ಆಕೆಯ ಫ್ಯಾಷನ್‌ಗೆ ನಾನು ಫ್ಯಾನ್ ಅಲ್ಲ, ಅದು ಕೆಟ್ಟ ಅಭಿರುಚಿ; ಉರ್ಫಿ ವಿಚಿತ್ರ ಡ್ರೆಸ್‌ಗೆ ರಣಬೀರ್ ರಿಯಾಕ್ಷನ್

Published : Mar 18, 2023, 03:19 PM ISTUpdated : Mar 18, 2023, 03:58 PM IST
ಆಕೆಯ ಫ್ಯಾಷನ್‌ಗೆ ನಾನು ಫ್ಯಾನ್ ಅಲ್ಲ, ಅದು ಕೆಟ್ಟ ಅಭಿರುಚಿ; ಉರ್ಫಿ ವಿಚಿತ್ರ ಡ್ರೆಸ್‌ಗೆ ರಣಬೀರ್ ರಿಯಾಕ್ಷನ್

ಸಾರಾಂಶ

ಆಕೆಯ ಫ್ಯಾಷನ್‌ಗೆ ನಾನು ಫ್ಯಾನ್ ಅಲ್ಲ, ಅದು ಕೆಟ್ಟ ಅಭಿರುಚಿ ಎಂದು ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗೆ ರಣಬೀರ್ ಪ್ರತಿಕ್ರಿಯೆ ನೀಡಿದ್ದಾರೆ. 

ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಉರ್ಫಿ ಜಾವೇದ್ ತಮ್ಮ ಫ್ಯಾಶನ್ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಕೆಯ ವಿಚಿತ್ರ ಡ್ರೆಸ್‌ನಿಂದ ಅನೇಕ ಬಾರಿ ಟೀಕೆಗೆ ಒಳಗಾಗಿದ್ದು ಇದೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ ಆದರೂ ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಉರ್ಫಿ ಪ್ರತಿದಿನ ವಿಚಿತ್ರ ಡ್ರೆಸ್ ಮೂಲಕ ಕ್ಯಾಮರಾ ಮುಂದೆ ಬರ್ತಿದ್ದಾರೆ. ಅನೇಕರು ಉರ್ಫಿ ವಿರುದ್ಧ ಕಿಡಿ ಕಾರುತ್ತಾರೆ. ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಇದೀಗ ಉರ್ಫಿ ಬಗ್ಗೆ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮಾತನಾಡಿದ್ದಾರೆ. ನಟಿ ಕರೀನಾ ಕಪೂರ್ ಜೊತೆಗಿನ ಸಂದರ್ಶನದಲ್ಲಿ ರಣಬೀರ್ ಕಪೂರ್ ಉರ್ಫಿ ಬಗ್ಗೆ ಮಾತನಾಡಿದ್ದಾರೆ. 

'ಕರೀನಾ ಕಪೂರ್, ಉರ್ಫಿ ಫಲಕ ತೋರಿಸಿ ಈ ವ್ಯಕ್ತಿ ಯಾರೆಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. ಉರ್ಫಿ ಎಂದು ಹೇಳಿದ ರಣಬೀರ್ 'ನಾನು ಈ ರೀತಿಯ ಫ್ಯಾಷನ್ ಗೆ ದೊಡ್ಡ ಅಭಿಮಾನಿಯಲ್ಲ' ಎಂದು ಹೇಳಿದರು. ಮತ್ತೆ ಕರೀನಾ ಕಪೂರ್ ಮಾತನಾಡಿ, ಇದು ಒಳ್ಳೆಯ ಅಥವಾ ಕೆಟ್ಟ ಅಭಿರುಚಿನಾ ಎಂದು ಹೇಳಿದರು. ನಟ ರಣಬೀರ್ ತಕ್ಷಣಕ್ಕೆ 'ಕೆಟ್ಟ ಅಭಿರುಚಿ' ಎಂದು ಹೇಳಿದರು. 

Alia Bhatt: ಪತ್ನಿಯಿಂದ ದೂರವಿರಿ ಎಂದು ರಣಬೀರ್​ಗೆ ನೆಟ್ಟಿಗರ ಸಲಹೆ! ಯಾಕೆ ಗೊತ್ತಾ?

ಉರ್ಫಿ ಜಾವೇದ್, ನೆಟ್ಟಿಗರು ಮಾತ್ರವಲ್ಲದೇ ಬಾಲಿವುಡ್ ಮಂದಿಯ ಗಮನ ಸೆಳೆದಿದ್ದಾರೆ. ಕಂಗನಾ ರಣಾವತ್, ಮಸಾಬಾ ಗುಪ್ತಾ ಸೇರಿದಂತೆ ಅನೇಕರು ಉರ್ಫಿ ಫ್ಯಾಷನ್ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್‌ ಶೋನಲ್ಲಿ ನಟ ರಣವೀರ್ ಸಿಂಗ್ ಕೂಡ ಉರ್ಫಿ ಬಗ್ಗೆ ಮಾತನಾಡಿದ್ದರು. ಫ್ಯಾಷನ್ ಐಕಾನ್ ಎಂದು ಹೇಳಿದ್ದರು. ಉರ್ಫಿ ತನ್ನ ಉಡುಗೆ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬಾಲಿವುಡ್ ಸ್ಟಾರ್‌ಗಳು ಸಹ ಆಕೆಯ ಬಗ್ಗೆ ಮಾತನಾಡುತ್ತಿದ್ದಾರೆ. 

ಪತಿ, ಮಗಳ ಜೊತೆ ಲಂಡನಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡ ಆಲಿಯಾ ಭಟ್‌ ಫೋಟೋ ವೈರಲ್‌

ರಣಬೀರ್ ಕಪೂರ್ ಇತ್ತೀಚೆಗಷ್ಟೆ 'ತು ಜೂಟಿ ಮೈ ಮಕ್ಕಾರ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಲವ್ ರಂಜನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಣಬೀರ್ ಕಪೂರ್ ಜೊತೆ ಶ್ರದ್ಧಾ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಸದ್ಯ ರಣಬೀರ್ ಕಪೂರ್ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಸಿಕೊಂಡಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?
ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!