ನಾನು ಕೊಡಲು ಬಯಸುವ ವ್ಯಕ್ತಿ ಎಂದ್ರು ದೀಪಿಕಾ ಪಡುಕೋಣೆ; ಅರೆ, ಏನು ಕೊಡ್ತಾರಂತೆ ಅಂತಿದೀರಾ?

Published : Mar 29, 2024, 01:01 PM ISTUpdated : Mar 29, 2024, 01:04 PM IST
ನಾನು ಕೊಡಲು ಬಯಸುವ ವ್ಯಕ್ತಿ ಎಂದ್ರು ದೀಪಿಕಾ ಪಡುಕೋಣೆ; ಅರೆ, ಏನು ಕೊಡ್ತಾರಂತೆ ಅಂತಿದೀರಾ?

ಸಾರಾಂಶ

ನಟಿ ದೀಪಿಕಾ ತಮ್ಮ ಸಂದರ್ಶನಗಳಲ್ಲಿ ಇಂತಹ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾರೆ. ತಮ್ಮ ಡಿಪ್ರೆಶನ್ ಖಾಯಿಲೆ ಬಗ್ಗೆ ಬಹಿರಂಗವಾಗಿ ಮೊದಲು ಮಾತನಾಡಿದ ನಟಿಯೇ ದೀಪಿಕಾ ಎನ್ನಬಹುದು. ಬಳಿಕ ಹಲವರು ಅವರನ್ನು ಫಾಲೋ ಮಾಡಿದ್ದಾರೆ ಎನ್ನಬಹುದು.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone)ಸಂದರ್ಶನವೊಂದರಲ್ಲಿ ತಾವು ಎಂತಹ ವ್ಯಕ್ತಿ ಎಂಬುದನ್ನು ಹೇಳಿದ್ದಾರೆ. ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಟಿ ದೀಪಿಕಾ 'ನಾನು ಗಿವಿಂಗ್ ಪರ್ಸನ್. ಅಂದರೆ, ನಾನು ಏನಾದರೂ ಕೊಡಲು ಇಷ್ಟಪಡುತ್ತೇನೆ. ಅದು ವ್ಯಕ್ತಿಗೆ ಇರಬಹುದು ಅಥವಾ ಸಮಾಜಕ್ಕೆ ಇರಬಹುದು. ನಾನು ಯಾವತ್ತೂ ಏನಾದ್ರೂ ಕೊಡಬೇಕು ಎಂದುಕೊಂಡು ಅದರಂತೆ ನಡೆಯುತ್ತೇನೆ. ನಾನು ಏನೇ ಕೊಟ್ಟರೂ ನೂರಕ್ಕೆ ನೂರು ಪರ್ಸೆಂಟ್ ಕೊಡುತ್ತೇನೆ' ಎಂದಿದ್ದಾರೆ. 

ಮುಂದುವರೆದು ಮಾತನಾಡಿರುವ ನಟಿ ದೀಪಿಕಾ 'ನಾನು ಕೊಟ್ಟಿರುವುದಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ಪಡೆದುಕೊಂಡವರು ಅದನ್ನು ಗೌರವಿಸಿದರೆ ಸಾಕು ಎಂಬುದು ನನ್ನ ಅಭಿಪ್ರಾಯ. ನಾವು ಏನನ್ನು ಕೊಡುತ್ತೇವೋ ಅವರ ಬಗ್ಗೆ ಸ್ವೀಕರಿಸಿದವರು ಗೌರವ ವ್ಯಕ್ತಪಡಿಸಬೇಕು ಎಂದು ನಾನು ಖಂಡಿತ ನಿರೀಕ್ಷಿಸುತ್ತೇನೆ. ತೆಗೆದುಕೊಂಡವರು ಕೊಟ್ಟವರನ್ನು ಪ್ರಶಂಸೆ ವ್ಯಕ್ತಪಡಿಸಬೇಕು  ಹಾಗೂ ಗೌರವಿಸಬೇಕು ಎಂಬುದು ನನ್ನ ಅನಿಸಿಕೆ. 

ಅಕ್ಷಯ್ ಕುಮಾರ್-ಟೈಗರ್ ಶ್ರಾಫ್ ಪವರ್ ಪ್ಯಾಕ್ಡ್ 'ಬಡೆ ಮಿಯಾನ್ ಚೋಟೆ ಮಿಯಾನ್' ಟ್ರೇಲರ್ ರಿಲೀಸ್

ನಟಿ ದೀಪಿಕಾ ತಮ್ಮ ಸಂದರ್ಶನಗಳಲ್ಲಿ ಇಂತಹ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾರೆ. ತಮ್ಮ ಡಿಪ್ರೆಶನ್ ಖಾಯಿಲೆ ಬಗ್ಗೆ ಬಹಿರಂಗವಾಗಿ ಮೊದಲು ಮಾತನಾಡಿದ ನಟಿಯೇ ದೀಪಿಕಾ ಎನ್ನಬಹುದು. ಬಳಿಕ ಹಲವರು ಅವರನ್ನು ಫಾಲೋ ಮಾಡಿದ್ದಾರೆ ಎನ್ನಬಹುದು. ದೇಹದ ಖಾಯಿಲೆ ಬಗ್ಗೆ ಮಾತನಾಡುವ, ಅದನ್ನೊಂದು ಸೀಕ್ರೆಟ್ ಎನ್ನುವಂತೆ ನೋಡದ ನಾವು ಮನಸ್ಸಿನ ಖಾಯಿಲೆಗಳನ್ನು ಮಾತ್ರ ಯಾಕೆ ಸೀಕ್ರೆಟ್ ಆಗಿ ಇಡುತ್ತೇವೆ, ಇಡಬೇಕು ಎಂಬುದು ನನ್ನ ಪ್ರಶ್ನೆ. ಖಾಯಿಲೆ ದೇಹಕ್ಕೆ ಅಥವಾ ಮನಸ್ಸಿಗೆ ಯಾವುದಕ್ಕಾದರೂ ಬರಬಹುದು' ಎಂದಿದ್ದಾರೆ ನಟಿ ದೀಪಿಕಾ. 

ಮತ್ತೆ ಒಂದಾಯ್ತು 'ರಂಗಸ್ಥಳಂ' ಜೋಡಿ, ಬರಲಿದೆ ರಾಮ್ ಚರಣ್-ಸುಕುಮಾರ್ ಸಂಗಮದ ಮತ್ತೊಂದು ಸಿನಿಮಾ!

ಅಂದಹಾಗೆ, ನಟಿ ದೀಪಿಕಾ ಪಡುಕೋಣೆ ಸದ್ಯ ಕೆಲವು ಸಿನಿಮಾ, ವೆಬ್ ಸಿರೀಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಮೊದಲಿಗಿಂತ ಹೆಚ್ಚು ಚೂಸಿಯಾಗಿರುವ ದೀಪಿಕಾ ಈಗ ತಮಗೆ ಓಕೆ ಅನ್ನಿಸಿದರೆ ಮಾತ್ರ ಪ್ರಾಜೆಕ್ಟ್ ಒಪ್ಪಿ ಸಹಿ ಮಾಡುತ್ತಾರೆ. ಸದ್ಯಕ್ಕೆ ದೀಪಿಕಾ ಪ್ರಗ್ನೆಂಟ್ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ಇನ್ನು ಸ್ವಲ್ಪ ಕಾಲ ದೀಪಿಕಾ ಪಡುಕೋಣೆ ಅಭಿಮಾನಿಗಳು ಅವರನ್ನು ತೆರೆಯ ಮೇಲೆ ನೋಡಲು ಕಾಯಬೇಕಾಗಬಹುದು. 

ಸೌಂಡ್ ಮಾಡಲು ಸಜ್ಜಾದ 'ಖಾಲಿ ಡಬ್ಬ',ಹೊಸಬರ ಕನಸಿಗೆ ಸಾಥ್ ಕೊಟ್ಟ ವಿ ನಾಗೇಂದ್ರ ಪ್ರಸಾದ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?