
ಮುಂಬೈ(ಏ.06) ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಫ್ಯಾಶನ್ ಜಗತ್ತಿನಲ್ಲಿ ಊಹೆಗೂ ನಿಲಕದ ಕ್ರಿಯೇಟಿವಿಗೆ ಜನಪ್ರಿಯವಾಗಿದ್ದಾರೆ. ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಉರ್ಫಿ ಫ್ಯಾಶನ್ ಡಿಸೈನ್‌ಗೆ ಹೊಸ ಆಯಾಮ ನೀಡಿದ್ದಾರೆ. ತುಂಡುಡುಗೆ ಉರ್ಫಿಗೆ ಹೊಸದಲ್ಲ, ಆದರೆ ಈ ಟೂ ಪೀಸ್‌ನಲ್ಲಿ ಉರ್ಫಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಇದೀಗ ಉರ್ಫಿ ಜಾವೇದ್ ಮತ್ತೆ ಹೊಸದೊಂದು ಐಡಿಯಾ ಮೂಲಕ ಜನರ ಮುಂದೆ ಬಂದಿದ್ದಾರೆ. ದೇಶದ ಬಹುತೇಕ ಭಾಗದಲ್ಲಿ ಬಿಸಿನ ಬೇಗೆ ವಿಪರೀತವಾಗಿದೆ. ಹಲವರು ಬಿಸಿಲಿನಿಂದ ಬಸವಳಿದಿದ್ದಾರೆ. ತಡೆಯಲಾರದ ಬಿಸಿಲು, ಜೊತೆಗೆ ಉರ್ಫಿಯ ಹಾಟ್ನೆಸ್ ತಣಿಸಲು ಫ್ಯಾನ್ ಡ್ರೆಸ್ ಮೂಲಕ ಗಮನಸೆಳೆದಿದ್ದಾರೆ.
ಬಿಸಿಲಿನಿಂದ ಕಂಗೆಟ್ಟಿರುವ ಜನ ತಣಿಸಲು ಜ್ಯೂಸ್, ಎಳನೀರು ಸೇರಿದಂತೆ ನೀರುಗಳನ್ನು ಹೆಚ್ಚಾಗಿ ಕುಡಿಯುತ್ತಿದ್ದಾರೆ. ಇತ್ತ ಎಸಿ ಬಿಟ್ಟು ಜನರು ಹೊರಬರುತ್ತಿಲ್ಲ. ಫ್ಯಾನ್ ಗರಿಷ್ಠ ವೇಗದಲ್ಲಿ ತಿರುಗುತ್ತಿದೆ. ಆದರೆ ಉರ್ಫಿ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಉಡುಪಿನಲ್ಲೇ ಫ್ಯಾನ್ ಅಳವಡಿಸಿ ತಂಪೆರೆದಿದ್ದಾರೆ.
ನೀಲಿ ಸೀರೆಯ ಜಾರಿದ ಸೆರಗು, ಬ್ಲೂ ಸ್ಟಾರ್ ಉಡುಗೆಯಲ್ಲಿ ತಿಳಿ ನೀಲ ಕನಸು ಕಟ್ಟಿಕೊಟ್ಟ ಉರ್ಫಿ!
ಈ ಬಾರಿ ಉರ್ಫಿ ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಬ್ರಾಲೆಟ್ ಧರಿಸಿ ಪ್ರತ್ಯಕ್ಷವಾಗಿದ್ದಾರೆ. ಆದರೆ ಬ್ರಾಲೆಟ್ ಮೇಲೆ ಎರಡು ಫ್ಯಾನ್ ಸಿಕ್ಕಿಸಿಕೊಂಡಿದ್ದಾರೆ. ಇದು ಅಂತಿಂತಾ ಫ್ಯಾನ್ ಅಲ್ಲ, ಬ್ರಾಲೆಟ್ ಹುಕ್ ಬಳಿ ಅಳವಡಿಸಿರುವ ಬಟನ್ ಆನ್ ಮಾಡಿದರೆ ಫ್ಯಾನ್‌ನಿಂದ ತಂಗಾಳಿ ಬೀಸುತ್ತದೆ. ಆದರೆ ಈ ತಂಗಾಳಿ ಅನುಭವಿಸಲು ಉರ್ಫಿಯ ಫ್ಯಾನ್ ಪಕ್ಕ ನಿಂತರೆ ಮಾತ್ರ ಸಾಧ್ಯ.
ಉರ್ಫಿಯ ಪ್ರತಿ ಫ್ಯಾಶನ್‌ಗ ಬರುವ ಕಮೆಂಟ್‌ನಂತೆ ಈ ಟೇಬಲ್ ಫ್ಯಾನ್ ಫ್ಯಾಶನ್ ಡ್ರೆಸ್‌ಗೂ ಪ್ರತಿಕ್ರಿಯೆಗಳು ಭರ್ಜರಿಯಾಗಿ ವ್ಯಕ್ತವಾಗಿದೆ. ಉರ್ಫಿ ಫ್ಯಾನ್ ಮೂಲಕ ತಂಗಾಳಿ ನೀಡಿದ್ದಾರೆ. ಜೊತೆಗೆ ಹಾಟ್ ಡ್ರೆಸ್‌ನಲ್ಲಿ ಮನಸ್ಸನ್ನೂ ತಂಪುಗೊಳಿಸಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದು ಫ್ಯಾಶನ್ ಡ್ರೆಸ್ಸೋ ಅಥವಾ ವಿಜ್ಞಾನ ಪ್ರಾಜೆಕ್ಟೋ? ಎಂದು ಪ್ರಶ್ನಿಸಿದ್ದಾರೆ.
ಉರ್ಫಿ ಬಟನ್ ಒತ್ತಿದ ತಕ್ಷಣ ಫ್ಯಾನ್ ತಿರುಗುತ್ತಿದೆ. ಈ ಫ್ಯಾನ್ ಚಾರ್ಜ್ ಹೇಗಾಗುತ್ತಿದೆ? ಉರ್ಫಿಯ ಹಾಟ್ನೆಸ್‌ನಿಂದಲೋ ಅಥವಾ ಸೋಲಾರ್ ಪ್ಯಾನಲ್ ಸೂರ್ಯನಿಗೆ ಮುಖಮಾಡಿದಾಗಲೋ ಎಂದು ಪ್ರಶ್ನಿಸಿದ್ದಾರೆ. ಉರ್ಫಿಯ ಹೊಸ ಐಡಿಯಾಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಉರ್ಫಿಯ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಉರ್ಫಿಯ ಹೊಸ ಉಡುಗೆಯಿಂದ ಸೌಂದರ್ಯ ಡಬಲ್, ಟೀಕೆ ಬದಲು ಮೆಚ್ಚೆಗೆಯ ಸುರಿಮಳೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.