ಅಪ್ಪ ಆಮೀರ್ ಖಾನ್‌ ತಪ್ಪಿಂದಲೇ ಮಗಳು ಇರಾಗೆ ಖಿನ್ನತೆ ಕಾಡಿತ್ತಾ?

By Suvarna News  |  First Published Oct 11, 2023, 1:15 PM IST

ಅಮೀರ್‌ ಖಾನ್ ಮಗಳು ಇರಾ ಖಾನ್‌ಗೆ ಡಿಪ್ರೆಶನ್ ಸಮಸ್ಯೆ ಇದೆ. ಹಾಗಿದ್ರೆ ಅಮೀರ್ ಸಿನಿಮಾದಲ್ಲಿ ಮಾತ್ರ ಮಿ.ಪರ್ಪೆಕ್ಟಾ, ಪೇರೆಂಟಿಂಗ್‌ನಲ್ಲಿ ಅಲ್ವಾ?


ಹಿಂದೊಮ್ಮೆ ಅಮೀರ್ ಖಾನ್ ತಾನು ಬದುಕಿನಲ್ಲಿ ಬಹಳ ಮಿಸ್ ಮಾಡಿಕೊಂಡ ಸಂಗತಿ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದ್ದರು. ತನ್ನ ಬದುಕಿನ ಬಹು ಭಾಗವನ್ನು ಸಿನಿಮಾಕ್ಕೆ ಮೀಸಲಿಟ್ಟೆ. ಫ್ಯಾಮಿಲಿ ಬದುಕಿನ ಖುಷಿಯನ್ನು ಎನ್‌ಜಾಯ್ ಮಾಡೋದಕ್ಕೆ ಆಗಲೇ ಇಲ್ಲ ಎಂದು ಅಲವತ್ತುಕೊಂಡಿದ್ದರು. ಇದೀಗ ಅವರ ಮಗಳು ಡಿಪ್ರೆಶನ್‌ಗೆ ತುತ್ತಾಗಿದ್ದಾಳೆ. ಇದಕ್ಕೆ ಪೇರೆಂಟಿಂಗ್ ಸಮಸ್ಯೆಯೂ ಒಂದು ಕಾರಣ ಅಂತ ಇವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೆ ಇತ್ತೀಚೆಗೆ ಅಮೀರ್ ಖಾನ್ ಮಕ್ಕಳಿಗೆ ಒಂದಿಷ್ಟು ಸಮಯ ಕೊಡುತ್ತಿದ್ದಾರೆ. ಇದೀಗ ಮಗಳು ಮಾನಸಿಕ ಸಮಸ್ಯೆಯಿಂದ ಹೊರಬರಲು ಜೊತೆಯಾಗಿ ನಿಂತಿದ್ದಾರೆ. ತನ್ನ ಮಗಳು ಮಾತ್ರವಲ್ಲ, ಈ ಸಮಸ್ಯೆ ಅನುಭವಿಸುವ ಮಂದಿಯೆಲ್ಲ ಸಮಸ್ಯೆ ಹೇಳಿಕೊಳ್ಳಲು ಸಂಕೋಚ ಪಡದೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಈ ನಡುವೆ ಇರಾ ಖಾನ್‌ ವಿಶ್ವ ಮಾನಸಿಕ ಆರೋಗ್ಯ ದಿನದ (World Mental Health Day) ಪ್ರಯುಕ್ತ ವಿಶೇಷ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ತನ್ನ ಮಾನಸಿಕ ಆರೋಗ್ಯ ಉತ್ತಮಪಡಿಸಲು ಪಡೆಯುತ್ತಿರುವ ಥೆರಪಿ ಕುರಿತು ಅವರು ಮಾಹಿತಿ ಪಡೆದಿದ್ದಾರೆ. ಅವಶ್ಯಕತೆ ಇರುವವರು ಇಂತಹ ಥೆರಪಿ ಮೂಲಕ ಮಾನಸಿಕ ಆರೋಗ್ಯ ಉತ್ತಮಪಡಿಸಿಕೊಳ್ಳಿ. ಮಾನಸಿಕ ತೊಂದರೆಗಳ ಕುರಿತು ಉದಾಸೀನ ಬೇಡ ಎಂದು ತಿಳಿ ಹೇಳಿದ್ದಾರೆ. ಈ ವೀಡಿಯೋದಲ್ಲಿ ಇರಾ ಖಾನ್‌ ಮಾತ್ರ ಇಲ್ಲ. ಇರಾ ಮತ್ತು ಅಮೀರ್‌ ಖಾನ್‌ ಜತೆಯಾಗಿ ವಿಡಿಯೋ ಮಾಡಿದ್ದಾರೆ. ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಖಿನ್ನತೆ (Depression) ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ಪರಿಹಾರ ಕಂಡುಕೊಂಡಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

Latest Videos

undefined

ಹಲವು ವರ್ಷಗಳಿಂದ ಥೆರಪಿ ತೆಗೆದುಕೊಳ್ತಿದ್ದಾರೆ ಹಿಂದಿನ ಕಾರಣ ಬಿಚ್ಚಿಟ್ಟ ಮಿಸ್ಟರ್ ಪರ್ಫೆಕ್ಷನಿಸ್ಟ್

ಈ ವೀಡಿಯೊದಲ್ಲಿ ಅಪ್ಪ ಮತ್ತು ಮಗಳು ಮಾನಸಿಕ ತೊಂದರೆಗೆ ಥೆರಪಿಯ ಪ್ರಯೋಜನಗಳ ಕುರಿತು ಮಾತನಾಡಿದ್ದಾರೆ. ವೈದ್ಯರು, ಶಿಕ್ಷಕರ ಮೂಲಕ ನಾವು ಹೇಗೆ ತರಬೇತಿ ಪಡೆಯುತ್ತೇವೆಯೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುವುದು ಸಾಮಾನ್ಯವಾದ ವಿಚಾರ ಎಂದು ಅಮೀರ್‌ ಖಾನ್‌ ಈ ವಿಡಿಯೋದಲ್ಲಿ ಹೇಳಿದ್ದಾರೆ. ಮಾನಸಿಕ ಆರೋಗ್ಯದ ಕುರಿತು ಚಿಕಿತ್ಸೆ ಪಡೆಯಲು ಹಿಂಜರಿಯಬೇಡಿ ಎಂದು ಅವರು ಪಾಠ ಮಾಡಿದ್ದಾರೆ.

ಜೊತೆಗೆ ನಮಗೆ ಎಂದಾದರೂ ನಮ್ಮ ಮಾನಸಿಕ ಅಥವಾ ಭಾವನಾತ್ಮಕ ಆರೋಗ್ಯಕ್ಕೆ (Emotional Health) ಸಹಾಯ ಬೇಕಿದ್ದರೆ ತರಬೇತಿ ಪಡೆದಿರುವ ಮತ್ತು ವೃತ್ತಿಪರರಾಗಿರುವ ಯಾರಿಂದ ಬೇಕಾದರೂ ಯಾವುದೇ ಹಿಂಜರಿಕೆ ಇಲ್ಲದೆ ಸಹಾಯವನ್ನು ಪಡೆಯಬೇಕು ಎಂದು ಇರಾ ಹೇಳಿದ್ದಾರೆ.

ನನ್ನ ಮಗಳು ಇರಾ ಮತ್ತು ನಾನು ಹಲವು ವರ್ಷಗಳಿಂದ ಚಿಕಿತ್ಸೆಯ ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ. ಮಾನಸಿಕ ಅಥವಾ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿರುವಿರಿ ಎಂದು ನೀವು ಭಾವಿಸಿದರೆ, ನೀವು ತರಬೇತಿ ಪಡೆದ ವೃತ್ತಿಪರರ ಸಹಾಯವನ್ನು ಪಡೆಯಬಹುದು. ಈ ಕುರಿತು ನಾಚಿಕೆ ಪಡೆಬೇಕಾಗಿಲ್ಲ. ಆಲ್ ದಿ ಬೆಸ್ಟ್” ಎಂದು ಅಮೀರ್ ಖಾನ್‌ ಹೇಳಿದ್ದಾರೆ.

ಕಪ್ಪಗೆ, ದಪ್ಪಗಿದ್ದ ರೇಖಾಗೆ ಕಪ್ಪು ಬಾತು ಕೋಳಿ ಎನ್ನುತ್ತಿದ್ದ ಬಾಲಿವುಡ್, ಬೆಳೆದ ಪರಿಗೆ ಸರಿಸಾಟಿಯೇ ಇಲ್ಲ!

ಈ ವರ್ಷದ ಆರಂಭದಲ್ಲಿ ತನ್ನ ಮಾನಸಿಕ ಸಮಸ್ಯೆಯ (mental problem) ಕುರಿತು ಇರಾ ಖಾನ್‌ ಮುಕ್ತವಾಗಿ ಮಾತನಾಡಿದ್ದರು. ಖಿನ್ನತೆಯ ಜತೆ ತನ್ನ ಹೋರಾಟದ ಕುರಿತು ಹೇಳಿದ್ದರು. 'ಆತ್ಮಹತ್ಯೆ ಎಂಬ ಪದ ಹೇಳಲು ಎಲ್ಲರೂ ಭಯಪಡುತ್ತಾರೆ. ಸಾವು ತುಂಬಾ ಭಯನಕವಾಗಿದೆ. ಅದು ಅರ್ಥವಾಗುವಂತದ್ದು. ಮಾನಸಿಕ ಆರೋಗ್ಯದ ಕುರಿತು ನಾವು ಮಾತನಾಡಬೇಕು. ನಮ್ಮೊಳಗೆ ಇರಬಾರದು. ಸಾವಿನ ಅರ್ಥವನ್ನು ನಾವು ಅರ್ಥ ಮಾಡಿಕೊಂಡಾಗ ಅಂತಹ ತೊಂದರೆ ಆಗದಂತೆ ಏನನ್ನಾದರೂ ಮಾಡಬಹುದು. ಯಾವುದೇ ಎಚ್ಚರಿಕೆಯ ಚಿಹ್ನೆಗಳು ಇಲ್ಲದೆ ಅದು ಸಂಭವಿಸುವುದಿಲ್ಲ. ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಜನರು ಮುಕ್ತವಾಗಿ (openness) ಮಾತನಾಡುವುದಿಲ್ಲ. ಜ್ಞಾನದ ಕೊರತೆಯಿದೆ. ಅದನ್ನು ಹೋಗಲಾಡಿಸಬೇಕು' ಎಂದು ಅವರು ಹೇಳಿದ್ದಾರೆ ಹೇಳಿದ್ದರು.

ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ ಸೇರಿ ಒಂದಿಷ್ಟು ಮಂದಿ ಈ ಖಿನ್ನತೆ (Depression) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ (awareness) ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. 

click me!