
ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್(Ranbir Kapoor and Alia Bhatt) ಮದುವೆಗೆ ಬಾಲಿವುಡ್ ಸಿದ್ಧವಾಗಿದೆ. ಇಬ್ಬರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಏಪ್ರಿಲ್ 13ರಿಂದ ಇಬ್ಬರ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಅಲಿಯಾ ಮತ್ತು ರಣಬೀರ್ ಕಪೂರ್ ಮದುವೆ ಸಂಭ್ರಮ ಏಪ್ರಿಲ್ 13 ರಿಂದ 17ರ ವರೆಗೆ ನಡೆಯಲಿದೆ (Ranbir Kapoor and Alia Bhatt wedding date) ಎಂದು ಹೇಳಲಾಗುತ್ತಿದೆ. ಸಂಗೀತ, ಮೆಹಂದಿ ಸಮಾರಂಭಗಳು ಈಗಾಗಲೇ ನಿಗದಿಯಾಗಿದೆ. ಆದರೆ ಈ ತಾರಾಜೋಡಿ ಮದುವೆ ದಿನಾಂಕವನ್ನು ಖಚಿತವಾಗಿ ಬಹಿರಂಗ ಪಡಿಸಿಲ್ಲ. ಇಬ್ಬರ ಮದುವೆ ಸಮಾರಂಭದಲ್ಲಿ ತೀರ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಗೆಸ್ಟ್ ಲಿಸ್ಟ ಕೂಡ ಸಿದ್ದವಾಗಿದ್ದು ಸುಮಾರು 450 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ರಣಬೀರ್ ಮತ್ತು ಅಲಿಯಾ ಮದುವೆಯ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳು ಬಹಿರಂಗವಾಗಿವೆ. ಈಗಾಗಲೇ ಮದುವೆಗೆ ಬರುವ ಗೆಸ್ಟ್, ಸ್ಥಳ, ಊಟದ ಮೆನು ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇದೀಗ ಅಲಿಯಾ ಮತ್ತು ರಣಬೀರ್ ಕಪೂರ್ ಹನಿಮೂನ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರು ಹನಿಮೂನ್ ಗೆ ಹೋಗಲು ಈಗಾಗಲೇ ಸ್ಥಳ ನಿಗಧಿಯಾಗಿದ್ದು ಫ್ಲೈಟ್ ಬುಕ್ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಂದಹಾಗೆ ಈ ತಾರಾ ಜೋಡಿ ಹನಿಮೂನ್ ಗೆ ಹೋಗಲು ಆಯ್ದುಕೊಂಡ ಸ್ಥಳ ದಕ್ಷಿಣ ಆಫ್ರಿಕ. ಅಲಿಯಾ ಮತ್ತು ರಣಬೀರ್ ಕಪೂರ್ ಈಗಾಗಲೇ ಒಮ್ಮೆ ಆಫ್ರಿಕಾಗೆ ಪ್ರವಾಸಕ್ಕೆ ತೆರಳಿದ್ದರು. ಇದೀಗ ಹನಿಮೂನ್ ಗೆ ಮತ್ತೆ ಆಪ್ರಿಕಾಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಇನ್ನು ಕೆಲವು ಮೂಲಗಳ ಪ್ರಕಾರ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಕಾರಣ ತಡವಾಗಿ ಹನಿಮೂನ್ ಗೆ ಹೋಗಲಿದ್ದಾರೆ ಎನ್ನಲಾಗಿದೆ. ಮದುವೆ ಬಳಿಕ ಅಲಿಯಾ ಮತ್ತು ರಣಬೀರ್ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ಹಮ್ಮಿಕೊಂಡಿದೆ. ಆರತಕ್ಷತೆಯಲ್ಲಿ ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರು ಭಾಗಿಯಾಗಲಿದ್ದಾರೆ. ಬಳಿಕ ರಣಬೀರ್ ಅನಿಮಲ್ ಶೂಟಿಂಗ್ ಗೆ ತೆರಳಿದ್ದಾರೆ. ಹಾಗಾಗಿ ಚಿತ್ರೀಕರಣ ಮುಗಿಸಿ ಹೋಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಇಬ್ಬರು ಆಫ್ರಿಕಾಗೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಆಲಿಯಾ ಭಟ್- ರಣಬೀರ್ ಕಪೂರ್ ವೈವಾಹಿಕ ಜೀವನ ಹೇಗಿರಲಿದೆ? ಜ್ಯೋತಿಷ್ಯ ಏನನ್ನುತ್ತದೆ?
ಊಟದ ಮೆನುವಿನಲ್ಲಿ ಏನಿದೆ
ಆಂಗ್ಲ ಮಾಧ್ಯಮ ವರದಿ ಮಾಡಿರುವ ಪ್ರಕಾರ ಅಲಿಯಾ ಮದುವೆಯಲ್ಲಿ ತರಹೇವಾರಿ ಖಾದ್ಯಗಳು ಅತಿಥಿಗಳಿಗಾಗಿ ಸಿದ್ಧವಾಗುತ್ತಿದೆ. ಭಾರತದ ಅಡುಗೆ ಶೈಲಿ ಮಾತ್ರವಲ್ಲದೆ ವಿದೇಶಿ ಊಟದ ಶೈಲಿ ಕೂಡ ಅಲಿಯಾ ಮತ್ತು ರಣಬೀರ್ ಮದುವೆಗಾಗಿ ತಯಾರಾಗುತ್ತಿದೆ. ಮೆಕ್ಸಿಕನ್, ಇಟಾಲಿಯನ್, ಮುಘಲೈ, ಪಂಜಾಬಿ ಸೇರಿದಂತೆ ವಿವಿಧ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 50ಕ್ಕೂ ಹೆಚ್ಚು ಊಟದ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.
ಪ್ರಸಿದ್ಧ ಬಾಣಸಿಗರಿಂದ ರಣಬೀರ್ ಮತ್ತು ಅಲಿಯಾ ಮದುವೆ ಊಟ ತಯಾರಾಗುತ್ತಿದೆ. ರಣಬೀರ್ ಕಪೂರ್ ತಾಯಿ ನೀತು ಕಪೂರ್ ಲಕ್ನೋ ಮತ್ತು ದೆಹಲಿಯಿಂದ ಬಾಣಸಿಗರನ್ನು ಕರೆಸಿದ್ದಾರಂತೆ. ಕಪೂರ್ ಕುಟುಂಬ ದ ನೆಚ್ಚಿನ ಬಾಣಸಿಗರು ರಣಬೀರ್ ಮದುವೆ ಊಟ ತಯಾರಿಸುತ್ತಿದ್ದಾರೆ. ಊಟದಲ್ಲಿ ವೆಜ್ ಮತ್ತು ನಾನ್ ವೆಜ್ ಎರಡು ಇರಲಿದೆ. ಲಕ್ನೋ ವಿಶೇಷದ ಕಬಾಬ್, ಬಿರಿಯಾನಿ ದೆಹಲಿ ವಿಶೇಷ ಚಾಟ್ ಹೀಗೆ ಪ್ರತಿಯೊಂದು ಕೌಂಟರ್ ಸಹ ಇರಲಿದೆಯಂತೆ. ಅಲಿಯಾ ಭಟ್ ಶುದ್ಧ ಸಸ್ಯಹಾರಿ ಹಾಗಾಗಿ ಎರಡು ರೀತಿಯ ಖಾದ್ಯಗಳು ಲಭ್ಯವಿರಲಿದೆ.
Alia Ranbir wedding ಏಪ್ರಿಲ್ 15ರಂದು ಮದುವೆ, ಮೆಹಂದಿ, ಹಳದಿ ಸಂಪೂರ್ಣ ಗೆಸ್ಟ್ ವಿವರ
ಅಂದಹಾಗೆ ರಣಬೀರ್ ಮತ್ತ ಅಲಿಯಾ ಇಬ್ಬರು ಪೂರ್ವಜರ ಮನೆಯಲ್ಲಿ ಹಸೆಮಣೆ ಏರುತ್ತಿದ್ದಾರೆ. ಪೂರ್ವಜರ ಮನೆ ಎಂದರೆ ರಣಬೀರ್ ಕಪೂರ್ ಪೂರ್ವಜರು ಬದುಕಿ ಬಾಳಿದ ಆರ್ ಕೆ ಮನೆ. ವಿಶೇಷ ಎಂದರೆ ಇದೆ ಮನೆಯಲ್ಲಿ ರಣಬೀರ್ ತಂದೆ-ತಾಯಿ ಅಂದರೆ ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆಯಾಗಿದ್ದರು. ಹಾಗಾಗಿ ಅದೇ ಹಳೆಯ ಮನೆಯಲ್ಲಿ ರಣಬೀರ್ ಕೂಡ ಅಲಿಯಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಅಂದಹಾಗೆ ಈ ತಾರಾ ಜೋಡಿ ಮದುವೆ ಬಳಿಕ ಚಿತ್ರರಂಗದ ಸ್ನೇಹಿತರಿಗಾಗಿ ಏಪ್ರಿಲ್ ಕೊನೆಯ ವಾರದಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಏರ್ಪಡಿಸಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.