ಆಲಿಯಾ ಭಟ್ ಪಕ್ಕದಲ್ಲಿಲ್ಲ ಅಂದ್ರೆ ತಿಂಡಿ ತಿನ್ನಲ್ಲ ಬಾತ್‌ರೂಮ್‌ಗೂ ಹೋಗಲ್ಲ: ರಣಬೀರ್ ಕಪೂರ್

By Vaishnavi Chandrashekar  |  First Published Oct 20, 2022, 10:10 AM IST

ಪತ್ನಿ ಪಕ್ಕದಲ್ಲಿದ್ದರೆ ಮಾತ್ರ ರಣಬೀರ್ ಸಖತ್ ಅಕ್ಟಿವ್ ಅಂತೆ. ಏನಿದು ಡಿಪೆಂಡೆಂಟ್ ಲೈಫ್...?


ಬಾಲಿವುಡ್‌ನ ಮೋಸ್ಟ್‌ ಹ್ಯಾಪೆನಿಂಗ್ ಆಂಡ್ ಹ್ಯಾಪಿ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನವೆಂಬರ್‌ ಕೊನೆಯಲ್ಲಿ ಮೊದಲ ಮಗುವನ್ನು ಬರ ಮಾಡಿಕೊಳ್ಳಲಿದ್ದಾರೆ. ಯೂಟ್ಯೂಬ್‌ ವಿಡಿಯೋ, ಬುಕ್‌ ಮತ್ತು ಸೋಷಿಯಲ್ ಮೀಡಿಯಾ ಮೂಲಕ ಪೇರೆಂಟಿಂಗ್ ಬಗ್ಗೆ ಇಬ್ಬರೂ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಅಷ್ಟಕ್ಕೆ ಅಷ್ಟೇ ಆದರೂ ಪ್ರಚಾರ ಸಮಯದಲ್ಲಿ ರಣ್- ಆಲಿ ತಮ್ಮ ಪರ್ಸನಲ್‌ ವಿಚಾರಗಳನ್ನು ಹಂಚಿಕೊಂಡಿದ್ದು ಹೆಚ್ಚು ಅಂದ್ರೆ ತಪ್ಪಾಗದು. 

ಆಲಿಯಾ ಬೇಕೇ ಬೇಕು:

Tap to resize

Latest Videos

ಅಯಾನ್ ಮುಖರ್ಜಿ ಜೊತೆ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾತನಾಡುವಾಗ ಅನ್‌ಸ್ಕ್ರೀನ್ ಕ್ಯಾರೆಕ್ಟ್‌ ಮತ್ತು ಆಫ್‌ಸ್ಕ್ರೀನ್‌ ಕ್ಯಾರೆಕ್ಟರ್‌ನಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂದು ರಣಬೀರ್ ರಿವೀಲ್ ಮಾಡಿದ್ದಾರೆ. 

'ನಾನು ಇಂಡಿಪೆಂಡೆಂಟ್‌ ಅಂತ ಎಲ್ಲೇ ಹೋದ್ದರೂ ಹೇಳಿಕೊಳ್ಳುತ್ತೀನಿ ಆದರೆ ರಿಯಾಲಿಟಿ ಬೇರೆ ಇದೆ. ನಾನು ಅಲಿಯಾ ಮೇಲೆ ತುಂಬಾ ಡಿಪೆಂಡ್ ಆಗಿರುವೆ. ಆಲಿಯಾ ಪಕ್ಕದಲ್ಲಿ ಇಲ್ಲ ಅಂದ್ರೆ ನಾನು ತಿಂಡಿನೂ ತಿನ್ನುವುದಿಲ್ಲ ಬಾತ್‌ರೂಮ್‌ಗೂ ಹೋಗುವುದಿಲ್ಲ. ಆಲಿಯಾ ಎಲ್ಲಿದ್ದಾಳೆ ಎಂದು ತಿಳಿದುಕೊಂಡ ಮೇಲೆ ನನ್ನ ಕೆಲಸ ಆರಂಭಿಸುವುದು. ನನ್ನ ಪಕ್ಕ ಆಲಿಯಾ ಇದ್ದರೆ ಧೈರ್ಯ ಹೆಚ್ಚಾಗುತ್ತದೆ ಜೊತೆಗಿದ್ದೀವಿ ಅಂದ್ರೆ ನಾವು ರೊಮ್ಯಾನ್ಸ್‌ ಮಾಡ್ತೀವಿ ಅಂತಲ್ಲ  ಸುಮ್ಮನೆ ಕುಳಿತುಕೊಳ್ಳಬೇಕು ಅಂತಲ್ಲ ಕಣ್ಣಿಗೆ ಕಾಣಿಸಿಕೊಂಡರೆ ಅಷ್ಟೇ ಸಾಕು' ಎಂದು ರಣಬೀರ್ ಹೇಳಿದ್ದಾರೆ.

ರಣಬೀರ್ ಮಾತುಗಳನ್ನು ಆಲಿಯಾ ಭಟ್ ಒಪ್ಪಿಕೊಂಡಿದ್ದಾರೆ 'ನಾನು ಪಕ್ಕದಲ್ಲಿ ಇಲ್ಲ ಅಂದ್ರೆ ರಣಬೀರ್‌ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ. ನಾನು ಸುತ್ತಲಿಲ್ಲ ಅಂದ್ರೆ ರಣಬೀರ್ ಪ್ರತಿಯೊಂದು ಕೆಲಸವನ್ನು ಲಾಸ್ಟ್‌ ಮಿನಿಟ್‌ಗೆ ಬಿಡುತ್ತಾನೆ' ಎಂದಿದ್ದಾರೆ ಆಲಿಯಾ ಭಟ್. 

ಪಿಂಕ್ ಕಫ್ತಾನ್ ಧರಿಸಿ ಪತಿ ಜೊತೆ ಸಿಂಪಲ್ ಪೋಸ್ ನೀಡಿದ ಗರ್ಭಿಣಿ ಅಲಿಯಾ; ಫೋಟೋ ವೈರಲ್

 

ಸುಮಾರ 5 ವರ್ಷಗಳ ಕಾಲ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪ್ರೀತಿಸಿ ಏಪ್ರಿಲ್ 2022 ತಿಂಗಳಿನಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಜೂನ್‌ 2022 ತಿಂಗಳಲ್ಲಿ ಮೊದಲ ಮಗುವನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರ ರಿವೀಲ್ ಮಾಡಿದ್ದರು. ಸಿನಿಮಾ, ಜಾಹೀರಾತು ಮತ್ತು ಮನೆ ನಿರ್ಮಾಣ ಅಂತ ಬ್ಯುಸಿಯಾಗಿರುವ ಆಲಿಯಾ ರಣಬೀರ್ ಪರ್ಸನಲ್ ಲೈಫ್‌ನ ಕೆಲವೊಂದು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಡೆಲಿವರಿಗೆ ಯಾವ ಆಸ್ಪತ್ರೆ?

ಅಂದಹಾಗೆ ಅಲಿಯಾ ಭಟ್ ತನ್ನ ಹೆರಿಗೆಗೆ ಆಯ್ಕೆ ಮಾಡಿಕೊಂಡ ಆಸ್ಪತ್ರೆ ಮುಂಬೈನ ಎಚ್ ಎನ್ ರಿಲಯನ್ಸ್ ಫೌಂಡೇಶನ್. ಇದೇ ಆಸ್ಪತ್ರೆಯಲ್ಲಿ ಅಲಿಯಾ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ ಅಲಿಯಾ ಇದೇ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಅವರ ಮಾವ, ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಕೊನೆಯುಸಿರೆಳೆದಿದ್ದು ಅದೇ ಆಸ್ಪತ್ರೆ. ಹಾಗಾಗಿ ಅದೇ ಆಸ್ಪತ್ರೆಯಲ್ಲಿ ಅಲಿಯಾ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. 

ಗರ್ಭಿಣಿ ಪತ್ನಿಯನ್ನು ನಿರ್ಲಕ್ಷಿಸಿದ್ರಾ ರಣಬೀರ್? 'ಅಲಿಯಾ ಮೇಲೆ ಪ್ರೀತಿ ಇಲ್ವಾ' ಎಂದ ನೆಟ್ಟಿಗರು

 

 ಹಾಸಿಗೆಯಲ್ಲಿ ಹೊರಳಾಡುತ್ತಾಳೆ:

ಆಲಿಯಾ ಭಟ್‌ ಬಗ್ಗೆಇಷ್ಟ ಆಗುವ ಒಂದು ಗುಣ ಕಷ್ಟ ಆಗುವ ಒಂದು ಗುಣದ ಬಗ್ಗೆ ರಣಬೀರ್ ಹೇಳಬೇಕಿತ್ತು. 'ಆಲಿಯಾ ಭಟ್‌ brilliant. ಆಕೆ ಏನೇ ಮಾಡಿದ್ದರೂ ಅದ್ಭುತವಾಗಿ ಮಾಡುತ್ತಾಳೆ ಈ ಗುಣ ನನಗೆ ಇಷ್ಟ. ಇಷ್ಟವಿಲ್ಲದ ಗುಣ ಅಂದ್ರೆ ಆಕೆ ಮಲಗುವಾಗ ನನಗೆ ಒಂದು ಸಮಸ್ಯೆ ಆಗುತ್ತೆ. ಮಲಗುವಾಗ ಸರಿಯಾಗಿರುತ್ತಾಳೆ ಆಮೇಲೆ ನಿಧಾನಕ್ಕೆ ಜರಗುತ್ತಾಳೆ ಇದರಿಂದ ನಾನು ಮಲಗುವ ಜಾಗ ಕಡಿಮೆ ಆಗುತ್ತದೆ. ಅಕೆ ತಲೆ ಒಂದು ಕಡೆ ಇರುತ್ತೆ ಕಾಲುಗಳು ಮತ್ತೊಂದು ಕಡೆ ಮುಖ ಮಾಡಿರುತ್ತದೆ. ನಾನು ಒಂದು ಮೂಲೆಯಲ್ಲಿ ಮಲಗಿರಬೇಕು. ಈ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ ಆದರೂ ಸಹಿಸಿಕೊಳ್ಳುತ್ತಿರುವೆ' ಎಂದು ರಣಬೀರ್ ಹೇಳಿದ್ದಾರೆ. 

click me!