ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮೊದಲ ಬಾರಿಗೆ ಮಗಳ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಜೋಡಿ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾಗಿ ವರ್ಷದೊಳಗೆ ಮೊದಲ ಮಗು ಸ್ವಾಗತಿಸುವ ಮೂಲಕ ಪೋಷಕರಾಗಿರುವ ರಣಬೀರ್ ಮತ್ತು ಅಲಿಯಾ ಈ ಹಂತವನ್ನು ಎಂಜಾಯ್ ಮಾಡುತ್ತಿದ್ದಾರೆ. ಸ್ಟಾರ್ ಜೋಡಿ ಮುದ್ದಾದ ಮಗಳಿಗೆ ರಾಹಾ ಕಪೂರ್ ಎಂದು ಹೆಸರಿಟ್ಟಿದ್ದಾರೆ. ಇದುವರೆಗೂ ರಣಬೀರ್ ಮತ್ತು ಅಲಿಯಾ ಜೋಡಿ ಮಗಳ ಫೋಟೋವನ್ನು ಎಲ್ಲೂ ರಿವೀಲ್ ಮಾಡಿಲ್ಲ. ಆದರೆ ಆಗಾಗ ಮಗಳ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ರಣಬೀರ್ ಕಪೂರ್ ರಾಹಾ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ, ತಂದೆಯಾಗಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.
ಮಗಳ ಆ ನಗು ನೋಡಿ ನನ್ನ ಹೃದಯ ಬ್ರೇಕ್ ಆಯಿತು ಎಂದು ಹೇಳಿದ್ದಾರೆ. ಮಗಳ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ರಣಬೀರ್ ಸದ್. ತು ಜೂತಿ ಮೈನ್ ಮಕ್ಕರ್ ಸಿನಿಮಾದ ಪ್ರಚಾರದಲ್ಲಿದ್ದಾರೆ. ಈ ವೇಳೆ ರಣಬೀರ್ ಮಗಳ ಬಗ್ಗೆ ಮಾತನಾಡಿದ್ದಾರೆ. ಮನೆಯಿಂದ ಹೊರಬರಲು ಕೂಡ ಇಷ್ಟವಾಗುವುದಿಲ್ಲ ಎಂದು ರಣಬೀರ್ ಹೇಳಿದ್ದಾರೆ. ಮಗಳ ಫೋಟೋವನ್ನು ನೋಡುತ್ತಲೇ ಇರುತ್ತೇನೆ ಎಂದು ರಣಬೀರ್ ಬಹಿರಂಗ ಪಡಿಸಿದ್ದಾರೆ.
ರಣಬೀರ್ ಮತ್ತು ನಟಿ ಆಲಿಯಾ ಭಟ್ ದಂಪತಿ ಕಳೆದ ವರ್ಷ ಏಪ್ರಿಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೆಲವೇ ತಿಂಗಳಲ್ಲಿ ಅಂದರೆ ನವೆಂಬರ್‌ನಲ್ಲಿ ಮಗಳು ರಾಹಾಳನ್ನು ಸ್ವಾಗತಿಸಿದರು. ಇದೀಗ ರಣಬೀರ್ ಮಗಳ ಬಗ್ಗೆ ಮಾತನಾಡಿದ್ದಾರೆ. 'ನಾನು ಮನೆಯಿಂದ ಹೊರ ಬರಲು ಸಹ ಬಯಸುವುದಿಲ್ಲ. ಬೆಳಗ್ಗೆ ನಾನು ವಿಮಾನ ಹತ್ತುವ ಮುನ್ನ 20 ನಿಮಿಷಗಳು ತುಂಬಾ ಖುಷಿ ನೀಡಿತು. ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಯಾವಾಗಲು ಆಕೆಯ ಫೋಟೋ ನೋಡುತ್ತಿರುತ್ತೇನೆ' ಎಂದು ಹೇಳಿದ್ದಾರೆ.
ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ; ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ರಣಬೀರ್ ಕಪೂರ್ ಹೇಳಿಕೆ
'ನಾನು ಮನೆಯಲ್ಲಿದ್ದಾಗಲೆಲ್ಲಾ ಯಾವಾಗಲೂ ಅವಳ ಪಕ್ಕದಲ್ಲಿಯೇ ಇರುತ್ತೇನೆ. ಅದು ಒಂದು ತರ ಮ್ಯಾಜಿಕ್ ಆಗಿದೆ. ಕಳೆದ ಎರಡು ವಾರಗಳಲ್ಲಿ ಅವಳು ನಗಲು ಪ್ರಾರಂಭಿಸಿದಳು. ಮತ್ತು ಆ ನಗುವನ್ನು ನೋಡಿದಾಗ ನಿಮ್ಮ ಹೃದಯ ಬ್ರೇಕ್ ಆಗುತ್ತದೆ. ಇದು ಪ್ರೀತಿಯ ಹೊಸ ತಿಳುವಳಿಕೆಯಂತೆ ಭಾಸವಾಗುತ್ತದೆ. ಪ್ರೀತಿಯ ಭಾಷೆಯ ಬಗ್ಗೆ ನೀವು ನನ್ನನ್ನು ಕೇಳುತ್ತಿದ್ದೀರಿ, ಆದರೆ ಮಗುವಿಗೆ ಭಾಷೆ ಇಲ್ಲ. ಇದು ನೀವು ವಿವರಿಸಲು ಸಾಧ್ಯವಿಲ್ಲದ ಪ್ರೀತಿ' ಎಂದು ಹೇಳಿದ್ದಾರೆ.
ಬಳಿಕ ರಣಬೀರ್ ಪತ್ರಕರ್ತರೊಬ್ಬರಿಗೆ ನೀವು ತಂದೆ ಆಗಿದ್ದೀರಾ ಎಂದು ಕೇಳಿದರು. ಅವರು ಇಲ್ಲ ಎಂದು ಹೇಳಿದರು. ನಂತರ ರಣಬೀರ್, 'ನಾನು ನಿಮಗೆ ಹಾರೈಸುತ್ತೇನೆ, ಏಕೆಂದರೆ ಇದು ವಿಶ್ವದ ಅತ್ಯುತ್ತಮ ಭಾವನೆಯಾಗಿದೆ' ಎಂದು ಹೇಳಿದರು.
Sourav Ganguly ಬಯೋಪಿಕ್ಗೆ ಕೊನೆಗೂ ಹೀರೋ ಫಿಕ್ಸ್, ಕುತೂಹಲಕ್ಕೆ ತೆರೆ
ರಣಬೀರ್ ಕಪೂರ್ ಸದ್ಯ ತು ಜೂತಿ ಮೇನ್ ಮಕ್ಕರ್ ಸಿನಿಮಾದ ಪ್ರಮೋಷನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಜೊತೆ ನಟಿಸಿದ್ದಾರೆ. ಮಾರ್ಚ್ 8ಕ್ಕೆ ಸಿನಿಮಾ ರಿಲೀಸ್ಆಗುತ್ತಿದೆ. ಮೊದಲ ಬಾರಿಗೆ ರಣಬೀರ್ ಮತ್ತು ಶ್ರದ್ದಾ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ರಣಬೀರ್ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅನಿಮಲ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂದೀಪ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಅನಿಮಲ್ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗುತ್ತಿದೆ.