Rani Mukherjee: ಸಲ್ವಾರ್​ ಕಮೀಜ್​ಗೆ ಬಾತ್​ರೂಂ ಚಪ್ಪಲ್ಲಾ? ಮೇಡಂ ಏನಿದು ಅಂತಿದ್ದಾರೆ ಟ್ರೋಲಿಗರು !

By Suvarna News  |  First Published Mar 22, 2023, 9:05 PM IST

‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’ ಚಿತ್ರದ ಸಂಭ್ರಮದಲ್ಲಿರುವ ನಟಿ ರಾಣಿ ಮುಖರ್ಜಿ ಚಪ್ಪಲಿ ಸಲುವಾಗಿ ಟ್ರೋಲ್​ ಆಗುತ್ತಿದ್ದಾರೆ. ಏನಿದು ವಿಷಯ? 
 


ರಾಣಿ ಮುಖರ್ಜಿ (Rani Mukherjee) ಅವರ  ಸಿನಿಮಾ ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’ ಅಬ್ಬರಿಸುತ್ತಿದೆ.    ಭಾರತಕ್ಕಿಂತಲೂ ಹೆಚ್ಚಾಗಿ  ನಾರ್ವೆಯಲ್ಲಿ ಇದು ಭಾರಿ ಸದ್ದು ಮಾಡುತ್ತಿದೆ.  ಸಿನಿಮಾ ನಾರ್ವೇಯಲ್ಲಿ ತೆರೆಕಂಡು ಸೂಪರ್​ ಹಿಟ್​ ಆಗಿದೆ. ನಾರ್ವೇಯಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ವೀಕೆಂಡ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಖ್ಯಾತಿ ಈ ಸಿನಿಮಾಕ್ಕೆ ಸೇರಿದೆ. ಈ ಚಿತ್ರವು ಚಲನಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ.  ಚಿತ್ರವು ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅನುರೂಪ್ ಭಟ್ಟಾಚಾರ್ಯ (Anup Bhattacharya) ಮತ್ತು ಸಾಗರಿಕಾ ಭಟ್ಟಾಚಾರ್ಯ (Sagarika Bhattacharya) ಎಂಬ ದಂಪತಿಯ ನೈಜ ಜೀವನವನ್ನು ಇದು ಆಧರಿಸಿದೆ. 2007 ರಲ್ಲಿ, ಈ ದಂಪತಿ ಮದುವೆಯಾಗುತ್ತಾರೆ.  ತಮ್ಮ ಹೊಸ ವೈವಾಹಿಕ ಜೀವನವನ್ನು ಪ್ರಾರಂಭಿಸಲು ನಾರ್ವೆಗೆ ತೆರಳುತ್ತಾರೆ.  ದಂಪತಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಒಂದು  ಸಂಜೆ, ತಾಯಿ ತನ್ನ ಮಗನಿಗೆ  ಹೀಗೆ ಮಾತನಾಡುತ್ತಾ ತಮಾಷೆಗಾಗಿ ಕೆನ್ನೆಗೆ ಹೊಡೆಯುತ್ತಾಳೆ.  ನಾರ್ವೇಜಿಯನ್ ಮಕ್ಕಳ ಕಲ್ಯಾಣ ಸೇವೆಗಳಿಗೆ (NCW) ಈ ಮಾಹಿತಿಯನ್ನು ಯಾರೋ ನೀಡುತ್ತಾರೆ. ಮಗನ ಕೆನ್ನೆಗೆ ಅಮ್ಮ ಹೊಡೆದಿರುವುದಾಗಿ ದೂರು ದಾಖಲಾಗುತ್ತದೆ. ಇದಾದ ಮೇಲೆ ಆಗುವುದೆಲ್ಲವೂ ಭಯಾನಕ ಚಿತ್ರಣ. ಈ ಚಿತ್ರದಲ್ಲಿನ ರಾಣಿಯವರ ಅಭಿಯನಕ್ಕೆ ಜನರು ಮನಸೋತಿದ್ದಾರೆ. 

ಬಂಟಿ ಔರ್ ಬಾಬ್ಲಿ 2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಾಣಿ ಮುಖರ್ಜಿ (Rani Mukharji)   ಮಿಸೆಸ್ ಚಟರ್ಜಿ Vs ನಾರ್ವೆ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಕಳೆದ ವಾರ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು.  2.47 ನಿಮಿಷಗಳ ಟ್ರೇಲರ್​ (Trailer) ಇವರ ಫ್ಯಾನ್ಸ್​ ಫಿದಾ ಆಗಿದ್ದರು. ಇದರಲ್ಲಿ ರಾಣಿ ಮುಖರ್ಜಿ ಮತ್ತು ಅವರ ಕುಟುಂಬವು ನಗುತ್ತಾ ಆಟವಾಡುತ್ತಿದ್ದರು.  ಆದರೆ ಏಕಾಏಕಿ  ಇಡೀ ಪ್ರಪಂಚವೇ ಇದ್ದಕ್ಕಿದ್ದಂತೆ ಕುಸಿಯುವ ಅನುಭವ. ಅವರ ಇಬ್ಬರೂ ಮಕ್ಕಳನ್ನು ಅವರಿಂದ ದೂರವಿಡಲಾಗುತ್ತದೆ.  ತನ್ನ ಮಕ್ಕಳನ್ನು ಮರಳಿ ಪಡೆಯಲು ತಾಯಿಯ ಹೋರಾಟ ಪ್ರಾರಂಭವಾಗುತ್ತದೆ.  ಮಕ್ಕಳಿಗಾಗಿ ತಾಯಿ ಪಡುವ ಸಂಕಷ್ಟಗಳ ಸರಮಾಲೆ ಈ ಚಿತ್ರದ ಕಥಾವಸ್ತು. ಟ್ರೇಲರ್‌ನಲ್ಲಿ ಅಮೋಘ ಅಭಿನಯ ನೀಡಿರುವ ರಾಣಿ ಮತ್ತೊಮ್ಮೆ ಅಭಿಮಾನಿಗಳ ಮನವನ್ನು ಆಳಲು ಬರುತ್ತಿದ್ದಾರೆ.  ಚಿತ್ರದ ನಿರ್ದೇಶಕರು ಆಶಿಮಾ ಚಿಬ್ಬರ್ (Ashima chibber) ಮತ್ತು ನಿರ್ಮಾಪಕ ನಿಖಿಲ್ ಅಡ್ವಾಣಿ. ಈ ಸಿನಿಮಾವನ್ನು ಎಮ್ಮೆ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

Tap to resize

Latest Videos

ಕಣ್ಣೆದುರಿಗೇ ಮಕ್ಕಳು ಕಿಡ್ನಾಪ್ ಆದ್ರೆ? ಅಮ್ಮನ ನೋವು, ಹೋರಾಟ ಹೇಳೋ ಮೂವಿ Mrs Chatterjee Vs Norway

ಸಿನಿಮಾ ಸಕ್ಸಸ್​ ಬೆನ್ನಲ್ಲೇ ರಾಣಿ ಮುಖರ್ಜಿ ಅವರು  ತಮ್ಮ ಹುಟ್ಟುಹಬ್ಬವಾದ ಮಾರ್ಚ್ 21 ರಂದು  ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ರಾಣಿ ಅಸ್ಸಾಂನ ಕಾಮಾಖ್ಯ (Kamakhya) ದೇವಸ್ಥಾನದಲ್ಲಿ ಆಶೀರ್ವಾದ ಪಡೆಯಲು ಹೊರಟಿದ್ದರು. ಈ ಸಂದರ್ಭದಲ್ಲಿ ಅವರು  ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದರು.  ಇದರಲ್ಲಿ ಮುದ್ದಾಗಿಯೇ ಕಾಣುತ್ತಿದ್ದರು. ಆದರೆ  ನೆಟಿಜನ್‌ಗಳು ಮಾತ್ರ ಬಿಡುತ್ತಾರೆಯೆ? ಅವರ ಚಪ್ಪಲಿಯ ಮೇಲೆ ಟ್ರೋಲಿಗಳ ಕಣ್ಣು ಬಿದ್ದಿದ್ದು, ಅವರೀಗ ಟ್ರೋಲ್​ ಆಗುತ್ತಿದ್ದಾರೆ. ಅಷ್ಟಕ್ಕೂ ಅವರು ಧರಿಸಿದ್ದು ಬಾತ್​ರೂಮ್​ ಚಪ್ಪಲಿ (bathroom Slippers) ಎನ್ನುವುದು ನೆಟ್ಟಿಗರ ಮಾತು. ಅವರ ಗುಲಾಬಿ ಬಾತ್ರೂಮ್ ಚಪ್ಪಲಿಗಳು ಅವರ ಸಾಂಪ್ರದಾಯಿಕ ಉಡುಪಿನೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದು,  ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಒಬ್ಬ ಬಳಕೆದಾರ, 'ಆ ಚಪ್ಪಲಿಗಳು (Slippers) ಯಾವುವು?' ಎಂದು ಬರೆದರು, ಮತ್ತೊಬ್ಬರು 'ಇತ್ತೀಚಿಗೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ (Dressing Sense) ಏನಾಯಿತು ಎಂದು ಬರೆದಿದ್ದಾರೆ.

Kriti Sanon: ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಮೂಗಿನದ್ದೇ ಚರ್ಚೆ- ಅಂಥದ್ದೇನಿದೆ?

 

click me!