ನನ್ನ ಬಟ್ಟೆ, ನನ್ನ ಹಣ; ಭಾರತೀಯ ವಧುವಿನಂತೆ ಕಾಣಿಸ್ತೀರಾ ಎಂದವರಿಗೆ ಪಾಕ್ ನಟಿಯ ಖಡಕ್ ಉತ್ತರ

Published : Feb 27, 2023, 05:35 PM IST
ನನ್ನ ಬಟ್ಟೆ, ನನ್ನ ಹಣ; ಭಾರತೀಯ ವಧುವಿನಂತೆ ಕಾಣಿಸ್ತೀರಾ ಎಂದವರಿಗೆ ಪಾಕ್ ನಟಿಯ ಖಡಕ್ ಉತ್ತರ

ಸಾರಾಂಶ

ಭಾರತೀಯ ವಧುವಿನಂತೆ ಕಾಣಿಸುತ್ತೀರಿ, ಇದು ಪಾಕ್ ಸಂಸ್ಕೃತಿ ಅಲ್ಲ ಎಂದವರಿಗೆ ಪಾಕಿಸ್ತಾನ ನಟಿ ಖಡಕ್ ಉತ್ತರ ಮೀಡಿದ್ದಾರೆ. 

ಭಾರತೀಯ ಸಂಸ್ಕೃತಿಗೆ ಇಡೀ ವಿಶ್ವವೇ ಮನಸೋತಿದೆ. ಪಾಕಿಸ್ತಾನದ ನಟಿ ಉಷ್ಣಾ ಶಾ ತಮ್ಮ ಮದುವೆಯಲ್ಲಿ ಭಾರತೀಯಳಂತೆ ಮಿಂಚಿದ್ದಾರೆ. ಇತ್ತೀಚಿಗಷ್ಟೆ ಪಾಕ್ ನಟಿ ಉಷ್ಣಾ ಶಾ ಅವರು  ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ಮದುವೆಯಾದರು. ನವವಿವಾಹಿತರ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರತೀಯ ಉಡುಪಿನಲ್ಲಿ ಕೊಣಿಸಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಉಷ್ಣಾ ಶಾ ಕೆಂಪು ಬಣ್ಣದ ಅದ್ದೂರಿ ಲೆಹಂಗಾದಲ್ಲಿ ಕಂಗೊಳಿಸಿದ್ದರು. ಉಷ್ಣಾ ಧರಿಸಿದ್ದ ಡ್ರೆಸ್ ಅನ್ನು ಪ್ರಸಿದ್ಧ ಡಿಸೈನರ್ ಬ್ರಾಂಡ್ ವಾರ್ದಾ ಸಲೀಮ್ ಅವರು ವಿನ್ಯಾಸಗೊಳಿಸಿದ್ದಾರೆ. 

ಅದ್ದೂರಿ ಕೆಂಪು ಲೆಹಂಗಾ ಧರಿಸಿ ಮದುವೆಯಲ್ಲಿ ಭರ್ಜರಿ ಡಾನ್ಸ್ ಮಾಡಿದ್ದಾರೆ. ಭಾರತೀಯ ವಧುವಿನ ಹಾಗೆ ಡ್ರೆಸ್ ಮಾಡಿಕೊಂಡು ಡಾನ್ಸ್ ಮಾಡಿದ್ದು ಪಾಕ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿ ಉಷ್ಣಾ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೆಹಂದಿ ಧರಿಸಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಉಷ್ಣಾ ಫೋಟೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ಪಾಕಿಸ್ತಾನ ತಮ್ಮದೇ ಆದ ಸಂಸ್ಕೃತಿ ಮತ್ತು ಧರ್ಮವನ್ನು ಹೊಂದಿದೆ. ಪಾಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಗಳನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸುವುದನ್ನು ನಿಲ್ಲಿಸಿ. ನಾವು ಮುಸ್ಲಿಮರು ಮತ್ತು ನಮ್ಮ ಧರ್ಮ ನಮಗೆ ಅವಕಾಶ ನೀಡುವುದಿಲ್ಲ. ಈ ರೀತಿಯ ಬಟ್ಟೆ ಧರಿಸುವುದು,  ನಕಾರಾತ್ಮಕತೆಯನ್ನು ಹರಡುವುದನ್ನು ನಿಲ್ಲಿಸಿ.' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಪಾಕಿಸ್ತಾನಿ ವಧು ಭಾರತೀಯ ಶೈಲಿಯಲ್ಲಿ ಏಕೆ ಕಾಣಿಸುತ್ತಿದ್ದಾರೆ? ಇದು ನಮ್ಮ ಸಂಸ್ಕೃತಿಯಲ್ಲ' ಎಂದು ಹೇಳಿದ್ದಾರೆ. 'ಪಾಕಿಸ್ತಾನಿ ಸಂಸ್ಕೃತಿಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ' ಎಂದು ಹೇಳಿದ್ದಾರೆ. 

ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ; ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ರಣಬೀರ್ ಕಪೂರ್ ಹೇಳಿಕೆ

ನಟಿಯ ಖಡಕ್ ತಿರುಗೇಟು 

ನೆಟ್ಟಿಗರ ತರಾಟೆಗೆ ನಟಿ ಉಷ್ಣಾ ಸಾಮಾಜಿಕ ಜಾಲತಾಣದಲ್ಲಿಯೇ ಖಡಕ್ ಉತ್ತರ ನೀಡಿದ್ದಾರೆ. 'ನನ್ನ ಉಡುಪಿನ ಬಗ್ಗೆ ಯಾರಿಲಲ್ ಸಮಸ್ಯೆ ಇದೆ ಅವರನ್ನು ನಾನು ಮದುವೆಗೆ ಆಹ್ವಾನಿಸಿಲ್ಲ, ನನ್ನ ಬಟ್ಟೆಗೆ ನೀವು ಹಣ ಕೊಟ್ಟಿಲ್ಲ, ನನ್ನ ಆಭರಣಗಳು, ನನ್ನ ಬಟ್ಟೆ, ಸಂಪೂರ್ಣವಾಗಿ ಪಾಕಿಸ್ತಾನಿ ನಾನು. ದೇವರು ನಮ್ಮನ್ನು ಸಂತೋಷವಾಗಿರಿಸಲಿ' ಎಂದು ಹೇಳಿದ್ದಾರೆ.  'ನಮ್ಮ ಮದುವೆಗೆ ಬಂದ ಆಹ್ವಾನಿಸದ ಫೋಟೋಗ್ರಾಫರ್‌ಗಳಿಗೆ ನನ್ನ ಶುಭಾಶಯಗಳು' ಎಂದು ಹೇಳಿದ್ದಾರೆ.&

3ನೇ ವಿಶ್ವಯುದ್ಧ ಗೆದ್ದು ಬಂದಂತಾಗಿದೆ; ಪಾಕ್‌ನಲ್ಲೇ ಕುಳಿತು ಅವರ ವಿರುದ್ಧ ಗುಡುಗಿದ ಜವಾದ್ ಅಖ್ತರ್ ರಿಯಾಕ್ಷನ್

ನಟಿ ಉಷ್ಣಾ ಕಳೆದ ವರ್ಷ ಡಿಸೆಂಬರ್ ನಲ್ಲಿ ತನ್ನ ನಿಶ್ಚಿತಾರ್ಥ ವಿಚಾರವನ್ನು ಹಂಚಿಕೊಳ್ಳುವ ಮೂಲಕ  ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಜೊತೆ ದಾಂಪತ್ಯಕ್ಕೆ ಕಾಲಿಡುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಬಟ್ಟೆ ವಿಚಾರಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?