ಬಾಲಿವುಡ್ ಬ್ಯೂಟಿ ರೇಖಾ ನೃತ್ಯ ನೋಡಿ ಕಣ್ಣೀರು ಹಾಕಿದ ಬಾಹುಬಲಿ ನಟಿ..!

By Suvarna News  |  First Published Apr 6, 2021, 9:21 AM IST

ಬಾಲಿವುಡ್ ನಟಿ ರೇಖಾ ಪರ್ಫಾರ್ಮೆನ್ಸ್ ನೋಡಿ ಭಾವುಕರಾದ ಬಾಹುಬಲಿ ನಟಿ | ಟಿವಿಯಲ್ಲಿ ರೇಖಾ ನೃತ್ಯ ನೋಡಿ ಕಣ್ಣೀರು ಹಾಕಿದ ರಮ್ಯಾ ಕೃಷ್ಣ


ನಟ ರಮ್ಯಾ ಕೃಷ್ಣನ್ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ, ಇಂಡಿಯನ್ ಐಡಲ್ 12 ಎಂಬ ಮ್ಯೂಸಿಕ್ ರಿಯಾಲಿಟಿ ಶೋನಲ್ಲಿ ಹಿರಿಯ ನಟ ರೇಖಾ ಅವರ ಅಭಿನಯ ನೋಡಿ ಭಾವುಕರಾಗಿದ್ದಾರೆ.

ನಟಿ ರಮ್ಯಾ ಅಳೋದನ್ನು ವಿಡಿಯೋದಲ್ಲಿ ಕಾಣಬಹುದು. ರೇಖಾ ವಾರಾಂತ್ಯದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಣಿಸಿಕೊಂಡರು. ಅವರ ಅಭಿನಯ, ನೃತ್ಯದಿಂದ ಎಲ್ಲರನ್ನೂ ಬೆರಗುಗೊಳಿಸಿದರು.

Tap to resize

Latest Videos

ಉಮ್ರಾವ್ ಜಾನ್ ಪಾತ್ರ ಪ್ರಶಸ್ತಿಗೆ ಅರ್ಹವಲ್ಲ: ರೇಖಾಗೆ ಹಿಂಗ್ಯಾಕೆನಿಸಿತು?

ಟಿವಿಯಲ್ಲಿ ಮೇಲೆ ರೇಖಾ ನೃತ್ಯ ನೋಡುವಾಗ ನಟಿ ಸ್ವತಃ ಭಾವನಾತ್ಮಕವಾಗುತ್ತಿರುವ ವೀಡಿಯೊವನ್ನು ಹಂಚಿಕೊಂಡ ರಮ್ಯಾ ಬರೆದರು: ಮೈ ಗಾಡ್ ಮೈ ಗಾಡ್ ! ನನ್ನ ದೇವತೆ ! ರೇಖಾ ಜಿ ಎಂದು ಕೈಮುಗಿಯುವ ಎಮೋಜಿಗಳನ್ನು ಸೇರಿಸಿದ್ದಾರೆ. ಕ್ಲಿಪ್‌ನಲ್ಲಿ ರೇಖಾ ಅವರ ಅಭಿನಯವನ್ನು ನೋಡುವಾಗ ರಮ್ಯಾ ಮಂತ್ರಮುಗ್ಧವಾಗಿ ಕಣ್ಣೀರು ಹಾಕಿದ್ದಾರೆ.

ರಮ್ಯ ಇತ್ತೀಚೆಗೆ ಕ್ವೀನ್ ಸೆಕೆಂಡ್ ಸೀಸನ್‌ ಬಗ್ಗೆ ಉತ್ಸುಕರಾಗಿದ್ದಾರೆಂದು ಹೇಳಿದ್ದಾರೆ. ಇತ್ತೀಚಿನ ಮಾಧ್ಯಮ ಸಂವಾದದಲ್ಲಿ, ಅವರು ಹೊಸ ಸೀಸನ್ ಚಿತ್ರೀಕರಣ ಪ್ರಾರಂಭಿಸಬೇಕಾಗಿದೆ ಎಂದು ಹೇಳಿದರು.

click me!