175 ಕೋಟಿ ಕಲೆಕ್ಷನ್, 68 ಅವಾರ್ಡ್; ಈ ಸಿನಿಮಾದಲ್ಲಿರಲಿಲ್ಲ ಹೀರೋಗೆ ಒಂದೇ ಒಂದು ಡೈಲಾಗ್, ಆದ್ರೂ ಸೂಪರ್ ಹಿಟ್

Published : Feb 09, 2025, 11:30 AM IST
175 ಕೋಟಿ ಕಲೆಕ್ಷನ್, 68 ಅವಾರ್ಡ್; ಈ ಸಿನಿಮಾದಲ್ಲಿರಲಿಲ್ಲ ಹೀರೋಗೆ ಒಂದೇ ಒಂದು ಡೈಲಾಗ್, ಆದ್ರೂ ಸೂಪರ್ ಹಿಟ್

ಸಾರಾಂಶ

ಒಂದೇ ಒಂದು ಡೈಲಾಗ್ ಇಲ್ಲದ ಹೀರೋ ಇದ್ದರೂ 175 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವನ್ನು ಈ ಲೇಖನ ಚರ್ಚಿಸುತ್ತದೆ. ಈ ಸಿನಿಮಾ 68 ಪ್ರಶಸ್ತಿಗಳನ್ನು ಗೆದ್ದಿದ್ದು, ಕಲಾವಿದರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾಗಳಂದ್ರೆ ಹೀರೊಗೆ ಮಾಸ್ ಅಥವಾ ಕ್ಯೂಟ್ ಲುಕ್ ಇರಬೇಕು. ಹಾಗೆ  ಹೀರೋ ಹೇಳುವ ಡೈಲಾಗ್‌ಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಾರೆ. ಮಾಸ್ ಅಭಿಮಾನಿಗಳು ತಮ್ಮ ಹೀರೋ ಯಾವಾಗ ಡೈಲಾಗ್ ಹೇಳ್ತಾನೆ ಅಂತಾನೇ ಕಾಯುತ್ತಿರುತ್ತಾರೆ. ಇಂದು ನಾವು ಹೇಳುತ್ತಿರುವ ಸಿನಿಮಾದಲ್ಲಿ ಹೀರೋಗೆ ಒಂದೇ  ಒಂದು ಡೈಲಾಗ್ ಇರಲಿಲ್ಲ. ಆದರೂ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್‌ ಆಫಿಸ್‌ನಲ್ಲಿ 175 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ನಟನ ನಟನೆ ಕಂಡು ವಿಮರ್ಶಕರು ಚಪ್ಪಾಳೆ ತಟ್ಟಿದ್ದರು. ವಿವಿಧ ವಿಭಾಗಗಳಲ್ಲಿ  ಈ ಸಿನಿಮಾ 68 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದು 12 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. 

ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್, ಪ್ರಿಯಾಂಕಾ  ಚೋಪ್ರಾ, ಇಲಿಯಾನಾ ಡಿಕ್ರೂಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 35 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 175 ಕೋಟಿ ಹಣ ಸಂಪಾದನೆ ಮಾಡುವ ಮೂಲಕ ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು. ಹೊಸತನದ ಕಥೆಯನ್ನು ಜನರು ಒಪ್ಪಿ ಅಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಈ ಸಿನಿಮಾ ಸಾಕ್ಷಿಯಾಗಿತ್ತು. 14ನೇ ಸೆಪ್ಟೆಂಬರ್ 2012ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.

2012ರಲ್ಲಿ ಬಿಡುಗಡೆಯಾದ ಬೇಫಿಕ್ರೆ ಸಿನಿಮಾ ಎಲ್ಲಾ ವರ್ಗದ ವೀಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಚೋಪ್ರಾ, ಚಾಕ್ಲೆಟ್ ಆಂಡ್ ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಣ್‌ಬೀರ್ ಕಪೂರ್ ಅವರ ನೈಜ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು. ಕೇವಲ ಆಕ್ಷನ್ ಸಿನಿಮಾಗಳು ಬರುತ್ತಿದ್ದ ಸಂದರ್ಭದಲ್ಲಿ  ಬಿಡುಗಡೆಯಾದ ಬರ್ಫಿ ಇಡೀ ಸಿನಿ ಅಂಗಳದ ಟ್ರೆಂಡ್ ಚೇಂಜ್ ಮಾಡಿತ್ತು. 

ರಣ್‌ಬೀರ್, ಪ್ರಿಯಾಂಕಾ ನಟನೆಗೆ ವ್ಯಾಪಕ ಪ್ರಶಂಸೆ
ಅನುರಾಗ್ ಕಶ್ಯಪ್ ನಿರ್ದೇಶನದ ಈ ಬರ್ಫಿ, ಕೇವಲ  ಆಕ್ಷನ್ ಸಿನಿಮಾ ಹಿಟ್ ಆಗುತ್ತೆ ಎಂಬ ಮಾತನ್ನು ಸುಳ್ಳು ಮಾಡಿತ್ತು. ಬರ್ಫಿ ಪಾತ್ರದಲ್ಲಿ ನಟಿಸಿದ್ದ ರಣ್‌ಬೀರ್ ಕಪೂರ್‌ ಸಂಪೂರ್ಣ ಕಿವುಡ ಮತ್ತು ಮೂಗನಾಗಿ ನಟಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಇನ್ನು ದೇಶಿ ಗರ್ಲ್ ಪ್ರಿಯಾಂಕಾ ಚೋಪ್ರಾ, ಆಟಿಸಂ ಪೀಡಿತೆಯಾಗಿ ಬರ್ಫಿ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಪ್ರಿಯಾಂಕಾ ಹೆಸರು ಜಿಲ್‌ಮಿಲ್ ಆಗಿತ್ತು. ಪ್ರಿಯಾಂಕಾ ನಟನೆಗೆ ಪ್ರೇಕ್ಷಕರಿಂದ ಶಹಾಬ್ಬಾಸ್ ಗಿರಿ ಸಿಕ್ಕಿತ್ತು. ಸ್ವತಃ ಪ್ರಿಯಾಂಕಾ ಅವರೇ ಇದು ಸಿನಿ ಜೀವನದ ಇಲ್ಲಿಯವರೆಗಿನ ಅತ್ಯುತ್ತಮ ಅಭಿನಯ ಎಂದು ಹೇಳಿಕೊಂಡಿದ್ದರು. ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇಲಿಯಾನಾ ಡಿಕ್ರೂಜ್ ಪಾತ್ರವು ಸಹ ನಾಯಕ-ನಾಯಕಿಯಷ್ಟೇ ತೂಕವನ್ನು ಹೊಂದಿದೆ. ಶುದ್ಧ ಪ್ರೇಮಕಥೆಗೆ ಬರ್ಫಿ ಎಂದು ಉತ್ತಮ ಉದಾಹರಣೆಯಾಗಿತ್ತು. ಸಿನಿಮಾದಲ್ಲಿ ಹಾಸ್ಯದಿಂದಲೇ ಹಲವು ವಿಚಾರಗಳನ್ನು ಅನುರಾಗ್ ಕಶ್ಯಪ್ ಜನರ ಮುಂದಿಟ್ಟಿದ್ದರು. 

ಇದನ್ನೂ ಓದಿ: 12 ಕೋಟಿ ಸಿನಿಮಾ ಗಳಿಸಿದ್ದು, ಜಸ್ಟ್ 70 ಸಾವಿರ; ಸೋಲಿಗೆ ಕಾರಣವಾಯ್ತು ಹೀರೋ ನಟನೆ, ನಿರ್ಮಾಪಕರು ಬೀದಿಗೆ!

ಸಿನಿಮಾ ಬಿಡುಗಡೆಯಾದ ಬಳಿಕ ಜನರಿಂದಲೇ ಪ್ರಚಾರ ಪಡೆದುಕೊಂಡು ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತು. ಬರ್ಪಿ ಸಿನಿಮಾದ ಹಾಡುಗಳು ಜನರಿಗೆ ಇಷ್ಟವಾಗಿದ್ದವು. ಬರ್ಫಿ ಸಿನಿಮಾ Netflix, Amazon, Apple Tv ಮತ್ತು Youtubeನಲ್ಲಿಯೂ ಲಭ್ಯವುವಿದೆ.  IMDB ಮತ್ತು ಅಮೆಜಾನ್ ಪ್ರೈಮ್ ಚಿತ್ರಕ್ಕ 8.1 ರೇಟಿಂಗ್ ನೀಡಿದೆ. ಪ್ರೇಮಿಗಳ ದಿನದಂದು ಏನದ್ರೂ ಸಿನಿಮಾ ನೋಡುವ ಪ್ಲಾನ್ ಮಾಡಿಕೊಂಡಿದ್ರೆ ಸಂಗಾತಿಯೊಂದಿಗೆ ಕುಳಿತು ಬರ್ಫಿ ವೀಕ್ಷಿಸಬಹುದು. 

ಇದನ್ನೂ ಓದಿ: ಪ್ರತಿದಿನ ಭೀಕರ ಸಾವು, ಶವದ ಮೇಲೆ ಭಯಾನಕ ಹುಳುಗಳು; ನೋಡುಗರನ್ನು ಸೈಕಾಗಿಸಿದ ಥ್ರಿಲ್ಲರ್ ವೆಬ್ ಸಿರೀಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್