ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಕಿರುತೆರೆ ಲೋಕ ಪ್ರೇಕ್ಷಕರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದೆ. ರಿಯಾಲಿಟಿ ಶೋ ಮತ್ತು ಧಾರಾವಾಹಿಗಳು ಪ್ರೇಕ್ಷಕರನ್ನು ಹೆಚ್ಚು ಹೊತ್ತು ಟಿವಿ ಮುಂದೆ ಕೂರಿಸುತ್ತಿವೆ. ಅದರಲ್ಲೂ ವೀಕೆಂಡ್ ನಲ್ಲಿ ಭರ್ಜರಿ ಮನರಂಜನೆ ನೀಡಲು ವಿವಿಧ ವಾಹಿನಿಗಳಲ್ಲಿ ತರವೇವಾರಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ವಿಶೇಷ ಎಂದರೆ ಸ್ಟಾರ್ ಕಲಾವಿದರು ಸಹ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಟಿವಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮೇಘನಾ ರಾಜ್(Meghana Raj), ತಾರಾ(Thara), ಅನು ಪ್ರಭಾಕರ್(Anu Prabhakar), ರಚಿತಾ ರಾಮ್(Rachita Ram), ರವಿಚಂದ್ರನ್(Ravichandran), ಲಕ್ಷ್ಮಿ ಹೀಗೆ ತಾರೆಯರ ದಂಡೆ ಕಿರುತೆರೆಯಲ್ಲಿದೆ. ಇದೀಗ ಮತ್ತೋರ್ವ ಸ್ಟಾರ್ ನಟ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಮತ್ಯಾರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivara Kumar).
ಸ್ಯಾಂಡಲ್ ವುಡ್ ನ ಖ್ಯಾತ ನಟ ಶಿವರಾಜ್ ಕುಮಾರ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಶಿವಣ್ಣ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಮತ್ತು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೆ ಶಿವಣ್ಣ ಟಿವಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್(dance karnataka dance show) ರಿಯಾಲಿಟಿ ಶೋನಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋನಲ್ಲಿ ಶಿವರಾಜ್ ಕುಮಾರ್ ಜಡ್ಜ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಜೀ ವಾಹಿನಿ ಬಹಿರಂಗ ಪಡಿಸಿ ಶಿವಣ್ಣ ಪ್ರೋಮೋ ಬಿಡುಗಡೆ ಮಾಡಿದೆ.
ಉಪೇಂದ್ರ ‘ಹೋಮ್ ಮಿನಿಸ್ಟರ್’ ಸಿನಿಮಾ ನೋಡಿ ಏನಂದ್ರು ಶಿವಣ್ಣ?
ಪ್ರೋಮೋದಲ್ಲಿ ಶಿವಣ್ಣ 'ಬ್ಲ್ಯಾಕ್ ಕೋಟ್, ಶೂ ಎಲ್ಲಾ ಬಂತಾ, ನಡೆಯೋ ಶಾಟ್ ತೆಗಿತೀರಾ, ವಾಚ್ ಹಾಕೊಳೋ ಶಾಟ್ ತೆಗಿತೀರಾ, ಕೋಟ್ ಹಾಕೊಳೋ ಶಾಟ್ ಕೂಡ ತೆಗೆತೀರಾ ಒಂದ್ಸಾರಿ ಮಳೆಲಿ ನಡೆಸುತ್ತೀರಾ ಇನ್ನೊಂದು ಸಾರಿ ಬೆಂಕಿಯಲ್ಲಿ ನಡಿಸ್ತೀರಾ ಮತ್ತೆ ಸ್ಲೋ ಮೋಷನ್ ನಲ್ಲಿ ಮೂನ್ ವಾಕ್ ಮಾಡಿಸ್ತಾ ಕ್ಯಾಮರ್ ಟಿಲ್ಟ್ ಮಾಡಿ ಫೇಸ್ ನ ರಿವೀಲ್ ಮಾಡ್ತೀರಾ' ಎಂದು ಕ್ಯಾಪ್ ಮುಖಕ್ಕೆ ಹಾಕಿ ಕುಳಿತ್ತಿದ್ದ ಶಿವಣ್ಣ ಕ್ಯಾಪ್ ತೆಗೆಯುತ್ತಾರೆ. 'ಇದೆಲ್ಲ ನಿಮಗೆ ಹೇಗೆ ಗೊತ್ತಾಯ್ತು ಸರ್...' ಎಂದು ನಿರ್ದೇಶಕರು ಕೇಳುತ್ತಾರೆ. ಇದಕ್ಕೆ ಶಿವಣ್ಣ 'ನಾನು ಇದುವರೆಗೂ 125 ಸಿನಿಮಾಗಳನ್ನು ಮಾಡಿದ್ದೀನಿ. ನನಗೆ ಈ ಕ್ಯಾಟ್ ವಾಕ್ ಮೂನ್ ವಾಕ್ ಎಲ್ಲಾ ಸೆಟ್ ಆಗಲ್ಲ ನನಗೆ ಏನ್ ಇದ್ರು ಲೋಕಲ್, ಮಾಸ್' ಎನ್ನುತ್ತಿದ್ದಂತೆ ಬ್ಯಾಗ್ರೌಂಡ್ ನಲ್ಲಿ ಟಪಾಂಗುಚಿ ಮ್ಯೂಸಿಕ್ ಶುರುವಾಗಿತ್ತೆ. 'ಪ್ರೋಮೋ ತಾನೆ ಬೇಕು ಕೊಡ್ತೀನಿ ಬಾ' ಎಂದು ಜನರ ಮಧ್ಯೆ ಮಸ್ತ್ ಸ್ಟೆಪ್ ಹಾಕುವ ಶಿವಣ್ಣ ಪ್ರೋಮೋ ಅಭಿಮಾನಿಗಳ ಹೃದಯ ಗೆದ್ದಿದೆ.
ಮಗುವಿನಂತೆ ತೊಟ್ಟಿಲಲ್ಲಿ ಮಲಗಿದ ಶಿವರಾಜ್ ಕುಮಾರ್, ವಿಡಿಯೋ ವೈರಲ್..!
ಅಂದಹಾಗೆ ಈ ಪ್ರೋಮೋಗೆ 'ಕುಣಿಯೋ ಹೆಜ್ಜೆಗಳಿಗೆ ರೆಡಿಯಾಯ್ತು ಸ್ಟೇಜು, ಡ್ಯಾನ್ಸಿಂಗ್ ಚಕ್ರವರ್ತಿ ಶಿವಣ್ಣಾನೇ ಜಡ್ಜು. Dance ಕರ್ನಾಟಕ Dance ಸೀಸನ್ 6' ಎಂದು ಕ್ಯಾಪ್ಷನ್ ಹಾಕಲಾಗಿದೆ. ಅಂದಹಾಗೆ ಏಪ್ರಿಲ್ 16ರಿಂದ ಡಾನ್ಸ್ ಕರ್ನಾಟಕ ಡಾನ್ಸ್ ಪ್ರಾರಂಭವಾಗುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಶೋ ಪ್ರಸಾರವಾಗುತ್ತಿದೆ. ಅಂದಹಾಗೆ ಶಿವಣ್ಣ ಜೊತೆ ಯಾರೆಲ್ಲಾ ಜಡ್ಜ ಆಗಿ ಸಾಥ್ ನೀಡಲಿದ್ದಾರೆ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಸದ್ಯದಲ್ಲೇ ಎಲ್ಲಾ ಮಾಹಿತಿ ಹಂಚಿಕೊಳ್ಳಲಿದೆ ವಾಹಿನಿ.