ದಕ್ಷಿಣ ಭಾರತದ ಈ ಸ್ಟಾರ್ ತನ್ನ ಕ್ರಶ್ ಎಂದ ರಮ್ಯಾ ಕೃಷ್ಣನ್; ಯಾರು ಆ ನಟ?

Published : Sep 05, 2022, 11:49 AM IST
 ದಕ್ಷಿಣ ಭಾರತದ ಈ ಸ್ಟಾರ್ ತನ್ನ ಕ್ರಶ್ ಎಂದ ರಮ್ಯಾ ಕೃಷ್ಣನ್; ಯಾರು ಆ ನಟ?

ಸಾರಾಂಶ

ರಮ್ಯಾ ಕೃಷ್ಣನ್ ತನ್ನ ಕ್ರಶ್ ಯಾರೆಂದು ಬಹಿರಂಗ ಪಡಿಸಿದ್ದಾರೆ. ಹೌದು, ತೆಲುಗು ಸ್ಟಾರ್ ನಟರೊಬ್ಬರು ತನ್ನ ಕ್ರಶ್ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. 

ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣನ್ ಇತ್ತೀಚಿಗಷ್ಟೆ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಜಯ್ ದೋವರಕೊಂಡ ನಟನಯೆ ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಆದರೆ ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಪಾತ್ರ ಅಭಿಮಾನಿಗಳ ಹೃದಯ ಗೆದ್ದಿದೆ. ರಮ್ಯಾ ಕೃಷ್ಣನ್ ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಜೋಡಿಗಳ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ರಮ್ಯಾ ಕೃಷ್ಣನ್ ತನ್ನ ಕ್ರಶ್ ಯಾರೆಂದು ಬಹಿರಂಗ ಪಡಿಸಿದ್ದಾರೆ. ಹೌದು, ತೆಲುಗು ಸ್ಟಾರ್ ನಟರೊಬ್ಬರು ತನ್ನ ಕ್ರಶ್ ಎಂದು ಹೇಳಿದ್ದಾರೆ. 

ನಟಿ ರಮ್ಯಾ ಕೃಷ್ಣನ್ ತಮಿಳು ಮತ್ತು ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳ ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಅವರು ಪಾತ್ರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಶಿವಗಾಮಿನಿಯಾಗಿ ರಮ್ಯಾ ಕೃಷ್ಣನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದರು. ನಟಿಯಾಗಿ ಎಷ್ಟು ಬೇಡಿಕೆ ಬಳಿಸಿದ್ದರೊ ಪೋಷಕನಾಗಿಯಾಗಿಯೂ ಅಷ್ಟೆ ಬೇಡಿಕೆ ಸೃಷ್ಟಿಕೊಂಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ರವಿಚಂದ್ರನ್, ನಾಗಾರ್ಜುನ, ವಿಜಯ್, ಸಿಂಬು, ಸೂರ್ಯ ಹೀಗೆ ಅನೇಕ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. 

ಸ್ಟಾರ್ ಆಗಿದ್ರೂ ತೆಲುಗು ಬಿಟ್ಟು ಹಿಂದಿಯಲ್ಲಿ ನಟಿಸುವ ಧೈರ್ಯ ಇರ್ಲಿಲ್ಲ; ರಮ್ಯಾ ಕೃಷ್ಣ

ಸ್ಟಾರ್ ಕಲಾವಿದರ ಜೊತೆ ನಟಿಸಿರುವ ರಮ್ಯಾ ಕೃಷ್ಣನ್ ಕಿರುತೆರೆಕಾರ್ಯಕ್ರಮದಲ್ಲಿ ತನ್ನ ಕ್ರಶ್ ಯಾರು ಎಂದು ಬಹಿರಂಗ ಪಡಿಸಿದರು. ಅಂದಹಾಗೆ ರಮ್ಯಾ ಕೃಷ್ಣ ಕ್ರಶ್ ಅತ್ಯಾರು ಅಲ್ಲ ತೆಲುಗು ಸ್ಟಾರ್ ನಟ ನಾಗಾರ್ಜುನ. ಹೌದು, ಅಕ್ಕಿನೇನಿ ನಾಗಾರ್ಜುನ ತನ್ನ ಕ್ರಶ್ ಎಂದು ರಮ್ಯಾ ಹೇಳಿದ್ದಾರೆ. ಬಿಗ್ ಬಾಸ್ ಜೋಡಿಗಳ ರಿಯಾಲಿಟಿ ಶೋನಲ್ಲಿ ನಾಗಾರ್ಜುನ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಆ ವೇಳೆ ಕಾರ್ಯಕ್ರಮದ ನಿರೂಪಕಿ, ನಾಗಾರ್ಜುನ್ ಅವರನ್ನ ಕ್ರಶ್ ಬಗ್ಗೆ ಪ್ರಶ್ನಿಸಿದ್ರು. ಇದಕ್ಕೆ ರಮ್ಯಾ ಕೃಷ್ಣನ್ ಉತ್ತರ ಕೊಟ್ಟರು. ಅವರ ಕ್ರಶ್ ಯಾರೇ ಆಗಿದ್ರು ನಾಗಾರ್ಜುನ್ ಅವ್ರೇ ನನ್ನ ಕ್ರಶ್ ಎಂದು ಹೇಳಿದ್ದರು. ರಮ್ಯಾ ಕೃಷ್ಣ ಉತ್ತರ ಕೇಳಿ ಜನರೆಲ್ಲಾ ಶಿಳ್ಳೆ, ಚಪ್ಪಾಳೆ ಹಾಕಿದರು. ಸದ್ಯ ಪ್ರೋಮೋ ವೈರಲ್ ಆಗಿದೆ.



ರಮ್ಯಾ ಕೃಷ್ಣ- ಕೃಷ್ಣವಂಶಿ ಡಿವೋರ್ಸ್..? ಶಿವಗಾಮಿ ಬದುಕಲ್ಲಿ ಬಿರುಗಾಳಿ

ಅಂದಹಾಗೆ ರಮ್ಯಾ ಕೃಷ್ಣ ನಟ ನಾಗಾರ್ಜುನ ಜೊತೆಯೂ ಅನೇಕ ಸಿನಿಮಾಗಳಲ್ಲಿನಟಿಸಿದ್ದಾರೆ. ನಾಗಾರ್ಜುನ್ ಮತ್ತು ರಮ್ಯಾ ಕೃಷ್ಣ ಅವರ ಸೊಗಾಡೆ ಚಿನ್ನಿ ನಯನ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿತ್ತು. ರಮ್ಯಾ ಕೃಷ್ಣನ್ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ