ಕತ್ರಿನಾಗಿಂತ ಒಳ್ಳೆಯ ನಟಿ ಸಿಕ್ರೆ 'ಡಿವೋರ್ಸ್‌' ಮಾಡ್ತೀರಾ; ಪ್ರಶ್ನೆ ಕೇಳಿ ತಬ್ಬಿಬ್ಬಾದ ವಿಕ್ಕಿ ಕೌಶಲ್‌ ಏನ್ ಹೇಳಿದ್ರು..?!

Published : Jan 28, 2024, 01:27 PM ISTUpdated : Jan 28, 2024, 01:30 PM IST
ಕತ್ರಿನಾಗಿಂತ ಒಳ್ಳೆಯ ನಟಿ ಸಿಕ್ರೆ 'ಡಿವೋರ್ಸ್‌' ಮಾಡ್ತೀರಾ; ಪ್ರಶ್ನೆ ಕೇಳಿ ತಬ್ಬಿಬ್ಬಾದ ವಿಕ್ಕಿ ಕೌಶಲ್‌ ಏನ್ ಹೇಳಿದ್ರು..?!

ಸಾರಾಂಶ

ಪಕ್ಕದಲ್ಲಿದ್ದ ಕತ್ರಿನಾರ ಬಳಿ ನೋಡಿದ ವಿಕ್ಕಿ ಕೌಶಲ್ 'ಅಲ್ನೋಡು..ಅವ್ರು ಎಂಥ ಖತರ್ನಾಕ್ ಪ್ರಶ್ನೆ ಕೇಳಿದ್ದಾರೆ' ಎನ್ನಲು ಕತ್ರಿನಾ ಸಿಂಪಲ್‌ ಆಗಿ ನಕ್ಕಿದ್ದಾರೆ. ಈ ಪ್ರಶ್ನೆಯಿಂದ ಕತ್ರಿನಾ ಸ್ವಲ್ಪವೂ ವಿಚಲಿತರಾಗಿಲ್ಲ. ಆದರೆ, ಪ್ರಶ್ನೆ ಎದುರಿಸಿದ ನಟ ವಿಕ್ಕಿ ಕೌಶಲ್ ಮುಖದಲ್ಲಿ ಮಾತ್ರ ನಾಚಿಕೆ ಕಾಣಿಸುತ್ತಿತ್ತು.

ಸೆಲೆಬ್ರಿಟಿಗಳಿಗೆ ಸಂದರ್ಶನಗಳಲ್ಲಿ, ಪ್ರೆಸ್‌ ಮೀಟ್‌ಗಳಲ್ಲಿ ಪ್ರಶ್ನೆಗಳ ಸುರಿಮಳೆ ಆಗುವುದು ಅನಿರೀಕ್ಷಿತವೇನೂ ಅಲ್ಲ. ಹಲವರು ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ. ಆದರೆ, ಕೆಲವೊಮ್ಮೆ ತೂರಿಬರುವ ಪ್ರಶ್ನೆಗಳು ಹೇಗಿರುತ್ತವೆ ಎಂದರೆ, ಉತ್ತರ ಕೊಡಬೇಕಾಗಿರುವರಿಗೆ ಶಾಕ್ ಆಗಿ ಮಾತೇ ಹೊರಡುವುದಿಲ್ಲ. ಕೆಲವೊಮ್ಮೆ ಏನು ಉತ್ತರ ಕೊಟ್ಟರೆ ಯಾರು ಯಾವ ಅರ್ಥವನ್ನು ಕಲ್ಪಿಸಿಕೊಳ್ಳುತ್ತಾರೋ ಎಂದು ಸೆಲೆಬ್ರಿಟಿಗಳು ಯೋಚಿಸುವಂತಾಗುತ್ತದೆ. ಅಂಥ ಸನ್ನಿವೇಶವನ್ನು ಎದುರಿಸಿದ್ದಾರೆ ನಟ ವಿಕ್ಕಿ ಕೌಶಲ್.

ಹೌದು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ವಿಕ್ಕಿ ಕೌಶಲ್ ಅವರು ಹೆಂಡತಿ ಕತ್ರಿನಾ ಕೈಫ್ ಅವರೊಂದಿಗೆ ಪ್ರೆಸ್‌ಮೀಟ್‌ ಅಟೆಂಡ್ ಮಾಡುತ್ತಿದ್ದರು. ಆ ವೇಳೆ ಮಾಧ್ಯಮ ತಂಡದಲ್ಲಿದ್ದ ತರುಣ ವ್ಯಕ್ತಿಯೊಬ್ಬ ವಿಕ್ಕಿ ಕೌಶಲ್ ಅವರಿಗೆ 'ಸರ್, ಭಾರತದಲ್ಲಿ ವಿವಾಹ ಎನ್ನುವುದು ಏಳೇಳೂ ಜನ್ಮದ ಸಂಬಂಧ ಎನ್ನುತ್ತಾರೆ. ನೀವು ಕತ್ರಿನಾಗಿಂತ ಒಳ್ಳೆಯ ಹುಡುಗಿ ಸಿಕ್ಕರೆ ಕತ್ರಿನಾಗೆ ಡಿವೋರ್ಸ್‌ ಕೊಡ್ತಾರಾ' ಎಂಬ ಪ್ರಶ್ನೆಯನ್ನು ಕೇಳಿಬಿಟ್ಟಿದ್ದಾರೆ. 

ಅಂಬಿ ಲೈಫಲ್ಲಿ ಒಮ್ಮೆ ಮಾತ್ರ ಅತ್ತಿದ್ರು, ಕಣ್ಣೀರಿಗೆ ಅಸಲಿ ಕಾರಣ ನಂಗೊತ್ತು; ಗುಟ್ಟು ಬಿಚ್ಚಿಟ್ರು ಸುಮಲತಾ!

ಪತ್ರಕರ್ತನ ಪ್ರಶ್ನೆ ಕೇಳಿ ಒಂದು ಕ್ಷಣ ಮುಜುಗರ ಹಾಗೂ ಶಾಕ್‌ನಿಂದ ನಟ ವಿಕ್ಕಿ ಕೌಶಾಲ್ ಅವರಿಗೆ ಮಾತೇ ಹೊರಡುವುದಿಲ್ಲ. ಒಮ್ಮೆ ತಲೆ ತಗ್ಗಿಸಿ ಕತ್ರಿನಾರನ್ನು ನೋಡಿ ನಕ್ಕುಬಿಡುತ್ತಾರೆ. ಬಳಿಕ ಮಾತನಾಡಿದ ನಟ ವಿಕ್ಕಿ 'ಅವರಿಗೆ ಮೈಕ್ ಕೊಡಿ, ನೀವು ಎಂಥ ಪ್ರಶ್ನೆ ಕೇಳಿದ್ದೀರಾ ಅಂದ್ರೆ, ಈ ಸಾಯಂಕಾಲದ ಹೊತ್ತಲ್ಲಿ ಕೂಡ ಉಷ್ಣತೆ ಹೆಚ್ಚುತ್ತಿದೆ (ಯೇ ಶಾಮ್‌ ಮೇ ಬಿ ಗರಮ್ ಹೋ ಚುಕಾ ಹೈ)' ಎಂದಿದ್ದಾರೆ. ಮುಂದುವರೆದ ವಿಕ್ಕಿ ಕೌಶಾಲ್ 'ಜನ್ಮಜನ್ಮದ ಅನುಬಂದ' ಆಗಿರುತ್ತದೆ' ಎಂದು ಹೇಳುವ ಮೂಲಕ ಅಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. 

ಚೆಂದ ನೋಡಿ ಮರುಳಾಗಿ ಮದ್ವೆಯಾಗ್ಬಿಟ್ರಾ ಉಮಾಶ್ರೀ; ಎರಡು ತಿಂಗಳ ಬಸುರಿಯನ್ನೇ ಬಿಟ್ಟೋದ್ನ ಗಂಡ..?!

ಪಕ್ಕದಲ್ಲಿದ್ದ ಕತ್ರಿನಾರ ಬಳಿ ನೋಡಿದ ವಿಕ್ಕಿ ಕೌಶಲ್ 'ಅಲ್ನೋಡು..ಅವ್ರು ಎಂಥ ಖತರ್ನಾಕ್ ಪ್ರಶ್ನೆ ಕೇಳಿದ್ದಾರೆ' ಎನ್ನಲು ಕತ್ರಿನಾ ಸಿಂಪಲ್‌ ಆಗಿ ನಕ್ಕಿದ್ದಾರೆ. ಈ ಪ್ರಶ್ನೆಯಿಂದ ಕತ್ರಿನಾ ಸ್ವಲ್ಪವೂ ವಿಚಲಿತರಾಗಿಲ್ಲ. ಆದರೆ, ಪ್ರಶ್ನೆ ಎದುರಿಸಿದ ನಟ ವಿಕ್ಕಿ ಕೌಶಲ್ ಮುಖದಲ್ಲಿ ಮಾತ್ರ ನಾಚಿಕೆ, ಅಸಮಾಧಾನ ಕಾಣಿಸುತ್ತಿತ್ತು. ಆದರೆ, ಅವರು ಅದನ್ನು ಕೂಲ್ ಆಗಿ ಮ್ಯಾನೇಜ್‌ ಮಾಡಿ, ಕತ್ರಿನಾ ಸೇರಿದಂತೆ ಅಲ್ಲಿರುವ ಎಲ್ಲರೂ ಖುಷಿ ಪಡುವಂತೆ ಉತ್ತರ ಕೊಟ್ಟು ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದಾರೆ ವಿಕ್ಕಿ. ಬಳಿಕ ಪ್ರಶ್ನೆ ಕೇಳಿದ್ದ ವ್ಯಕ್ತಿ 'ಸೆಲ್ಯೂಟ್ ಸರ್' ಎಂದಿದ್ದಾರೆ. 

ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್‌ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?