ಈ ಬಾಲಿವುಡ್ ತಾರೆಯರು ಜೊತೆಯಾಗಿ ನಟಿಸಲು ಬಿಲ್‌ಕುಲ್ ಒಪ್ಪೊಲ್ಲ!

Suvarna News   | Asianet News
Published : Apr 05, 2021, 04:45 PM IST
ಈ ಬಾಲಿವುಡ್ ತಾರೆಯರು ಜೊತೆಯಾಗಿ ನಟಿಸಲು ಬಿಲ್‌ಕುಲ್ ಒಪ್ಪೊಲ್ಲ!

ಸಾರಾಂಶ

ಬಾಲಿವುಡ್‌ನ ಕೆಲವು ಫೇಮಸ್ ನಟಿಯರು ಹಾಗೂ ನಟರು ಏನು ಮಾಡಿದ್ರೂ ಜೊತೆಯಾಗಿ ನಟಿಸೋಕೆ ಬಿಲ್‌ಕುಲ್‌ ಒಪ್ಪೋದೇ ಇಲ್ಲ. ಅವರ್ಯಾರು ಮತ್ತು ಹೀಗೇ ಮಾಡುತ್ತಾರೆ?

ಕೆಲವು ಬಾಲಿವುಡ್ ತಾರೆಯರು ಜೊತೆಯಾಗಿ ನಟಿಸೋಕೆ ಒಪ್ಪೋಲ್ಲ. ಅಂದಿಗೂ ಇಂದಿಗೂ ಅವರಿಗೆ ಸರಿಯಾದ ಸಿನಿಮಾ ಆಫರ್‌ಗಳು ಜೊತೆಯಾಗಿ ಬಂದಾಗ, ಜೊತೆಯಾಗುವ ಕೋ ಆಕ್ಟರ್ ಕಾರಣದಿಂದಲೇ ಎಂಥಾ ಆಫರ್‌ ಅನ್ನೂ ನಿರಾಕರಿಸಿದವರು ಇದ್ದಾರೆ. ಅಂಥ ಕೆಲವರ ಕತೆ ಇದು.

ಜಾನ್ ಅಬ್ರಾಹಂ- ಬಿಪಾಶಾ ಬಸು
ಇವರಿಬ್ಬರೂ ಒಂದು ಕಾಲದಲ್ಲಿ ಲಿವಿಂಗ್ ಟುಗೆದರ್ ಅಗಿದ್ದವರು. ಅದಕ್ಕೂ ಮೊದಲು ಹಾಗೂ ಜೊತೆಯಾಗಿದ್ದ ಕಾಲದಲ್ಲಿ ಹತ್ತಾರು ಫಿಲಂಗಳು ಜೊತೆಯಾಗಿ ನಟಿಸಿದರು. ಸಕ್ಸಸ್‌ಫುಲ್ ಜೋಡಿ ಅಂತಲೂ ಹೆಸರು ಮಾಡಿದರು. ಆದರೆ ಭಿನ್ನಾಭಿಪ್ರಾಯ ಮೂಡಿ, ಒಮ್ಮೆ ಬೇರೆಯಾಗಿದ್ದೇ ತಡ, ನಂತರ ಎಂದೂ ಪರಸ್ಪರ ಜೊತೆಯಾಗಿ ನಟಿಸಲೇ ಇಲ್ಲ. ಜಾನ್ ಇದ್ದ ಫಿಲಂಗಳನ್ನು ಬಿಪಾಶಾ, ಬಿಪಾಶಾ ಇದ್ದ ಫಿಲಂಗಳನ್ನು ಜಾನ್‌ ತಿರಸ್ಕರಿಸಿದರು.

ರಣವೀರ್ ಸಿಂಗ್- ಕತ್ರಿನಾ ಕೈಫ್‌
ಇವರಿಬ್ಬರ ನಡುವೆ ಪರ್ಸನಲ್ ಗ್ರಡ್ಜ್ ಏನೂ ಇಲ್ಲ. ಆದರೂ ಕತ್ರಿನಾ ಹೀರೋಯಿನ್ ಆಗಿರುವ ಬಾರ್ ಬಾರ್ ದೇಖೋ ಫಿಲಂನ ಹೀರೋ ಆಗುವ ಆಫರ್ ಬಂದಾಗ ರಣವೀರ್ ಸಿಂಗ್ ನಿರಾಕರಿಸಿದ. ಅದಕ್ಕೆ ಕಾರಣ ಆತನ ಪ್ರೇಯಸಿ ದೀಪಿಕಾ ಪಡುಕೋಣೆ. ದೀಪಿಕಾ ಪಡುಕೋಣೆಗೂ ಕತ್ರಿನಾ ಕೈಫ್‌ಗೂ ನಡುವೆ ಹಾಕಿದ ಅಕ್ಕಿ ಬೇಯದು. ಇಬ್ಬರಿಗೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಕಂಡರಾಗುವುದಿಲ್ಲ. ಹೀಗಾಗಿ ಕತ್ರಿನಾ ಜೊತೆ ನಟಿಸಬಾರದು ಎಂದು ದೀಪಿಕಾ ಸ್ಟ್ರಿಕ್ಟ್ ಆಗಿ ರಣವೀರ್‌ಗೆ ಕಂಡಿಷನ್‌ ಹಾಕಿಬಿಟ್ಟಿದ್ದಳು.

ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್‌ ಬಾಸ್‌' ನೋಡ್ತಿದ್ದಾರೆ ಹೆಣ್ಣುಮಕ್ಕಳು? ...

ರಣಬೀರ್ ಕಪೂರ್- ಸೋನಾಕ್ಸಿ ಸಿನ್ಹಾ
ಇಬ್ಬರೂ ಒಂದು ರೊಮ್ಯಾಂಟಿಕ್ ಮೂವಿಯಲ್ಲಿ ಜೊತೆಯಾಗಿ ನಟಿಸಬೇಕಾಗಿತ್ತು. ಆದರೆ ಸೋನಾಕ್ಷಿ ಇದ್ದಾಳೆ ಎಂಬ ಕಾರಣದಿಂದ ರಣಬೀರ್ ಅದರಲ್ಲಿ ನಟಿಸಲು ನಿರಾಕರಿಸಿಬಿಟ್ಟ. ಕಾರಣ ತನ್ನ ಹಾಗೂ ಸೋನಾಕ್ಷಿಯ ಲುಕ್. ಸೋನಾಕ್ಷಿ ತನಗಿಂತ ಹೆಚ್ಚಿನ ಪ್ರಾಯದವಳಾಗಿ ಕಾಣುತ್ತಾಳೆ, ಪೇರ್ ಚೆನ್ನಾಗಿರೋಲ್ಲ ಎಂಬುದು ಆತ ನೀಡಿದ ಕಾರಣ.

ಅಮಿತಾಭ್ ಬಚ್ಚನ್- ಕರೀನಾ ಕಪೂರ್
ಅಮಿತಾಭ್ ಬಚ್ಚನ್ ಮತ್ತು ರಾಣಿ ಮುಖರ್ಜಿ ನಟನೆಯ 'ಬ್ಲ್ಯಾಕ್‌' ಫಿಲಂ ನಿಮಗೆ ಗೊತ್ತಿದೆ ತಾನೆ? ಅದರಲ್ಲಿ ಮೊದಲು ರಾಣೀ ಮುಖರ್ಜಿಯ ಪಾತ್ರವನ್ನು ಕರೀನಾ ಕಪೂರ್ ನಟಿಸುವುದು ಎಂದು ಇತ್ತು. ಆದರೆ ಇದು ತಿಳಿಯುತ್ತಿದ್ದಂತೆಯೇ ಅಮಿತಾಭ್, ತಾನು ಇದರಲ್ಲಿ ನಟಿಸೋಲ್ಲ ಎಂದುಬಿಟ್ಟರು. ಅದಕ್ಕೆ ಕಾರಣ, ಕಪೂರ್ ಫ್ಯಾಮಿಲಿಗೂ ಬಚ್ಚನ್ ಫ್ಯಾಮಿಲಿಗೂ ಈಗ ಇರುವ ಮುನಿಸು. ಅದಕ್ಕೆ ಕಾರಣ ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ನಡುವೆ ನಡೆದ ಅಫೇರ್ ಹಾಗೂ ಕರಿಷ್ಮಾ ಅಭಿಷೇಕ್‌ ಜೊತೆಗೆ ನಡೆದ ಎಂಗೇಜ್‌ಮೆಂಟ್ ಅನ್ನು ಮುರಿದುಕೊಂಡಿದ್ದೇ ಕಾರಣ. ಅಂದಿನಿಂದ ಕಪೂರ್ ಖಾನ್‌ದಾನಿಗೂ ಬಚ್ಚನ್ ಖಾನ್‌ದಾನಿಗೂ ಆಗಿಬರೊಲ್ಲ. ಆದರೆ ಬ್ಲ್ಯಾಕ್ ಫಿಲಂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಅಮಿತಾಭ್‌ ತನ್ನ ಫಿಲಂಗೆ ಬೇಕೇ ಬೇಕಾಗಿತ್ತು. ಹೀಗಾಗಿ ಆತ ಕರೀನಾಳನ್ನು ಬದಲಿಸಿ ರಾಣಿಯನ್ನು ಹಾಕಿಕೊಂಡ.

ನ್ಯೂಯಾರ್ಕ್‌ನಲ್ಲಿ ಶ್ರೀದೇವಿ ಪುತ್ರಿಯರ ರಜೆಯ ಮಜಾ..! ...

ಐಶ್ವರ್ಯ ರೈ- ಸಲ್ಮಾನ್ ಖಾನ್
ಬಾಜೀರಾವ್ ಮಸ್ತಾನಿ ಫಿಲಂನಲ್ಲಿ ಮೊದಲು ಲೀಡ್ ರೋಲ್‌ನಲ್ಲಿ ಐಶ್ವರ್ಯ ರೈ ನಟಿಸುವುದು ಎಂದಿತ್ತು. ಆದರೆ ಬಾಜೀರಾವ್ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸುವ ಚಾನ್ಸ್ ಇದೆ ಎಂದು ಗೊತ್ತಾದಾಗ ಐಶ್ವರ್ಯ ಆ ಫಿಲಂ ಅನ್ನೇ ನಿರಾಕರಿಸಿದಳು. ಕಾರಣ ನಿಮಗೆ ತಿಳಿದೇ ಇದೆ. ಇಬ್ಬರೂ ಮಾಜಿ ಪ್ರೇಮಿಗಳು, ಮುಖ ನೋಡಲು ಸಿದ್ಧರಿಲ್ಲ.

ಐಶ್ವರ್ಯ ರೈ- ಇಮ್ರಾನ್ ಹಶ್ಮಿ
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿಯನ್ನು ಐಶ್ವರ್ಯಾ ರೈ 'ಪ್ಲಾಸ್ಟಿಕ್' ಎಂದು ಕರೆದಿದ್ದಳು. ಇದಾದ ಬಳಿಕ ಇಬ್ಬರ ನಡುವೆ ಸಂಬಂಧ ಹಳಸಿತ್ತು. ನಂತರ ಬಾದಶಹೋ ಫಿಲಂನಲ್ಲಿ ದಿಲ್‌ಜಿತ್ ದೋಸಾಂಜ್ ಪಾತ್ರಕ್ಕೆ ಹಶ್ಮಿ ಆಯ್ಕೆಯಾಗಿದ್ದಾನೆ ಎಂದು ಗೊತ್ತಾದಾಗ. ಲೀಡ್ ರೋಲನ್ನು ಐಶ್ ನಿರಾಕರಿಸಿದಳು.

ವಿವಾಹಿತನನ್ನ ಯಾರಾದ್ರೂ ಹೆಣ್ಣು ಈ ರೀತಿ ಹುಚ್ಚರ ತರ ಪ್ರೀತಿಸ್ತಾರಾ ? ...

ಕರೀನಾ ಕಪೂರ್- ಇಮ್ರಾನ್ ಹಶ್ಮಿ
ಕರೀನಾ ಕಪೂರ್, ತಾನು ಎ ಕೆಟಗರಿ ಹೀರೋಗಳ ಜತೆ ಮಾತ್ರ ಆಕ್ಟ್ ಮಾಡುವುದು ಎಂದು ಮೊದಲೇ ಎಲ್ಲರಿಗೂ ಕಂಡಿಷನ್ ಹಾಕಿದ್ದಾಳೆ. ಹೀಗಾಗಿ ಆಕೆ ಶಾರುಕ್, ಅಮೀರ್ ಇಂಥವರ ಜೊತೆ ಮಾತ್ರವೇ ನಟಿಸುವುದು. ಇದರ ನಡುವೆಯೂ ಕರಣ್ ಜೋಹರ್‌ನ ಬಡ್ತಮೀಜ್ ದಿಲ್ ಫಿಲಂನಲ್ಲಿ ಇಮ್ರಾನ್ ಹಶ್ಮಿ ಎದುರು ನಟಿಸಲು ಆಹ್ವಾನ ಬಂದಾಗ ಆಕೆ ನಿರಾಕರಿಸಿದಳು. ಅದಕ್ಕೆ ಕಾರಣ ಹಶ್ಮಿ ಬಿ ಗ್ರೇಡ್ ಆಕ್ಟರ್ ಎಂಬುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?