Urfi Javed: ರಣಬೀರ್​ ಕಪೂರ್​ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದೇಕೆ?

By Suvarna News  |  First Published Apr 10, 2023, 4:03 PM IST

Uorfi Javed: ರಣಬೀರ್​ ಕಪೂರ್​ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದೇಕೆ?
 


ನಟಿ ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಏನು ನೆನಪಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಫ್ಯಾಷನ್​ (Fashion) ಲೋಕದಲ್ಲಿ ಕಾಣಸಿಗದ ಎಲ್ಲಾ ವಸ್ತುಗಳನ್ನೂ ತನ್ನ ಮೈಮೇಲೆ ಹಾಕಿಕೊಂಡು ದಿನವೂ ವಿಚಿತ್ರ ವೇಷದಲ್ಲಿ ಕಾಣಿಸಿಕೊಳ್ಳುತ್ತಿರೋ ಈ ನಟಿ ದಿನವೂ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ. ಇದೇ ಆಕೆಗೆ ಖುಷಿ. ಬಟ್ಟೆ ಹಾಕಿಕೊಂಡರೆ ಮೈಮೇಲೆಲ್ಲಾ ಗುಳ್ಳೆಗಳು ಏಳುತ್ತದೆ ಎಂದು ಹೇಳಿಕೊಂಡಿರೋ ಉರ್ಫಿ (Urfi Javed) ಅಂಗಾಂಗ ಪ್ರದರ್ಶನ ಮಾಡದೇ ಯಾವ ಬಟ್ಟೆಗಳನ್ನೂ ಹಾಕಿಕೊಳ್ಳುವುದಿಲ್ಲ. ಈಕೆ ಟ್ರೋಲ್​ ಆಗುತ್ತಿರುವ ಪರಿಯನ್ನು ಕಂಡು ಕೆಲ ದಿನಗಳ ಹಿಂದೆ  ನಟ ಅರ್ಜುನ್​ ಕಪೂರ್​ ಅವರೇ ಉರ್ಫಿ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳಲು ಹಿಂಜರಿದಿದ್ದರು. ಅದಾದ ಬಳಿಕ ನಟ ರಣಬೀರ್​ ಕಪೂರ್​ (Ranabir Kapoor) ಉರ್ಫಿಯ ಬಟ್ಟೆಯ ಬಗ್ಗೆ ಟೀಕೆ ಮಾಡಿ, ಇದು ಬ್ಯಾಡ್​ ಟೇಸ್ಟ್​ (Bad tase) ಎಂದಿದ್ದರು. ರಣಬೀರ್ ಕಪೂರ್ ಅವರು ಕರೀನಾ ಕಪೂರ್ ಶೋಗೆ ಬಂದಿದ್ದರು. ಈ ವೇಳೆ ಅವರಿಗೆ ಫನ್​ಗೇಮ್ ನೀಡಲಾಯಿತು. ಕೆಲ ಸೆಲೆಬ್ರಿಟಿಗಳ ಫೋಟೋನ ತೋರಿಸಲಾಗಿತ್ತು. ಅಲ್ಲಿ ಸೆಲೆಬ್ರಿಟಿ ಮುಖನ ಮರೆ ಮಾಡಲಾಗಿತ್ತು.  ಅವರ ದೇಹ ಹಾಗೂ ಬಟ್ಟೆ ನೋಡಿ ಆ ಸೆಲೆಬ್ರಿಟಿ ಯಾರು ಎಂದು ಗುರುತಿಸಬೇಕು. ರಣಬೀರ್ ಕಪೂರ್ ಅವರು ಉರ್ಫಿನ ಗುರುತಿಸಿದ್ದರು. ‘ನಾನು ಉರ್ಫಿ ಜಾವೇದ್ ಅವರ ಅಭಿಮಾನಿ ಅಲ್ಲ’ ಎಂದು ರಣಬೀರ್ ಹೇಳಿದ್ದರು. ಅವರ ಬಗ್ಗೆ ಒಂದು ಮಾತಿನಲ್ಲಿ ಉತ್ತರ ನೀಡುವಂತೆ ಕೇಳಲಾಯಿತು. ಇದಕ್ಕೆ ‘ಬ್ಯಾಡ್ ಟೇಸ್ಟ್​’ ಎಂದು ಕರೆದರು ರಣಬೀರ್. ಇನ್ನು ಪ್ರಿಯಾಂಕಾ ಚೋಪ್ರಾ ಅವರ ಫೋಟೋ ತೋರಿಸಲಾಯಿತು. ಈ ವೇಳೆ ಅವರ ಡ್ರೆಸ್ಸಿಂಗ್​ ಸೆನ್ಸ್​​ನ ರಣಬೀರ್ ಹೊಗಳಿದ್ದರು.

ತಮ್ಮ ಬಟ್ಟೆಯ ಬಗ್ಗೆ ಬ್ಯಾಡ್​ ಟೇಸ್ಟ್​ ಎಂದು ಹೇಳಿರೋ ನಟ ರಣಬೀರ್​ ಕಪೂರ್​ ವಿರುದ್ಧ ಉರ್ಫಿ ಕಿಡಿ ಕಾರಿದ್ದಾರೆ. ಇವರು ನರಕಕ್ಕೆ ಹೋಗುತ್ತಾರೆ ಎಂದು ಜರಿದಿದ್ದಾರೆ. ಯಾವ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್​ ಉರ್ಫಿಯ ಬಟ್ಟೆಯ ವಿರುದ್ಧ  ಮಾತನಾಡಿದ್ದರೋ ಅದೇ ಕಾರ್ಯಕ್ರಮದಲ್ಲಿ  ಬಾಲಿವುಡ್‌ನ ಮೋಸ್ಟ್ ಗ್ಲಾಮರಸ್ ನಟಿಯರಲ್ಲಿ ಒಬ್ಬರಾದ ಕರೀನಾ ಕಪೂರ್ ಖಾನ್ (Kareena Kapoor Khan)  ವಿಚಿತ್ರವಾದ ಬಟ್ಟೆಗಳನ್ನು ಧರಿಸಿರುವ ಉರ್ಫಿ ಜಾವೇದ್ ಮೇಲೆ ಕ್ರಶ್ ಹೊಂದಿರುವುದಾಗಿ ಹೇಳಿದ್ದರು.  ಕರೀನಾ ಕಪೂರ್ ಖಾನ್ ಇತ್ತೀಚೆಗೆ ಉರ್ಫಿ ಜಾವೇದ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಉರ್ಫಿ ಜಾವೇದ್ ಅವರನ್ನು ಅವಳು ತುಂಬಾ ಧೈರ್ಯಶಾಲಿ ಹುಡುಗಿ ಎಂದು ಹೇಳಿದ್ದರು.  'ಫ್ಯಾಶನ್ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುತ್ತದೆ. ಉರ್ಫಿ ತನ್ನನ್ನು ತಾನು ಸಾಗಿಸುವ ಆತ್ಮವಿಶ್ವಾಸವನ್ನು ನಾನು ಅನುಭವಿಸುತ್ತೇನೆ. ನಾನು ಅವರಿಗೆ ನಮಸ್ಕರಿಸುತ್ತೇನೆ' ಎಂದು ಕರೀನಾ ಕಪೂರ್‌ ಹೇಳಿದ್ದರು.

Tap to resize

Latest Videos

Urfi vs Malaika: ಉರ್ಫಿ ಪಕ್ಕ ನಿಲ್ಲಲು ಹೆದರಿದ ಅರ್ಜುನ್​ ಕಪೂರ್​, ಗರ್ಲ್‌ಫ್ರೆಂಡ್‌ಗೆ ಹೆದರಿದ್ರಾ ಅಂದ್ರು ನೆಟ್ಟಿಗರು!

ಇದೀಗ ನಟ ರಣಬೀರ್​ ಕಪೂರ್​ ಮತ್ತು ನಟಿ ಕರೀನಾ ಕಪೂರ್​ ಹೆಸರನ್ನು ಉಲ್ಲೇಖಿಸಿರುವ ನಟಿ ಉರ್ಫಿ ಜಾವೇದ್​, ಕರೀನಾ ಕಪೂರ್​ ನನ್ನ ಬಗ್ಗೆ ಇಷ್ಟೊಂದು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೋಡಿ ಅಚ್ಚರಿಯಾಯಿತು. ಇದು ತಮಾಷೆಗೆ ಎಂದುಕೊಂಡಿದ್ದೆ. ಆದರೆ ಆಕೆ ನಿಜವಾಗಿಯೂ ನನ್ನನ್ನು ಹೊಗಳಿದ್ದಾರೆ ಎಂದು ಉರ್ಫಿ ಹೇಳಿದ್ದಾರೆ. ಕರೀನಾ ಅವರ ಮಾತು ಕೇಳಿ ಮೊದಲು ನಾನು ಆಗಸದಲ್ಲಿ ಹಾರಿದೆ.  ಮೊದಲಿಗೆ ನನಗೆ ಅದನ್ನು ನಂಬಲಾಗಲಿಲ್ಲ. ಕರೀನಾ ಮಾತನಾಡಿದ್ದ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ.   ಇದು ತಮಾಷೆ (Joke) ಎಂದು ನಾನು ಭಾವಿಸಿದೆ, ಕರೀನಾ  ನನ್ನ ಬಟ್ಟೆಗಳನ್ನು ಟೀಕಿಸಿರಬೇಕು ಎಂದುಕೊಂಡೆ. ನನ್ನ ವಿರುದ್ಧ ಮಾತನಾಡುತ್ತಿರಬಹುದು ಎಂದುಕೊಂಡೆ. ಆದರೆ ನಂತರ ವಿಡಿಯೋ ನೋಡಿದಾಗ ಆಕೆ ನಿಜಕ್ಕೂ ನನ್ನನ್ನು ಹೊಗಳಿರುವುದು ಕೇಳಿ ಖುಷಿಯಾಯಿತು.  ಆ ದಿನ ನಾನು ನನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದೇನೆ ಎಂದು ಅರಿತುಕೊಂಡೆ ಎಂದಿದ್ದಾರೆ ಉರ್ಫಿ.
 
ಅದೇ ಇನ್ನೊಂದು ರಣಬೀರ್​ ಕಪೂರ್​ ಅವರನ್ನು ತರಾಟೆಗೆ ತೆಗೆದುಕೊಂಡ ನಟಿ ಉರ್ಫಿ, ನನ್ನ ವಿರುದ್ಧ  ಮಾತನಾಡಿದ ನಟ ರಣಬೀರ್​ ನರಕಕ್ಕೆ ಹೋಗುತ್ತಾರೆ ಎಂದಿದ್ದಾರೆ. ಕರೀನಾ ನನ್ನನ್ನು ಹೊಗಳಿದ ಮೇಲೆ ಬೇರೆ ಯಾರ ಮಾನ್ಯತೆಯೂ ನನಗೆ ಬೇಕಿಲ್ಲ ಎಂದು ರಣಬೀರ್​ಗೆ ಟಾಂಗ್​ (Tong) ನೀಡಿದ್ದಾರೆ. ಯಾರೂ ಈ ರೀತಿ ಹೇಳುವ ಮೂಲಕ ನನ್ನ ಉತ್ಸಾಹವನ್ನು ಕುಂದಿಸಲು ಸಾಧ್ಯವಿಲ್ಲ. ಕರೀನಾ ಅವರ ಮಾತು ನನ್ನ ಉತ್ತೇಜನವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದ್ದಾರೆ ಉರ್ಫಿ. 

ಉರ್ಫಿ ಜಾವೆದ್‌ ಫ್ಯಾಷನನ್ನು ಹಾಡಿ ಹೊಗಳಿದ ಕರೀನಾ ಕಪೂರ್‌

click me!