ಮದುವೆಗೂ ಮೊದಲೇ ರಾಹುಲ್-ಅತಿಯಾ ಹೊಸ ಮನೆಗೆ ಶಿಫ್ಟ್; ಬಾಡಿಗೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

Published : Apr 22, 2022, 01:53 PM ISTUpdated : Apr 22, 2022, 01:54 PM IST
ಮದುವೆಗೂ ಮೊದಲೇ ರಾಹುಲ್-ಅತಿಯಾ ಹೊಸ ಮನೆಗೆ ಶಿಫ್ಟ್; ಬಾಡಿಗೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

ಸಾರಾಂಶ

ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಜೋಡಿ ಮದುವೆಗೂ ಮೊದಲೇ ಮುಂಬೈನಲ್ಲಿ ಒಟ್ಟಿಗೆ ಇರಲು ದುಬಾರಿ ಬಾಡಿಗೆ ಮನೆ ಮಾಡಿದ್ದಾರೆ ಎಂದು ಆಂಗ್ಲ ವೆಬ್ ಸೈಟ್ ಪಿಂಕ್ ವಿಲ್ಲ ವರದಿ ಮಾಡಿದೆ. ಆಗಾಗ ಕದ್ದು-ಮುಚ್ಚಿ ಭೇಟಿಯಾಗುತ್ತಿದ್ದ ಈ ಪ್ರಣಯ ಪಕ್ಷಿಗಳು ಇದೀಗ ಒಟ್ಟಿಗೆ ಒಂದೇ ಮನೆಯಲ್ಲಿ ಇರಲು ಪ್ಲಾನ್ ಮಾಡಿದ್ದಾರೆ.

ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಕಳೆದ ಮೂರ್ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಈಗಾಗಲೇ ಬಹಿರಂಗವಾಗಿದೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಸ್ಟಾರ್ ಜೋಡಿ ತಮ್ಮ ಪ್ರೀತಿನ್ನು ಬಿಚ್ಚಿಡುತ್ತಿದ್ದಾರೆ. ಈ ಪ್ರಣಯ ಪಕ್ಷಿಗಳು ಇದೀಗ ಮದುವೆಗೆ ಸಿದ್ಧವಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಚಳಿಗಾಲದಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಈ ನಡುವೆ ಇಬ್ಬರ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಅಂದಹಾಗೆ ಈ ಜೋಡಿ ಮದುವೆಗೂ ಮೊದಲೇ ಮುಂಬೈನಲ್ಲಿ ಒಟ್ಟಿಗೆ ಇರಲು ದುಬಾರಿ ಬಾಡಿಗೆ ಮನೆ ಮಾಡಿದ್ದಾರೆ ಎಂದು ಆಂಗ್ಲ ವೆಬ್ ಸೈಟ್ ಪಿಂಕ್ ವಿಲ್ಲ ವರದಿ ಮಾಡಿದೆ. ಆಗಾಗ ಕದ್ದು-ಮುಚ್ಚಿ ಭೇಟಿಯಾಗುತ್ತಿದ್ದ ಈ ಪ್ರಣಯ ಪಕ್ಷಿಗಳು ಇದೀಗ ಒಟ್ಟಿಗೆ ಒಂದೇ ಮನೆಯಲ್ಲಿ ಇರಲು ಪ್ಲಾನ್ ಮಾಡಿದ್ದಾರೆ. ಆಗಲೆ ಇಬ್ಬರು ಮುಂಬೈನ ಬಾಂದ್ರದಲ್ಲಿ ಅಪಾರ್ಟ್ಮೆಂಟ್ ಬಾಡಿಗೆ ಪಡೆದಿದ್ದಾರೆ ಎನ್ನಲಾಗಿದೆ. ಬಾಂದ್ರಾದ ಕಾರ್ಟರ್ ರೋಡ್ ಅಪಾರ್ಟ್ಮೆಂಟ್ ನಲ್ಲಿ ಹೊಸ ಮನೆ ಬಡಿಗೆ ಪಡೆದಿದ್ದಾರಂತೆ. ರೂಮ್ ಇರುವ ಈ ಮನೆಗೆ 4 ತಿಂಗಳಿಗೆ ಈ ಜೋಡಿ ಬರೋಬ್ಬರಿ 10 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ ವರದಿ ಮಾಡಿದೆ.

ಹಸೆಮಣೆ ಏರಲು ಸಜ್ಜಾದ ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ

ಅಂದಹಾಗೆ ಇಬ್ಬರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್, ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಬಳಿಕ ಬಾಲಿವುಡ್ ಮತ್ತೊಂದು ತಾರಾ ಜೋಡಿ ಮದುವೆಗೆ ಸಜ್ಜಾಗಿದೆ. ಈಗಾಗಲೇ ಮದುವೆಗೆ ಸಿದ್ದತೆ ನಡೆಯುತ್ತಿದೆ ಎಂದು ಆಪ್ತಮೂಲಗಳು ತಿಳಿಸಿವೆ ಎಂದು ಪಿಂಕ್ ವಿಲ್ಲ ವರದಿ ಮಾಡಿತ್ತು. ಈ ವರ್ಷದ ಕೊನೆಯಲ್ಲಿ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ದಕ್ಷಿಣ ಭಾರತೀಯ ಶೈಲಿಯಲ್ಲಿ ಇಬ್ಬರ ಮದುವೆ ನಡೆಯಲಿದ್ದು, ಶೆಟ್ಟಿ ಸಂಪ್ರದಾಯದಂತೆ ರಾಹುಲ್ ಮತ್ತು ಅತಿಯಾ ಹಸೆಮಣೆ ಏರಲಿದ್ದಾರೆ. ಅಂದಹಾಗೆ ಸುನಿಲ್ ಶೆಟ್ಟಿ ಕರ್ನಾಟಕದ ಮೂಲ್ಕಿ ಮೂಲದವರು. ರಾಹುಲ್ ಕೂಡ ಮಂಗಳೂರು ಮೂಲದವರು. ಇಬ್ಬರು ತುಳು ಕುಟುಂಬದವರು. ಹಾಗಾಗಿ ದಕ್ಷಿಣ ಭಾರತೀಯ ಶೈಲಿಯಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ.

Athiya Shetty ಮಾತ್ರವಲ್ಲ, ಈ ನಟಿಯರ ಜೊತೆ KL Rahulಗೆ ಲಿಂಕ್‌?

ಅತಿಯಾ ಶೆಟ್ಟಿ ತಂದೆ ಖ್ಯಾತ ನಟ ಸುನಿಲ್ ಶೆಟ್ಟಿ, ಭಾವಿ ಅಳಿಯ ಕೆಎಲ್ ರಾಹುಲ್ ಅವರನ್ನು ತುಂಬಾ ಇಷ್ಟಪಡುತ್ತಾರೆ. ಇತ್ತೀಚಿಗೆ ಐಪಿಎಲ್ ಪಂದ್ಯ ವೀಕ್ಷಿಸಲು ಸಹ ಸುನಿಲ್ ಶೆಟ್ಟಿ ಮಗಳ ಜೊತೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಿದ್ದರು. ಭಾವಿ ಅಳಿಯ ರಾಹುಲ್ ಅವರಿಗೆ ಸಪೋರ್ಟ್ ಮಾಡುವ ಮೂಲಕ ಸುನಿಲ್ ಶೆಟ್ಟಿ ಸಂಭ್ರಮಿಸಿದ್ದರು. ಅತಿಯಾ ಕೂಡ ಭಾವಿ ಪತಿ ರಾಹುಲ್ ಗೆ ಸಪೋರ್ಟ್ ಮಾಡಲು ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಅತಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಕೆ ಎಲ್ ರಾಹುಲ್ ಅವರಿಗೆ ಗೆಳತಿ ಅತಿಯಾ ಶೆಟ್ಟಿ ವಿಶ್ ಮಾಡಿದ್ದರು. ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿ ಭಾವಿ ಪತಿ ರಾಹುಲ್ ಜನ್ಮದಿನ ಸಂಭ್ರಮಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?