ನಾನು ಚಿತ್ರರಂಗದಲ್ಲಿಯೇ ಉಳಿಯುತ್ತೇನೆಂದು ಅಂದುಕೊಂಡಿರಲಿಲ್ಲ; ದುಲ್ಕರ್ ಸಲ್ಮಾನ್

By Shruiti G Krishna  |  First Published Apr 3, 2022, 8:50 PM IST

ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಚಿತ್ರರಂಗಕ್ಕೆ ಪ್ರವೇಶಿಸಿದಾಗ ಅಭದ್ರತೆ ಮತ್ತು ತಂದೆ ಸೂಪರ್ ಮಮ್ಮುಟ್ಟಿ ಅವರ ಪರಂಪರೆಗೆ ಅನುಗುಣವಾಗಿ ಬದುಕುವ ಒತ್ತಡದಿಂದ ಸಾಕಷ್ಟು ಒತ್ತಡ ಎದುರಿಸುತ್ತಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.


ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಚಿತ್ರರಂಗಕ್ಕೆ ಪ್ರವೇಶಿಸಿದಾಗ ಅಭದ್ರತೆ ಮತ್ತು ತಂದೆ ಸೂಪರ್ ಮಮ್ಮುಟ್ಟಿ ಅವರ ಪರಂಪರೆಗೆ ಅನುಗುಣವಾಗಿ ಬದುಕುವ ಒತ್ತಡದಿಂದ ಸಾಕಷ್ಟು ಒತ್ತಡ ಎದುರಿಸುತ್ತಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ದುಲ್ಕರ್ ಸಲ್ಮಾನ್ 2012ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಕ್ರೈಮ್ ಥ್ರಿಲ್ಲರ್ ಸೆಕೆಂಡ್ ಶೋ ನೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದೇ ವರ್ಷ ಉಸ್ತಾದ್ ಹೋಟೆಲ್ ಚಿತ್ರದೊಂದಿಗೆ ದೊಡ್ಡ ಯಶಸ್ಸು ಗಳಿಸಿದರು. ಆ ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದರು.

ನಟ ದುಲ್ಕರ್ ಸಲ್ಮಾನ್ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಡೇಸ್, ಚಾರ್ಲಿ, ಕಲಿ, ಕುರುಪ್ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಮಲಯಾಳಂ ಚಿತ್ರರಂಗದ ದೊಡ್ಡ ಸ್ಟಾರ್ ಆಗಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಅ ಕಾದಲ್ ಕಣ್ಮಣಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಕರ್ವಾನ್ ಸಿನಿಮಾ ಮೂಲಕ ಹಿಂದಿ ಸಿನಿಮಾರಂಗಕ್ಕೂ ಕಾಲಿಟ್ಟರು. ದೇಶದಾದ್ಯಂತ ಅಪಾರ ಪ್ರಮಾಣದ ಅಭಿಮಾನಿ ಬಳಗ ಹೊಂದಿರುವ ನಟ ದುಲ್ಕರ್ ಆರಂಭದ ದಿನಗಳಲ್ಲಿ ಎದುರಿಸಿದ ಒತ್ತಡಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ.

Tap to resize

Latest Videos

ನಾನು ಇದನ್ನೆಲ್ಲ ಮಾಡುತ್ತೇನೆಯೇ ಎಂದು ಅಂದುಕೊಂಡಿರಲಿಲ್ಲ. ನಾನು ಚಿತ್ರರಂಗದಲ್ಲಿ ಬದುಕುಳಿಯುತ್ತೇನೆಯೇ ಜನರು ನನ್ನನ್ನು ಸ್ವೀಕರಿಸುತ್ತಾರೆಯೇ ಎಂದು ನನಗೆ ತಿಳಿದಿರಲಿಲ್ಲ. ನಾನು ಇಂಡಸ್ಟ್ರಿಗೆ ಬರುವಾಗ ಸಾಕಷ್ಟು ಸಾಕಷ್ಟು ಆತಂಕವಿತ್ತು. 20ನೇ ವರ್ಷಕ್ಕೆ ಎಲ್ಲಾ ಭಯ ಮತ್ತು ಅಭದ್ರತೆ ಹೊಂದಿರುತ್ತೀರಿ. ನಾನು ನನ್ನ ತಂದೆಯ ದಾರಿಯನ್ನೇ ಪಾಲಿಸುತ್ತಿದ್ದೆ. ನನ್ನನ್ನು ಮರೆತುಬಿಡಿ. ಅವರನ್ನು ಚಾಲೆಂಜ್ ಮಾಡಲು ಅಥವಾ ರಿಪ್ಲೇಸ್ ಮಾಡಬಹುದು ಎಂದು ನಾನು ಭಾವಿಸಿಲ್ಲ.

Guns and Gulaabs: 90ರ ದಶಕದ ಲುಕ್‌ನಲ್ಲಿ Rajkummar Rao ಮತ್ತು Dulquer Salmaan

ನಾನು ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದೆ. ನಾನು ಅವರಂತೆ ತುಂಬಾ ಒಳ್ಳಯವನಾಗಿರಬೇಕು ಎಂದಲ್ಲ. ಆದರೆ ನಾನು ಅವರನ್ನು ಯಾವುದೇ ರೀತಿಯಲ್ಲಿ ಮುಜುಗರಕ್ಕೀಡು ಮಾಡಲು ಅಥವಾ ಆ ಪರಂಪರೆಯನ್ನು ಹಾಳು ಮಾಡಲು ಬಯಸಲಿಲ್ಲ. ಹಾಗಾಗಿ ನಾನು ನನ್ನ ಮೇಲೆ ಸಾಕಷ್ಟು ಒತ್ತಡವನ್ನು ಹಾಕುತ್ತಿದ್ದೆ. ನಾನು ಬಹಳಷ್ಟು ಒತ್ತಡವನ್ನು ಹಾಕುತ್ತಿದ್ದೆ. ನಾನು ಬಹಳಷ್ಟು ವರ್ಷಗಳನ್ನು ಹಾಗೆ ಕಳೆದಿದ್ದೇನೆ. ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತೇನೆ ಎಂದು ಹೇಳಿದ್ದಾರೆ.

ಆದರೆ ದುಲ್ಕರ್ ಸಲ್ಮಾನ್ ಎಲ್ಲಾ ಒತ್ತಡಗಳನ್ನು ಮೀರಿ ಬೆಳೆದರು. ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಕೆವಲ ಉತ್ತಮ ಸಿನಿಮಾಗಳನ್ನು ಪಡೆದುಕೊಂಡಿದ್ದೇನೆ ಎಂಬುದು ನನ್ನ ಅದೃಷ್ಟ. ನಾನು ಕೆಲವು ಉತ್ತಮ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ನನಗೆ ಬೇರೆ ಭಾಷೆಗಳಿಂದಲೂ ಆಫರ್ ಗಳು ಬಂದವು ಎಂದು ಹೇಳಿದರು.

2.45 ಕೋಟಿ ಬೆಲೆಯ ಮರ್ಸಿಡಿಸ್‌ - ಎಎಂಜಿ ಜಿ63 ಕಾರು ಖರೀದಿಸಿದ ದುಲ್ಕರ್ ಸಲ್ಮಾನ್!

ಮಲಯಾಳಂ ಕ್ರೈಮ್ ಥ್ರಿಲ್ಲರ್ ಕುರುಪ್ ಮತ್ತು ತಮಿಳಿನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಹೇ ಸಿನಾಮಿಕಾ ಮತ್ತು ಸೋನು ಲೈವ್ ನಲ್ಲಿ ಬಿಡುಗಡೆಯಾದ ಸೆಲ್ಯೂಟ್ ಚಿತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಮೂರು ಸಿನಿಮಾಗಳು ವಿಭಿನ್ನವಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

click me!