Latest Videos

RGV ನಿರ್ದೇಶನದ ಲೆಸ್ಬಿಯನ್‌ ಸಿನಿಮಾ 'ಖತ್ರಾ ಡೇಂಜರಸ್‌': ಏಪ್ರಿಲ್‌ 8ರಂದು ತೆರೆಗೆ

By Govindaraj SFirst Published Apr 4, 2022, 3:30 AM IST
Highlights

ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ‘ಖತ್ರಾ- ಡೇಂಜರಸ್‌’ ಏಪ್ರಿಲ್‌ 8ರಂದು ಬಿಡುಗಡೆಯಾಗುತ್ತಿದೆ. ನೈನಾ ಗಂಗೂಲಿ, ಅಪ್ಸರರಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆರ್‌ಜಿವಿ ಈ ಬಾರಿ ಲೆಸ್ಬಿಯನ್‌ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. 

ರಾಮ್‌ಗೋಪಾಲ್‌ ವರ್ಮಾ (Ram Gopal Varma) ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ‘ಖತ್ರಾ- ಡೇಂಜರಸ್‌’ (Khatra Dangerous) ಏಪ್ರಿಲ್‌ 8ರಂದು ಬಿಡುಗಡೆಯಾಗುತ್ತಿದೆ. ನೈನಾ ಗಂಗೂಲಿ (Naina Ganguly), ಅಪ್ಸರ ರಾಣಿ (Apsara Rani) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆರ್‌ಜಿವಿ ಈ ಬಾರಿ ಲೆಸ್ಬಿಯನ್‌ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ‘ಇಬ್ಬರು ಮಹಿಳೆಯರ ಪ್ರೇಮಕತೆಯ ಹಿನ್ನೆಲೆಯಲ್ಲಿ ರಚಿಸಲಾದ ಕಮರ್ಷಿಯಲ್‌ ಆ್ಯಕ್ಷನ್‌ ಸಿನಿಮಾ ಇದು’ ಎಂದು ಆರ್‌ಜಿವಿ ಹೇಳುತ್ತಾರೆ. ಪ್ಯಾನ್‌ ಇಂಡಿಯಾ ಸಿನಿಮಾ, ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಿನಿಮಾ ತಂಡ ಹೇಳುತ್ತಿದ್ದರೂ ಕನ್ನಡ ಭಾಷೆಗೆ ಸದ್ಯ ಡಬ್‌ ಆಗಿಲ್ಲ. 

ಎರಡು ವಾರದ ನಂತರ ಕನ್ನಡ ವರ್ಷನ್‌ ಬಿಡುಗಡೆ ಮಾಡುತ್ತಿರುವುದಾಗಿ ಆರ್‌ಜಿವಿ ಹೇಳಿದ್ದಾರೆ. ‘ನನಗೆ ಆ ಕ್ಷಣಕ್ಕೆ ಯಾವುದು ಎಕ್ಸೈಟ್‌ ಮಾಡುವುದೋ ಆ ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ. ಬೇರೆಯವರು ಏನು ಹೇಳುತ್ತಾರೆ ಅನ್ನುವುದನ್ನು ನಾನು ಕೇರ್‌ ಮಾಡುವುದಿಲ್ಲ. ಇಬ್ಬರು ಗಂಡಸರ ಸಿನಿಮಾ ಆಗಿದ್ದರೆ ಯಾರೂ ನೋಡುತ್ತಿರಲಿಲ್ಲವೇನೋ, ಆದರೆ ಇಲ್ಲಿ ಇಬ್ಬರು ಹುಡುಗಿಯರು ಇರುವುದರಿಂದ ತುಂಬಾ ಜನ ಸಿನಿಮಾ ನೋಡುವ ನಂಬಿಕೆ ನನಗಿದೆ’ ಎಂದು ಆರ್‌ಜಿವಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Puneeth Rajkumar: ಅಪ್ಪು ಅಗಲಿ 5 ತಿಂಗಳು: ಸಮಾಧಿಗೆ ಆರ್‌ಜಿವಿ ನಮನ

ಸಿನಿಮಾದ ಬಿಸಿಬಿಸಿ ಟ್ರೇಲರ್ ರಿಲೀಸ್: ಹಿಂದಿ (Bollywood) ಮತ್ತು ತೆಲುಗಿನ (Tollywood) ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ  ನಿರ್ದೇಶನದ 'ಖತ್ರಾ ಡೇಂಜರಸ್' ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ (Trailer) ನೋಡಿದರೆ ಸುಡುವಷ್ಟು ಬಿಸಿಬಿಸಿ ಇದೆ. ಇಬ್ಬರು ಹುಡುಗಿಯರು ಪರಸ್ಪರ ಹಸಿಬಿಸಿಯಾಗಿ ಪ್ರೇಮಿಸಿಕೊಳ್ಳುವ ದೃಶ್ಯಗಳು ಸಾಕಷ್ಟು ಇವೆ. ಈ ಸಿನಿಮಾ ನಮ್ಮ ದೇಶದ ಮೊದಲ ಲೆಸ್ಬಿಯನ್ ಕ್ರೈಮ್ ಆಕ್ಷನ್ ಡ್ರಾಮಾ (Lesbian crime Action drama) ಸಿನಿಮಾ ಎಂದು ಹೇಳಲಾಗಿದೆ. 



ಲೆಸ್ಬಿಯನ್ ಪ್ರಣಯವನ್ನು ಪ್ರದರ್ಶಿಸುವ ಈ ಸಿನಿಮಾ ಪೂರ್ತಿ ಸಲಿಂಗಪ್ರೇಮದ ರೋಮ್ಯಾಂಟಿಕ್ (Romantic) ದೃಶ್ಯಗಳಿಂದ ತುಂಬಿದೆಯಂತೆ. ಅಡಲ್ಟ್ ಕಂಟೆಂಟ್‌ (Adult content) ನಿಂದಾಗಿ ಈ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ಟ್ರೇಲರ್ ನೋಡಿದರೆ, ಚಿತ್ರದಲ್ಲಿ ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸುವ, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯಗಳಿರುವುದು ಕಾಣುತ್ತದೆ. ಇದೊಂದು ಅಡಲ್ಟ್ ಚಿತ್ರ. ಚುಂಬನದ (Kiss)  ದೃಶ್ಯಗಳಿಂದ ಹಿಡಿದು ಮಲಗುವ ಕೋಣೆಯ ಪ್ರಣಯದವರೆಗೆ ಎಲ್ಲಾ ರೀತಿಯ ದೃಶ್ಯಗಳು ಇವೆ. ಮೊದಲ ಟ್ರೇಲರ್‌ನಲ್ಲೂ ಇಂಥದೇ ದೃಶ್ಯಗಳಿದ್ದವು.  ಆದರೆ ಎರಡನೇ ಟ್ರೇಲರ್‌ನಲ್ಲಿ ಸಾಕಷ್ಟು ಕ್ರೈಮ್, ಹಿಂಸೆಯ ದೃಶ್ಯಗಳೂ ಇವೆ. 

Garuda Gamana Vrishabha Vahana: ರಾಜ್‌ ಬಿ. ಶೆಟ್ಟಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ ರಾಮ್‌ ಗೋಪಾಲ್ ವರ್ಮಾ

ಈ ಚಿತ್ರದಲ್ಲಿ ಬೋಲ್ಡ್‌ನೆಸ್‌ನ ಎಲ್ಲ ಮಿತಿಗಳನ್ನು ದಾಟಲಾಗಿದೆ. ಚಿತ್ರದ ಪೋಸ್ಟರ್‌ಗಳು ಕೂಡ ಸಾಕಷ್ಟು ಬೋಲ್ಡ್ ಆಗಿವೆ. ಈ ಚಲನಚಿತ್ರದಲ್ಲಿ ದಕ್ಷಿಣ ಭಾರತದ ನಾಯಕಿಯರಾದ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರವು ರಾಮ್ ಗೋಪಾಲ್ ವರ್ಮಾ ಅವರ ಅತ್ಯಂತ ವಿವಾದಾತ್ಮಕ ಚಿತ್ರಗಳಲ್ಲಿ ಒಂದಾಗಬಹುದು ಎಂದು ಊಹಿಸಲಾಗಿದೆ. ಏಪ್ರಿಲ್ 8ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಭಾರತದ ಮೊದಲ ಲೆಸ್ಬಿಯನ್ ಕ್ರೈಮ್ ಆಕ್ಷನ್ ಡ್ರಾಮಾ ಸಿನೆಮಾ ಎಂದು ಆರ್‌ಜಿವಿ ಕರೆದುಕೊಂಡಿದ್ದಾರೆ. ಇದು ಯಾವ ಕೆಟಗರಿಯೋ ಗೊತ್ತಿಲ್ಲ. 

click me!