
ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್(Ranbir Kapoor And Alia Bhatt) ಏಪ್ರಿಲ್ 14ರಂದು ಹಸೆಮಣೆ ಏರಿದ್ದರು. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ ಆರ್ ಕೆ ಅಪಾರ್ಟ್ಮೆಂಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಣಬೀರ್ ಕಪೂರ್ ಬಹುಕಾಲದ ಗೆಳತಿ ಅಲಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ತಾರಾ ಜೋಡಿಯ ಮದುವೆಗೆ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಇಬ್ಬರ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಮದುವೆ ಸಮಾರಂಭ ಮುಗಿಯುತ್ತಿದ್ದಂತೆ ರಣಬೀರ್ ಕಪೂರ್ ಕೆಲಸಕ್ಕೆ ಮರಳಿದ್ದರು. ರಣಬೀರ್ ಕಪೂರ್ ಕೆಲಸಕ್ಕೆ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ರಣಬೀರ್ ಅವರಿಗೆ ಶಾದಿ ಮುಬಾರಕ್ ಎಂದು ಅಭಿಮಾನಿಗಳು ವಿಶ್ ಮಾಡಿದ್ದರು. ಇದೀಗ ರಣಬೀರ್ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಜೊತೆ ಮನಾಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ರಣಬೀರ್ ಮತ್ತು ರಶ್ಮಿಕಾ ಇಬ್ಬರೂ ಮನಾಲಿಗೆ ಹೋಗಲ ಕಾರಣ ಅನಿಮಲ್ ಸಿನಿಮಾದ ಚಿತ್ರೀಕರಣ.
ರಣಬೀರ್- ಆಲಿಯಾ ಮದುವೆಯಲ್ಲಿ ಯಾರೆಲ್ಲಾ, ಏನೆಲ್ಲಾ ಗಿಫ್ಟ್ ಕೊಟ್ಟಿದ್ದಾರೆ ನೋಡಿ..!
ಹೌದು, ನಟಿ ರಶ್ಮಿಕಾ ಮಂದಣ್ಣ(Rashmika Mandanna) ಮೊದಲ ಬಾರಿಗೆ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು ಮನಾಲಿಯಲ್ಲಿ(Manali) ಚಿತ್ರೀಕರಣ ನಡೆಯುತ್ತಿದೆ. ಸದ್ಯ ಇಬ್ಬರು ಮನಾಲಿ ತಲುಪಿದ್ದು ಅಲ್ಲಿ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ರಶ್ಮಿಕಾ ಮಂದಣ್ಣ ಹಿಮಾಚಲ್ ಪ್ರದೇಶದ ಟೋಪಿ ಮತ್ತು ಶಾಲು ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ರಣಬೀರ್ ಸಹ ಸಂತಸದಿಂದ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಅಂದಹಾಗೆ ಅನಿಮಲ್(Animal) ಸಿನಿಮಾಗೆ ತೆಲುಗಿನ ಕ್ಯಾತ ನಿರ್ದೇಶಕ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ರಶ್ಮಿಕಾಗೂ ಮೊದಲು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಆಯ್ಕೆಯಾಗಿದ್ದರು. ಬಳಿಕ ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ. ರಶ್ಮಿರಕಾಗೆ ಇದು ಮೂರನೇ ಬಾಲಿವುಡ್ ಸಿನಿಮಾ. ಮೊದಲ ಸಿನಿಮಾ ಬಿಡುಗಡೆಗೂ ಮೊದಲೆ ರಶ್ಮಿಕಾ ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ವರ್ಷಗಳಿಂದ ರೋಟಿನೇ ತಿಂದಿಲ್ಲಂತೆ Ranbir Kapoor ಇಲ್ಲಿದೆ ನಟನ fitness diet ಸಿಕ್ರೇಟ್
ಇನ್ನು ನಟ ರಣಬೀರ್ ಕಪೂರ್ ತೆರೆಮೇಲೆ ಬರದೇ ಅನೇಕ ವರ್ಷಗಳಾಗಿದೆ. ರಣಬೀರ್ ಕಪೂರ್ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಸದ್ಯ ಪತ್ನಿ ಅಲಿಯಾ ಜೊತ ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿರುವ ರಣಬೀರ್ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬ್ರಹ್ಮಾಸ್ತ್ರ್ ಮೂಲಕ ರಣಬೀರ್ ಕಪೂರ್ ಈ ವರ್ಷ ತೆರೆ ಮೇಲೆ ಬರುವ ಸಾಧ್ಯತೆ ಇದೆ. ಇತ್ತ ಅಲಿಯಾ ಭಟ್ ಸಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮುದುವೆ ಮುಗಿಯುತ್ತಿದ್ದಂತೆ ಅಲಿಯಾ ಮತ್ತು ರಣಬೀರ್ ಇಬ್ಬರೂ ಹನಿಮೂನ್ ಬದಲು ಕೆಲಸಕ್ಕೆ ಹಾಜರಾಗಿದ್ದರು. ಇತ್ತೀಚಿಗೆ ಕೆಲಸಕ್ಕೆ ಹೊರಟಿದ್ದ ಅಲಿಯಾ ಫೋಟೊಗಳು ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.