
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ 'ಗೋಲಿಯೋಂಕಿ ರಾಸಲೀಲಾ, ರಾಮ್ ಲೀಲಾ' ಚಿತ್ರವು 2013ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿರುವುದು ಗೊತ್ತೇ ಇದೆ. ಈ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದು, ಚಿತ್ರವು ಆ ಕಾಲದಲ್ಲಿ ಭಾರೀ ಕಲೆಕ್ಷನ್ ಜತೆ, ಸಖತ್ ಸುದ್ದಿ ಮಾಡಿತ್ತು. ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಕೆಮೆಸ್ಟ್ರಿ ಹಲವರಿಗೆ ತುಂಬಾ ಇಷ್ಟವಾಗಿತ್ತು.
ಆದರೆ, ಈ ಚಿತ್ರಕ್ಕೆ ಮೊದಲು ರಣವೀರ್ ಸಿಂಗ್‌ಗೆ ಜೋಡಿಯಾಗಿದ್ದು ನಟಿ ದೀಪಕಾ ಪಡುಕೋಣೆ ಅಲ್ಲ, ಬದಲಿಗೆ ಕರೀನಾ ಕಪೂರ್.
ಹೌದು, ಹಲವರಿಗೆ ಇದು ಗೊತ್ತಿರಲಿಕ್ಕಿಲ್ಲ! ಕರೀನಾ ಕಪೂರ್ ಮತ್ತು ರಣವೀರ್ ಸಿಂಗ್ ಜೋಡಿ ಆಯ್ಕೆಮಾಡಿಕೊಂಡು ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಶುರು ಮಾಡುವುದರಲ್ಲಿದ್ದರು. ಕರೀನಾ ಆಯ್ಕೆಯನ್ನು ಪಕ್ಕಾ ಮಾಡಿಕೊಂಡು ಅನೌನ್ಸ್‌ಮೆಂಟ್ ಕೂಡ ಮಾಡಿಯಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಎಂಬಂತೆ, ಶೂಟಿಂಗ್‌ಗೆ ಒಂದೇ ವಾರ ಇರುವಾಗ, ನಟಿ ಕರೀನಾ ಕಪೂರ್ ಈ ಚಿತ್ರವನ್ನು ನಿರಾಕರಿಸಿಬಿಟ್ಟರು. ಕಾರಣ ಏನೋ ಗೊತ್ತಿಲ್ಲ, ಆದರೆ ನಟಿ ಕರೀನಾ ಕಪೂರ್ ಈ ಚಿತ್ರವನ್ನು ಮಾಡಲು ನನಗೆ ಸಾಧ್ಯವಿಲ್ಲ ಎಂದುಬಿಟ್ಟರು.
ಮಾತೆಂದ್ರೆ ಪ್ರಕಾಶ್ ರಾಜ್ಗೆ ಬಹಳ ಇಷ್ಟ- ಮೂಕಿಗೂ ಮಾತು ಕಲಿಸಿದ್ದ: ಮಗನ ಕುರಿತು ಅಮ್ಮ ಹೇಳಿದ್ದೇನು?
ಬಳಿಕ ಈ ಬಗ್ಗೆ ಮೀಟಿಂಗ್ ಆದಾಗ, ಸಂಜಯ್ ಲೀಲಾ ಬನ್ಸಾಲಿ ಅವರಿಗೆ ನಟಿ ಕರೀನಾ ಕಪೂರ್ ಜಾಗಕ್ಕೆ ನಟಿ ದೀಪಿಕಾ ಪಡುಕೋಣೆ ಅವರನ್ನು ಸೂಚಿಸಿದ್ದು ನಟ ರಣವೀರ್ ಸಿಂಗ್. ಈ ವಿಷಯವನ್ನು ಸ್ವತಃ ರಣವೀರ್ ಸಿಂಗ್ ರಿವೀಲ್ ಮಾಡಿದ್ದಾರೆ. ನಟಿ ಕರೀನಾ ಈ ಚಿತ್ರವನ್ನು ರಿಜೆಕ್ಟ್ ಮಾಡಿದಾಗ, ನಟ ರಣವೀರ್ ಸಿಂಗ್ ದೀಪಿಕಾರನ್ನು ರೆಫರ್ ಮಾಡಲು ಕಾರಣವಾಗಿದ್ದು ದೀಪಿಕಾಳ ಅದಕ್ಕೂ ಹಿಂದಿನ ಚಿತ್ರ 'ಕಾಕ್‌ಟೈಲ್' ಎನ್ನಲಾಗಿದೆ. ಕಾಕ್‌ಟೈಲ್ ಚಿತ್ರದಲ್ಲಿ ನಟಿ ದೀಪಿಕಾರ ನಟನೆಗೆ ಮನಸೋತಿದ್ದ ರಣವೀರ್ ಸಿಂಗ್, ರಾಮ್ ಲೀಲಾ ಚಿತ್ರಕ್ಕೆ ದೀಪಿಕಾ ಸೂಕ್ತ ನಟಿ ಎಂದರಂತೆ.
ಇಬ್ಬರು ಹಿಂದೂ ಪತ್ನಿಯರಿಗೆ ಡಿವೋರ್ಸ್ ಕೊಟ್ಟ ಆಮೀರ್ ಖಾನ್ ಬಾಳಲ್ಲಿ 3ನೇ ಎಂಟ್ರಿ ಈ ನಟಿ?
ಹೀಗೆ, ರಾಮ್ ಲೀಲಾ ಚಿತ್ರಕ್ಕೆ ರಣವೀರ್ ಜೋಡಿಯಾಗಿ ದೀಪಿಕಾ ಬಂದು ಬಳಿಕ ಚಿತ್ರ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಈ ಚಿತ್ರದ ಶೂಟಿಂಗ್ ವೇಳೆ ದೀಪಿಕಾ ಮತ್ತು ರಣವೀರ್ ನಡುವೆ ಲವ್ ಶುರುವಾಗಿ ಬಳಿಕ ಅದು ಮದುವೆಗೆ ಮುನ್ನುಡಿ ಬರೆದಿದೆ. ಈಗ ರಣವೀರ್-ದೀಪಿಕಾ ರಿಯಲ್ ಲೈಫ್ ಜೋಡಿ ಕೂಡ ಎಂಬುದು ಎಲ್ಲರಿಗೂ ಗೊತ್ತು. ಅಂದು ರಾಮ್ ಲೀಲಾ ಚಿತ್ರದಲ್ಲಿ ರೀಲ್ ಜೋಡಿಯಾಗಿ ನಟಿಸಿ ಬಳಿಕ ರಿಯಲ್ ಜೋಡಿಯಾಗಿ ಬದಲಾದ ದೀಪಿಕಾ-ರಣವೀರ್, ಇಂದೂ ಕೂಡ ತಮ್ಮ ತಮ್ಮ ಕೆರಿಯರ್ ಮುಂದುವರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.