ನಟ ಪ್ರಕಾಶ್ ರಾಜ್ ಅವರ ಕುರಿತು ತಾಯಿ ಸ್ವರ್ಣಲತಾ ಅವರು ಕೆಲವೊಂದು ಇಂಟರೆಸ್ಟಿಂಗ್ ವಿಷ್ಯ ಶೇರ್ ಮಾಡಿಕೊಂಡಿದ್ದಾರೆ. ಅವರು ಹೇಳಿದ್ದೇನು?
ಕಳೆದ ಕೆಲವು ದಿನಗಳಿಂದ ಚಿತ್ರನಟ ಪ್ರಕಾಶ್ ರಾಜ್ ಬಹಳ ಸುದ್ದಿಯಲ್ಲಿರುವ ವ್ಯಕ್ತಿ. ಹೆಚ್ಚಾಗಿ ಕಾಂಟ್ರವರ್ಸಿ ಮಾತುಗಳಿಂದಲೇ ಸದ್ದು ಮಾಡುತ್ತಿರುವ ಪ್ರಕಾಶ್ ರಾಜ್ ಅವರ ಬಾಲ್ಯದ ಇಂಟರೆಸ್ಟಿಂಗ್ ಮಾಹಿತಿಯನ್ನು ಅವರ ತಾಯಿ ರಿಯಾಲಿಟಿ ಷೋ ಒಂದರಲ್ಲಿ ರಿವೀಲ್ ಮಾಡಿದ್ದಾರೆ. ನಟಿ ಸುಹಾಸಿನಿ ನಡೆಸಿಕೊಟ್ಟ ತಮಿಳು ರಿಯಾಲಿಟಿ ಷೋ ಒಂದರಲ್ಲಿ ಪ್ರಕಾಶ್ ಅವರು ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಕುರಿತು ತಾಯಿ ಸ್ವರ್ಣಲತಾ ಮಾತನಾಡಿದ್ದಾರೆ. ಹಳೆಯ ವಿಡಿಯೋ ಇದಾಗಿದ್ದು, ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಪ್ರಕಾಶ್ ರಾಜ್ ಕುರಿತು ಅಮ್ಮ ಸ್ವರ್ಣಲತಾ ಹೇಳಿದ್ದನ್ನು ಅವರ ಮಾತಿನಲ್ಲೇ ಕೇಳಿ:
'1965ರಲ್ಲಿ ಪ್ರಕಾಶ್ ಹುಟ್ಟಿದ್ದ. ಹುಟ್ಟಿದಾಗ ತುಂಬಾ ಮುದ್ದಾಗಿದ್ದ. ತುಂಬಾ ಸ್ವೀಟಾಗಿದ್ದ. ತಂದೆಗೆ ಅವನು ಅಂದ್ರೆ ತುಂಬಾ ಇಷ್ಟ. ಏಕೆಂದ್ರೆ ಅವರ ಹಾಗೆ ಇದ್ದ ಪ್ರಕಾಶ್. ಅದಕ್ಕಾಗಿ ಯಾವಾಗ್ಲೂ ಅವನನ್ನು ಎತ್ತಿಕೊಂಡೇ ಇರುತ್ತಿದ್ದರು. ನಮ್ಮ ಯಜಮಾನ್ರು ತುಂಬಾ ಸೋಮಾರಿ. ನಾನು ಕೆಲಸ ಮಾಡುತ್ತಿದ್ದೆನಲ್ಲ (ನರ್ಸ್), ಅದಕ್ಕೆ ಅವರು ಕೆಲಸ ತಪ್ಪಿಸುತ್ತಿದ್ದರು. ಮೂರು ಮಕ್ಕಳು, ಮೂವರು ತಂಗಿಯರು, ಒಬ್ಬ ತಂಗಿ, ಅಪ್ಪ ಮತ್ತು ನಮ್ ಯಜಮಾನ್ರು. ಇವರೆಲ್ಲರನ್ನು ನಾನು ಡ್ಯೂಟಿ ಮಾಡುವ ಸಂಬಳದಲ್ಲಿಯೇ ಸಾಕ್ತಾ ಇದ್ದೆ. ಅದು ಹೇಗೆ ಸಂಸಾರ ನಡೆಸಿದೆ ಎಂದು ಈಗ ನೆನಪಿಸಿಕೊಂಡ್ರೆ ಈಗ್ಲೂ ಗೊತ್ತಾಗ್ತಿಲ್ಲ' ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಅಮ್ಮ ಸ್ವರ್ಣಲತಾ.
undefined
ಇತಿಹಾಸ ಸೃಷ್ಟಿಸಿದ ನಟಿ ಕಂಗನಾ ರಣಾವತ್: 50 ವರ್ಷಗಳ ದಾಖಲೆ ಮುರಿದು ರಾವಣ ದಹನ!
ಪ್ರಕಾಶ್ ರಾಜ್ ಅವರ ನರ್ಸರಿ ಸ್ಕೂಲ್ ದಿನಗಳ ಕುರಿತು ಹೇಳಿದ ಅವರು, 'ಪ್ರಕಾಶ್ನನ್ನು ನರ್ಸರಿ ಸ್ಕೂಲ್ಗೆ ಸೇರಿಸಿದೆ. ಇವನು ಮಾತನಾಡೋದು ಬಹಳ ಜಾಸ್ತಿ. ಇವನ ಪಕ್ಕ ಒಬ್ಬ ಮೂಕ ಹುಡುಗಿ ಇದ್ದಳು. ಆ ಹುಡುಗಿಗೂ ಇವ್ನು ಮಾತನಾಡುವುದನ್ನು ಕಲಿಸಿದ. ಮಾತನಾಡೋದ್ರಲ್ಲಿ ಇವ್ನು ಅಷ್ಟು ಫೇಮಸ್ಸು' ಎಂದಿದ್ದಾರೆ.
ಇನ್ನು ಪ್ರಕಾಶ್ ಅವರು ಪುಸ್ತಕ ಪ್ರೀತಿಯ ಕುರಿತು ಹೇಳಿದ ಸ್ವರ್ಣಲತಾ ಅವರು, 'ಬುಕ್ಸ್, ಪೇಪರ್ ಎಂದ್ರೆ ಪ್ರಕಾಶ್ಗೆ ಸಿಕ್ಕಾಪಟ್ಟೆ ಇಷ್ಟ. ಟಾಯ್ಲೆಟ್ಗೆ ಹೋಗಬೇಕಾಗಿದ್ರೂ ಇವನ ಕೈಗೆ ಪೇಪರ್ ಕೊಡಬೇಕಿತ್ತು' ಎಂದಿದ್ದಾರೆ. ಇದೇ ವೇಳೆ ಪ್ರಕಾಶ್ ಅವರ ಕೋಪದ ಕುರಿತು ಮಾತನಾಡಿದ ಅವರು, 'ಪ್ರಕಾಶ್ಗೆ ಚಿಕ್ಕ ವಯಸ್ಸಿನಿಂದ್ಲೂ ಸಿಕ್ಕಾಪಟ್ಟೆ ಕೋಪ. ಈಗಲೂ ಆ ಕೋಪ ಇದೆ. ಕೋಪ ಬಂದ್ರೆ ಊಟ ಮಾಡಲ್ಲ ಹೋಗು ಅಂತಾನೆ. ಆದ್ರೆ ಕೋಪ ಬಂದರೆ ಒಂದು ನಿಮಿಷ ಮಾತ್ರ. ಸ್ವಲ್ಪ ಹೊತ್ತು ಮಾತ್ರ ಇರುತ್ತೆ. ಆಮೇಲೆ ಹೋಗಿ ಬಿಡುತ್ತೆ' ಎಂದಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ನಟಿ ಅರೆಸ್ಟ್
ಅಮ್ಮನ ಬಗ್ಗೆ ಪ್ರಕಾಶ್ ರಾಜ್ ಅವರಿಗೆ ಅಪಾರ ಪ್ರೀತಿ ಇದೆ. ಅದರ ಬಗ್ಗೂ ಸ್ವರ್ಣಲತಾ ಅವರು ಇದೇ ಷೋನಲ್ಲಿ ಹೇಳಿಕೊಂಡಿದ್ದಾರೆ. 'ನನಗೆ ಈಗ 77 ವರ್ಷ ವಯಸ್ಸು. ನನ್ನನ್ನು ಆತ ದೇವತೆ ಥರ ನೋಡ್ತಾನೆ. ತಾಯಿಗಿಂತ ಹೆಚ್ಚು ಏನೂ ಇಲ್ಲ ಅನ್ನುವುದು ಅವನ ಭಾವನೆ. ನನ್ನ ನೋವು-ನಲಿವು ಎಲ್ಲದ್ದಕ್ಕೂ ನನ್ನ ಜೊತೆ ಇರುತ್ತಾನೆ. ನಾನು ಪುಣ್ಯವಂತೆ, ಇಂಥ ಮಗನನ್ನು ಪಡೆದಿದ್ದಕ್ಕೆ' ಎಂದಿದ್ದಾರೆ.