಖವನ್ನು ಇನ್ನೂ ಅಭಿಮಾನಿಗಳಿಗೆ ತೋರಿಸಿಲ್ಲ ದೀಪಿಕಾ. ಅಲ್ಲಿ ಇಲ್ಲಿ ಮಗುವನ್ನು ಎದೆಗವಚಿಕೊಂಡು ಹೋಗ್ತಿರುವ ವಿಡಿಯೋ ನೋಡಿಯೇ ಫ್ಯಾನ್ಸ್ ತೃಪ್ತರಾಗಿದ್ದಾರೆ. ಒಂದೆರಡು ತಿಂಗಳು ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕ್ತಾ, ಕಣ್ಮರೆಯಾಗಿದ್ದ ದೀಪಿಕಾ ಈಗ ತಮ್ಮ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಇತ್ತೀಚೆಗೆ ಅವರು ದಿಲ್ಜಿತ್ ದೋಸಾಂಜ್ ಅವರ ಮ್ಯೂಜಿಕ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ದಿಲ್ಜಿತ್ ದೋಸಾಂಜ್ ಅವರೊಂದಿಗೆ ದೀಪಿಕಾ ವೇದಿಕೆಯಲ್ಲಿ ಡಾನ್ಸ್ ಮಾಡಿದ್ದರು. ಅವರಿಗೆ ಕನ್ನಡ ಕಲಿಸಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಉರ್ಫಿಗೆ ಬಂತು ಇಂಥ ಆಫರ್‌! ತರಾಟೆ ತೆಗೆದುಕೊಂಡ ನಟಿ

ಗರ್ಭಿಣಿಯಿದ್ದಾಗ್ಲೂ ವೃತ್ತಿಯಲ್ಲಿ ಬ್ಯುಸಿ ಇದ್ದ ದೀಪಿಕಾ, ಅಮ್ಮನಾದ್ಮೇಲೂ ಸುಮ್ಮನೆ ಕುಳಿತಿಲ್ಲ. ಸದ್ಯವೇ ಅವರು ಕಲ್ಕಿ 2898 AD 2 ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಅವರು ಅಭಿನಯದ ಸಿಂಗಮ್  ಎಗೇನ್ ಈಗಾಗಲೇ ಬಿಡುಗಡೆಯಾಗಿದೆ. ಇನ್ನು ದುವಾ ತಂದೆ ರಣವೀರ್ ಸಿಂಗ್, ಕಳೆದ ತಿಂಗಳು  ರೋಹಿತ್ ಶೆಟ್ಟಿ ಸಿನಿಮಾ ಸಿಂಗಮ್ ಎಗೇನ್ ನಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ನಿರ್ದೇಶಕ ಆದಿತ್ಯ ಧರ್ ಸಿನಿಮಾದಲ್ಲಿ ಕೆಲಸ ಮಾಡ್ತಿದ್ದಾರೆ. ಇದಲ್ಲದೆ, ಅವರು ಫರ್ಹಾನ್ ಅಖ್ತರ್ ಅವರ ಡಾನ್ 3 ನಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ದುವಾ ಬಂದ್ಮೇಲೆ ದೀಪಿಕಾ ಹಾಗೂ ರಣವೀರ್ ಸಿಂಗ್ ಪೇರೆಂಟಿಂಗ್ ಎಂಜಾಯ್ ಮಾಡ್ತಿದ್ದಾರೆ. ಆಗಾಗ ಮಗಳ ಮೇಲಿನ ಪ್ರೀತಿಯನ್ನು ರಣವೀರ್, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿರುತ್ತಾರೆ. 

click me!