ಅಬ್ಬಬ್ಬಾ..'ರಾಮಾಯಣ' ಚಿತ್ರಕ್ಕಾಗಿ ಯಶ್‌, ಸಾಯಿಪಲ್ಲವಿ ಪಡೀತಿರೋ ಸಂಭಾವನೆ ಇಷ್ಟೊಂದಾ?

Published : Apr 07, 2024, 11:32 AM IST
ಅಬ್ಬಬ್ಬಾ..'ರಾಮಾಯಣ' ಚಿತ್ರಕ್ಕಾಗಿ ಯಶ್‌, ಸಾಯಿಪಲ್ಲವಿ ಪಡೀತಿರೋ ಸಂಭಾವನೆ ಇಷ್ಟೊಂದಾ?

ಸಾರಾಂಶ

ಬಾಲಿವುಡ್‌ನ ಬಿಗ್‌ ಬಜೆಟ್ ಸಿನಿಮಾ, 'ರಾಮಾಯಣ'ವು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಮಾತನಾಡುವ ಚಲನಚಿತ್ರವಾಗಿದೆ. ಪ್ರತಿಭಾವಂತ ಸ್ಟಾರ್‌ ನಟ-ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಚಿತ್ರಕ್ಕಾಗಿ ರಣಬೀರ್ ಕಪೂರ್, ಯಶ್‌, ಸಾಯಿಪಲ್ಲವಿ ಪಡೀತಿತೋ ಸಂಭಾವನೆ ಎಷ್ಟು ಗೊತ್ತಾ?

ಬಾಲಿವುಡ್‌ನ ಬಿಗ್‌ ಬಜೆಟ್ ಸಿನಿಮಾ, 'ರಾಮಾಯಣ'ವು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಮಾತನಾಡುವ ಚಲನಚಿತ್ರವಾಗಿದೆ. ಪ್ರತಿಭಾವಂತ ಸ್ಟಾರ್‌ ನಟ-ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ನಿತೇಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್,  ದಕ್ಷಿಣದ ಸೂಪರ್ ಸ್ಟಾರ್ ಯಶ್, ನಟಿ ಸಾಯಿಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು ಪೌರಾಣಿಕ ಮಹಾಕಾವ್ಯವಾದ 'ರಾಮಾಯಣ'ದ ರೂಪಾಂತರವಾಗಿದೆ.. ಏಪ್ರಿಲ್ 2, 2024ರಂದು, ನಿತೇಶ್ ತಿವಾರಿ ಅವರು ಭವ್ಯವಾದ ಪೂಜೆಯೊಂದಿಗೆ ಚಲನಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು 

ಈ ಹಿಂದೆ ರಾಮ, ಸೀತೆ, ರಾವಣ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಸದ್ಯ ರಣಬೀರ್ ಕಪೂರ್ ರಾಮ, ಸಾಯಿಪಲ್ಲವಿ ಸೀತಾ, ಯಶ್ ರಾವಣ ಪಾತ್ರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಬಿಗ್ ಬಜೆಟ್ ಸಿನಿಮಾಕ್ಕಾಗಿ ಸ್ಟಾರ್‌ ನಟ-ನಟಿಯಂದಿರು ಪಡೆದುಕೊಳ್ಳೋ ಸಂಭಾವನೆ ಎಷ್ಟು ಸಹ ಅನ್ನೋದು ಬಹಿರಂಗಗೊಂಡಿದೆ.

ಮೇಕಪ್‌ ಪಾತ್ರದಲ್ಲಿ ವಿಭಿನ್ನತೆ ತರಲಾರದು ಎಂದ್ಬಿಟ್ರು ಸಾಯಿ ಪಲ್ಲವಿ; ಎಂಥ ಮಾತು ಅಂತಿದಾರಲ್ರೀ!

'ಸೀತಾ' ಪಾತ್ರಕ್ಕೆ ಮೂರು ಪಟ್ಟು ಸಂಭಾವನೆ ಹೆಚ್ಚಿಸಿದ ಸಾಯಿ ಪಲ್ಲವಿ 
ಇತ್ತೀಚಿನವರೆಗೂ, ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ಆಲಿಯಾ ಭಟ್ 'ಸೀತೆ' ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಈಗ ಪಾತ್ರವನ್ನು ಸಾಯಿ ಪಲ್ಲವಿ ಮಾಡಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ವರದಿಗಳ ಪ್ರಕಾರ, ಸಾಯಿ ಪಲ್ಲವಿ ತನ್ನ ಬಾಲಿವುಡ್ ಚೊಚ್ಚಲ ಪ್ರವೇಶಕ್ಕಾಗಿ ತನ್ನ ನಿಯಮಿತ ಶುಲ್ಕಕ್ಕಿಂತ ಮೂರು ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಿದ್ದಾರೆ ಎನ್ನಲಾಗಿದೆ. ನ್ಯಾಚುರಲ್ ಬ್ಯೂಟಿ ತನ್ನ ಪ್ರತಿ ಚಿತ್ರಕ್ಕೆ ಆರು ಕೋಟಿ ಪಡೆಯುತ್ತಾರೆ. ಅಂದರೆ 'ರಾಮಾಯಣ' ಚಿತ್ರಕ್ಕಾಗಿ ಪಡೆಯೋ ಒಟ್ಟು ಸಂಭಾವನೆ ಬರೋಬ್ಬರಿ 18-20 ಕೋಟಿ. ಪ್ರಸ್ತುತ, ಅವರು ತೆಲುಗು ಚಿತ್ರಕ್ಕೆ 2.5ರಿಂದ 3 ಕೋಟಿ ಚಾರ್ಜ್ ಮಾಡುತ್ತಾರೆ.

ರಾಮನ ಪಾತ್ರಕ್ಕೆ ರಣಬೀರ್ ಕಪೂರ್, ಯಶ್ ಪಡೆಯೋ ಸಂಭಾವನೆ ಎಷ್ಟು?
ಹಲವಾರು ವರದಿಗಳ ಪ್ರಕಾರ, ಬಿಗ್‌ ಬಜೆಟ್ ಸಿನಿಮಾ 'ರಾಮಾಯಣ'ಕ್ಕಾಗಿ ರಣಬೀರ್ ಕಪೂರ್‌ ಬರೋಬ್ಬರಿ ಒಟ್ಟು 225 ಕೋಟಿ ರೂ. ಪಡೆಯಲಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಕೆಜಿಎಫ್ ಖ್ಯಾತಿಯ ಯಶ್, ರಾಮಾಯಣ ಸಿನಿಮಾದಲ್ಲಿ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. ಪ್ರತಿ ಕಂತಿಗೆ 50 ಕೋಟಿ ರೂಪಾಯಿಗಳನ್ನು ವಿಧಿಸುತ್ತಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ ಯಶ್ ಸಂಪೂರ್ಣ ರಾಮಾಯಣ ಸಿನಿಮಾಕ್ಕಾಗಿ 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.

ಯಶ್​, ರಣಬೀರ್​-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್​ ಸೆಟ್​ ಹೀಗಿದೆ ನೋಡಿ: ವಿಡಿಯೋ ವೈರಲ್​

'ರಾಮಾಯಣ' ಸಿನಿಮಾದ ಬಜೆಟ್ ಎಷ್ಟು ಕೋಟಿ? 
ರಾಮಾಯಣವನ್ನು ಬೃಹತ್ ಮೊತ್ತದ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹಲವು ವರದಿಗಳು ಸೂಚಿಸುತ್ತವೆ. 500-600 ಕೋಟಿ ಇದರ ಒಟ್ಟು ಬಜೆಟ್ ಆಗಿದೆ. ಸೆಟ್ ಒಂದರ ಬೆಲೆ ರೂ. 11 ಕೋಟಿ ಆಗಿರುತ್ತದೆ. ಸಿನಿಮಾ ಮೂರು ಭಾಗಗಳಲ್ಲಿ ತಯಾರಾಗುತ್ತಿದ್ದು, ಪ್ರತಿ ಭಾಗವು ರಾಮನ ಜೀವನದ ವಿವಿಧ ಹಂತಗಳನ್ನು ಕೇಂದ್ರೀಕರಿಸುತ್ತದೆ, ಅವನ ಹುಟ್ಟಿನಿಂದ ಮದುವೆ, ಸೀತೆಯ ವನವಾಸ ಮತ್ತು ನಂತರ ಘಟನಾವಳಿಗಳನ್ನು ಚಿತ್ರಿಸಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!