Prabhas ಹುಟ್ಟು​ಹಬ್ಬಕ್ಕೆ ಥಿಯೇಟರಲ್ಲಿ ಪಟಾಕಿ: ಸೀಟುಗಳ ಸುಟ್ಟು ಭಸ್ಮ

Published : Oct 25, 2022, 10:07 AM IST
Prabhas ಹುಟ್ಟು​ಹಬ್ಬಕ್ಕೆ ಥಿಯೇಟರಲ್ಲಿ ಪಟಾಕಿ: ಸೀಟುಗಳ ಸುಟ್ಟು ಭಸ್ಮ

ಸಾರಾಂಶ

ಸ್ಟಾರ್ ನಟನ ಬರ್ತಡೇ ದಿನ ಥಿಯೇಟರ್‌ ಮಾಲೀಕರಿಗೆ ನಷ್ಟ.ಅದೃ​ಷ್ಟ​ವ​ಶಾತ್‌ ಯಾವುದೇ ಪ್ರಾಣಹಾನಿ ಸಂಭ​ವಿ​ಸಿ​ಲ್ಲ.

ಟಾಲಿವುಡ್ ಸ್ಟಾರ್ ನಟ, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್‌ ಅಕ್ಟೋಬರ್ 23ರಂದು 42ನೇ ವಸಂತಕ್ಕೆ ಕಾಲಿಟ್ಟಿರು. ಸಿನಿ ಗಣ್ಯರು ಮತ್ತು ಅಭಿಮಾನಿಗಳು ಪ್ರಭಾಸ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಪ್ರಭಾಸ್‌ ಬರ್ತಡೇ ಮತ್ತಷ್ಟು ಸ್ಪೆಷಲ್ ಮಾಡಲು ಆದಿಪುರುಷ್ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ತುಂಬಾನೇ ಬೇಸರದಲ್ಲಿದ್ದ ನಟ ಮುಖದಲ್ಲಿ ಸಂತೋಷ  ತರಬೇಕೆಂದು ಗಲ್ಲಿ ಗಲ್ಲಿಗಳಲ್ಲೂ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. 

ಅಮ​ರಾ​ವತಿ: ನಟ ಪ್ರಭಾಸ್‌ ಹುಟ್ಟು​ಹ​ಬ್ಬವೆಂದು ಅಭಿಮಾನಿಗಳು ಚಿತ್ರಮಂದಿರದೊಳಗೆ ಪಟಾಕಿ ಹಚ್ಚಿ, ಅದರಿಂದ ಚಿತ್ರ​ಮಂದಿ​ರಕ್ಕೆ ಬೆಂಕಿ ಹೊತ್ತಿ​ಕೊಂಡ ಘಟನೆ ಆಂಧ್ರದ ಗೋದಾ​ವರಿ ಜಿಲ್ಲೆ​ಯ ತಾಡೆ​ಪ​ಲ್ಲಿಗುಡೆಂನಲ್ಲಿ ನಡೆ​ದಿ​ದೆ. ನಟನ ಹುಟ್ಟು​ಹ​ಬ್ಬದ ನಿಮಿತ್ತ ಜಿಲ್ಲೆಯ ವೆಂಕ​ಟ​ರಮಣ ಚಿತ್ರ​ಮಂದಿರದಲ್ಲಿ 2009ರಲ್ಲಿ ತೆರೆ​ಕಂಡಿದ್ದ ‘ಬಿ​ಲ್ಲಾ’ ಚಿತ್ರ ಪ್ರದರ್ಶನಗೊಳ್ಳು​ತ್ತಿತ್ತು. 

5ಈ ಸಂದ​ರ್ಭ ಅಭಿ​ಮಾ​ನಿ​ಗಳು ಪಟಾಕಿ ಸಿಡಿಸಿ ಸಂಭ್ರ​ಮಿ​ಸು​ತ್ತಿ​ದ್ದರು. ಆಗ ಅಲ್ಲಿನ ಸೀಟು​ಗ​ಳುಗೆ ಬೆಂಕಿ ತಗುಲಿ ಕ್ರಮೇಣ ಆವ​ರಿ​ಸಿ​ಕೊಂಡಿದೆ. ಬೆಚ್ಚಿದ ಜನ ಅಲ್ಲಿಂದ ಕಾಲ್ಕಿ​ತ್ತಿ​ದ್ದಾರೆ. ಕೆಲ ಜನರ ಸಹಾ​ಯ​ದೊಂದಿಗೆ ಚಿತ್ರ​ಮಂದಿರ ಸಿಬ್ಬಂದಿ ಬೆಂಕಿ ನಂದಿ​ಸಿ​ದ್ದಾರೆ. ಅದೃ​ಷ್ಟ​ವ​ಶಾತ್‌ ಯಾವುದೇ ಪ್ರಾಣಹಾನಿ ಸಂಭ​ವಿ​ಸಿ​ಲ್ಲ.

ಪ್ರಭಾಸ್‌ ಮೇಲೆ 1400 ಕೋಟಿ ಹೂಡಿಕೆ:

500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಆದಿ ಪುರುಷ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಪಾತ್ರಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಚಿತ್ರದಲ್ಲಿ ಕೃತಿ ಸನೋನ್  ಮತ್ತು ಸೈಫ್ ಅಲಿ ಖಾನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ.ನಿರ್ದೇಶಕ ಓಂ ರಾವುತ್ ಅವರ ಚಿತ್ರ ಆದಿಪುರುಷ 12 ಜನವರಿ 2023 ರಂದು ಬಿಡುಗಡೆಯಾಗಲಿದೆ. ಆದರೆ, ಈ ಚಿತ್ರದ ಟೀಸರ್ ಮತ್ತು ಅದರಲ್ಲಿ ತೋರಿಸಿರುವ ಪ್ರಚಂಡ ವಿಎಫ್‌ಎಕ್ಸ್ ನೋಡಿ ಜನರು ಬಹಿಷ್ಕಾರ ಹಾಕಲು ಆರಂಭಿಸಿದ್ದಾರೆ.ನಿರ್ದೇಶಕಿ ಅಶ್ವಿನಿ ನಾಗ್ ಅವರ ಪ್ರಾಜೆಕ್ಟ್ ಕೆ ಚಿತ್ರದಲ್ಲೂ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಜೆಟ್ ಕೂಡ ಸುಮಾರು 500 ಕೋಟಿ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ, ಪ್ರಭಾಸ್ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಾಲಾರ್ ಚಿತ್ರದಲ್ಲೂ ಪ್ರಭಾಸ್ ಕೆಲಸ ಮಾಡುತ್ತಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. 

‘ಆದಿಪುರುಷ’ ರಾಮನ ಪಾತ್ರಕ್ಕೆ ಪ್ರಭಾಸ್ ಸಂಭಾವನೆ ಎಷ್ಟು?

2ನೇ ಬಾರಿ ಕಾಂತಾರ ವೀಕ್ಷಿಸಿ ಪ್ರಭಾಸ್:

2ನೇ ಬಾರಿ ಕಾಂತಾರ ವೀಕ್ಷಿಸಿದ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಪ್ರಭಾಸ್ ಮೊದಲು ಕನ್ನಡದಲ್ಲೇ ಸಿನಿಮಾ ನೋಡಿದ್ದರು. ಇದೀಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದ್ದಂತೆ ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗಿದೆ. ಇದೀಗ ತೆಲುಗಿನಲ್ಲಿ ರಿಲೀಸ್ ಆಗಿರುವ ಕಾಂತಾರ ಸಿನಿಮಾವನ್ನು ಪ್ರಭಾಸ್ ಮತ್ತೊಮ್ಮೆ ವೀಕ್ಷಿಸಿ  ಅದ್ಭುತವಾದ ಅನುಭವ ಎಂದಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಭಾಸ್, 'ಕಾಂತಾರ ಎರಡನೇ ಬಾರಿ ವೀಕ್ಷಿಸಿದೆ. ಎಂತಹ ಅಸಾಧಾರಣ ಅನುಭವ. ಅದ್ಭುತವಾದ ಕಾನ್ಸೆಪ್ಟ್ ಮತ್ತು ಕ್ಲೈಮ್ಯಾಕ್ಸ್ ಥ್ರಿಲ್ಲಿಂಗ್ ಆಗಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಲೇ ಬೇಕಾದ ಸಿನಿಮಾವಾಗಿದೆ' ಎಂದು ಹೇಳಿದ್ದಾರೆ. 

ಈ ಮೊದಲು ಕಾಂತಾರ ವೀಕ್ಷಿಸಿದ್ದ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದರು. 'ಕಾಂತಾರ ಸಿನಿಮಾವನ್ನ ನಾನು ತುಂಬಾ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತ. ಇಡೀ ತಂಡಕ್ಕೆ ನನ್ನ ಅಭಿನಂದನೆ, ಒಳ್ಳೆಯದಾಗಲಿ' ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್
ತನ್ನ ಮಾತನ್ನೇ ಮುರಿದ ಸಾಯಿ ಪಲ್ಲವಿ.. ಬಾಲಿವುಡ್‌ನಲ್ಲಿ ಇನ್ನೂ ಮಾಡದೇ ಇರುವುದನ್ನು ಮಾಡಿಬಿಟ್ರು!