ಅಂದು ವರುಣ್​, ಇಂದು ರಣಬೀರ್​: ರಶ್ಮಿಕಾಗೂ ಚಪ್ಪಲಿ ತೆಗೆಸಿದ ನಟ- ಸಂಸ್ಕಾರವಂತ ಪುರುಷರು ಎಂದ ಫ್ಯಾನ್ಸ್​!

By Suvarna News  |  First Published Jan 28, 2024, 2:26 PM IST

ರಶ್ಮಿಕಾ ಮಂದಣ್ಣಂಗೂ ಚಪ್ಪಲಿ ತೆಗೆಸಿ ವೇದಿಕೆ ಹತ್ತಿಸಿದ  ನಟ ರಣಬೀರ್​ ಕಪೂರ್​-  ವರುಣ್​ ಧವನ್​ರನ್ನೂ ನೆನಪು ಮಾಡಿಕೊಂಡ ನೆಟ್ಟಿಗರು ಹೇಳಿದ್ದೇನು?
 


ಯಾವುದೇ ದೈವಿಕ ಕಾರ್ಯ ಮಾಡುವಾಗ, ವೇದಿಕೆಯ ಮೇಲೆ ಹೋಗುವ ಸಂದರ್ಭಗಳಲ್ಲಿ ಚಪ್ಪಲಿಯನ್ನು ತೆಗೆಯುವುದು ಹಿಂದೂಗಳ ಸಂಪ್ರದಾಯ. ಇದು ಸಂಪ್ರದಾಯ ಎನ್ನುವುದಕ್ಕಿಂತಲೂ ಗೌರವ ಸೂಚಕವೂ ಹೌದು. ಆದರೆ ಇಂದು ಈ ಸಂಪ್ರದಾಯ, ಗೌರವವನ್ನು ಹಲವರು ಪಾಲನೆ ಮಾಡುವುದಿಲ್ಲ. ಅದರಲ್ಲಿಯೂ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಇಂಥದ್ದೊಂದು ಸಂಪ್ರದಾಯವನ್ನು ಪಾಲನೆ ಮಾಡುವುದು ಕಷ್ಟವೇ. ಸಹಸ್ರಾರು ರೂಪಾಯಿಗಳ ಶೂಸ್‌ ಧರಿಸಿ ಪೋಸ್‌ ಕೊಡುವ ನಟ-ನಟಿಯರು ವೇದಿಕೆ ಮೇಲೆ ಹೋಗುವಾಗ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಶೂಸ್‌ ತೆಗೆಯುವುದು ಕನಸಿನ ಮಾತೇ. 

ಆದರೆ ಕೆಲ ದಿನಗಳ ಹಿಂದೆ  ನಟ ವರುಣ್‌ ಧವನ್‌ ಅವರು ಶೂಸ್‌ ತೆಗೆದು ಸಕತ್‌ ಸುದ್ದಿ ಮಾಡಿದ್ದರು.  ತಮ್ಮ ಮುಂಬರುವ ದುಲ್ಹನಿಯಾ ಚಿತ್ರದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯ ಉದ್ಘಾಟನೆ ಸಮಾರಂಭದಲ್ಲಿ ವರುಣ್‌ ಧವನ್‌ ಅವರು ದೀಪ ಬೆಳಗುವ ಮುನ್ನ ತಮ್ಮ ಶೂಸ್‌ ತೆಗೆಗಿದ್ದರು. ಅದಾದ ಬಳಿಕ ಅವರನ್ನು ಅನುಸರಿಸಿದ ನಿರ್ದೇಶಕ ಕರಣ್‌ ಜೋಹರ್‌ ಅವರೂ ತಮ್ಮ ಶೂಸ್‌ ತೆಗೆದರು. ಅದಾದ ಬಳಿಕ ಕೈಯಲ್ಲಿ ದೀಪ ಹಿಡಿದುಕೊಂಡಿದ್ದ ಜಾಹ್ನವಿ ಕಪೂರ್‌ ಅವರ ಸರದಿಯಾಗಿತ್ತು. ಆದರೆ ಜಾಹ್ನವಿ ಅವರು, ಶೂಸ್‌ ಅನ್ನೂ ತೆಗೆಯುವ ಗೋಜಿಗೆ ಹೋಗದೇ ತಮ್ಮ ಬಳಿ ಇದ್ದ ದೀಪವನ್ನೂ ಹಚ್ಚದೇ ಕರಣ್‌ ಜೋಹರ್‌ ಅವರ ಕೈಗೆ ಇತ್ತು ಸಕತ್​ ಟ್ರೋಲ್​ಗೆ ಒಳಗಾಗಿದ್ದರು. ಕೊನೆಯ ಪಕ್ಷ ತಾವು ಧರಿಸಿದ್ದ ಸ್ಲಿಪ್ಪರ್​ ತೆಗೆಯಬೇಕು ಎಂದೂ ನಟಿಗೆ ಅನ್ನಿಸಿರಲಿಲ್ಲ. ಇದರಿಂದ ಟ್ರೋಲಿಗರಿಗೆ ಆಹಾರವಾಗಿದ್ದರು.

Tap to resize

Latest Videos

ಕೈಯಿಂದ ಶೂಸ್‌ ತೆಗೆದು ದೀಪ ಹಚ್ಚಿದ ವರುಣ್‌, ಫಾಲೋ ಮಾಡಿದ ಕರಣ್‌, ಉಫ್‌ ಜಾಹ್ನವಿ ಮಾಡಿದ್ದೇನು?

ಅದೇ ರೀತಿ ಈಗ ಇನ್ನೊಂದು ಘಟನೆ ನಡೆದಿದೆ. ಅನಿಮಲ್​ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಟ ರಣಬೀರ್​ ಕಪೂರ್​ ಮತ್ತು ನಟಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು. ವೇದಿಕೆಯ ಮೇಲೆ ನಟ-ನಟಿ ಇಬ್ಬರೂ ಹೋಗಿದ್ದರು. ಕೊನೆಗೆ ಅವರಿಗೆ ದೀಪ ಹಚ್ಚುವಂತೆ ಕೇಳಲಾಯಿತು. ಆಗ ರಣಬೀರ್​ ಕಪೂರ್​ ವೇದಿಕೆಯಿಂದ ಕೆಳಕ್ಕೆ ಬಂದರು. ಅಲ್ಲಿದ್ದವರೂ ಅರೆಕ್ಷಣ ಚಕಿತರಾಗಿ ನೋಡಿದರು, ಇನ್ನು ರಶ್ಮಿಕಾಗಂತೂ ಇದರ ಅರಿವೇ ಇದ್ದಂತಿರಲಿಲ್ಲ. ಆದರೂ ರಣಬೀರ್​ ಹಿಂದೆ ಬಂದರು.

ಅಸಲಿಗೆ ರಣಬೀರ್​ ಕಪೂರ್​ ಕೆಳಕ್ಕೆ ಬಂದಿದ್ದ ತಮ್ಮ ಶೂಸ್​ ತೆಗೆಯಲು. ಶೂಸ್​ ತೆಗೆದ ಅವರು ದೀಪ ಹಚ್ಚಲು ವೇದಿಕೆ ಮೇಲೆ ಹೋಗಲು ನೋಡಿದರು. ಪಕ್ಕದಲ್ಲಿಯೇ ಇದ್ದ ರಶ್ಮಿಕಾಗೆ ಚಪ್ಪಲಿ ತೆಗೆಯಬೇಕು ಎನ್ನಿಸಲಿಲ್ಲ. ಇದನ್ನು ನೋಡಿದ ರಣಬೀರ್​, ಚಪ್ಪಲಿ ತೆಗೆದು ವೇದಿಕೆಯ ಮೇಲೆ ಬರುವಂತೆ ರಶ್ಮಿಕಾಗೆ ಸೂಚಿಸಿದರು. ಮನಸ್ಸಿಲ್ಲದ ಮನಸ್ಸಿನಿಂದ ರಶ್ಮಿಕಾ ತಮ್ಮ ಹೈಹೀಲ್ಸ್​ ತೆಗೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಅಂತೂ ಸ್ಲಿಪ್ಪರ್​ ತೆಗೆದು ವೇದಿಕೆ ಮೇಲೆ ಹೋಗಿ ದೀಪ ಹಚ್ಚಿ ಫೋಟೋಗಳಿಗೆ ಪೋಸ್​ ಕೊಟ್ಟರು. ಅಂದು ವರುಣ್​ ಮತ್ತು ಇಂದು ರಣಬೀರ್​ ಅವರ ಸಂಸ್ಕಾರ ಹಾಗೂ ಅಂದು ನಟಿ ಜಾಹ್ನವಿ ಹಾಗೂ ಇಂದು ರಶ್ಮಿಕಾ ಅವರು ನಡೆದುಕೊಂಡ ಕ್ರಮದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಹೆಣ್ಣುಮಕ್ಕಳು ಸಂಸ್ಕಾರ ಮರೆಯುತ್ತಿರುವ ಇಂದಿನ ದಿನಗಳಲ್ಲಿ ಕೊನೆಯ ಪಕ್ಷ ಕೆಲವೇ ಕೆಲವು ನಟರಾದರೂ ಇಂಥ ಸಂಸ್ಕಾರ ಉಳಿಸಿಕೊಂಡಿದ್ದಾರಲ್ಲ ಎಂದು ಶ್ಲಾಘನೆ ವ್ಯಕ್ತವಾಗುತ್ತಿದೆ. 

ಬಾಬಿ ಡಿಯೋಲ್​ @56: ಕಾಲಿವುಡ್​ಗೆ ನಟನ ಎಂಟ್ರಿ- ಅನಿಮಲ್​ಗಿಂತಲೂ ಭೀಕರ ರೂಪದ ಪೋಸ್ಟರ್​ ರಿಲೀಸ್​

 

click me!