2021ರಲ್ಲಿ ಮಿಸ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡ ಹರ್ನಾಜ್ ಸಂಧು 'ದೇಹದ ಆಕಾರಕ್ಕಿಂತ ಮನಸ್ಸಿನ ಆಕಾರ ಮುಖ್ಯ' ಎಂದು ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.
2021ರಲ್ಲಿ ಮಿಸ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡಿದ್ದ ಹರ್ನಾಜ್ ಸಂಧು ಇತ್ತೀಚಿಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. 22 ವರ್ಷದ ಈ ಬ್ಯೂಟಿ ಹರ್ನಾಜ್ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಕೊಂಚ ದಪ್ಪ ಆಗಿದ್ದಾರೆ. ತೂಕ ಹೆಚ್ಚಿಸಿಕೊಂಡಿರುವ ಹರ್ನಾಜ್ ನೋಡಿ ಅನೇಕರು ಟೀಕಿಸುತ್ತಿದ್ದಾರೆ. ಕೆಟ್ಟ ಕಾಮೆಂಟ್ ಹರಿಬಿಡುತ್ತಿದ್ದಾರೆ. ಈ ಬಗ್ಗೆ ಹರ್ನಾಜ್ ಸಂಧು ಪ್ರತಿಕ್ರಿಯೆ ನೀಡಿದ್ದಾರೆ. ತಕ್ಕಾ ಉತ್ತರ ನೀಡುವ ಮೂಲಕ ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ್ದಾರೆ. ಅಂದಹಾಗೆ ಹರ್ನಾಜ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ 'ದೇಹದ ಗಾತ್ರ ಯಾವುದೇ ಇರಲಿ ನಾನ್ನನ್ನು ನಾನು ಸುಂದರವಾಗಿ ಕಾಣಿಸುವಂತೆ ಮಾಡಿಕೊಳ್ಳುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಸಂದರ್ಭ ಇರಲಿ ನಿಮ್ಮನ್ನು ನೀವು ಮೊದಲು ಪ್ರೀತಿಸಬೇಕು ಎಂದಿದ್ದಾರೆ.
ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಇತ್ತೀಚಿಗಷ್ಟೆ ಬ್ಲೂ ಮಿನಿ ಡ್ರೆಸ್ ಧರಿಸಿದ್ದ ಫೋಟೋವನ್ನು ಶೇರ್ ಮಾಡಿದ್ದರು. ಲ್ಯಾಕ್ಮಿ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ದರು. ತುಂಬಾ ಸುಂದರವಾಗಿ ಕಾಣಿಸುತ್ತಿದ್ದರೂ ಹರ್ನಾಜ್ ತೂಕದ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಫೋಟೋ ಶೇರ್ ಮಾಡಿ, 'ನಿಮ್ಮ ದೇಹದ ಆಕಾರಕ್ಕಿಂತ ನಿಮ್ಮ ಮನಸ್ಸಿನ ಆಕಾರ ತುಂಬಾ ಮುಖ್ಯ' ಎಂದು ಬರೆದುಕೊಳ್ಳುವ ಮೂಲಕ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.
Miss Universe ಹರ್ನಾಜ್ ಸಂಧುಗೆ ಈ ಕಾಯಿಲೆ ಇದೆಯಂತೆ!
ಸಿನಿ ಸೆಲೆಬ್ರಿಟಿಗಳು ಸಾಮಾನ್ಯವಾಗಿ ದೇಹದ ತೂಕದ ವಿಚಾರವಾಗಿ ಟ್ರೋಲ್ ಗೆ ಗುರಿಯಾಗುತ್ತಾರೆ. ಸ್ವಲ್ಪ ದಪ್ಪ-ಸಣ್ಣ ಆದರೂ ಸಹ ಟೀಕೆಗಳನ್ನು ಎದುರಿಸುತ್ತಾರೆ. ಪ್ರತಿಯೊಬ್ಬ ಸ್ಟಾರ್ಸ್ ಕೂಡ ಟ್ರೋಲಿಗೆ ಗುರಿಯಾಗಿರುತ್ತಾರೆ. ಈ ಹಿಂದೆ ಪಿಟಿಐ ಸಂದರ್ಶನದಲ್ಲಿ ಹರ್ನಾಜ್ ತನಗೆ ಸೆಲಿಯಾಕ್ ಕಾಯಿಲೆ ಎಂದು ಬಹಿರಂಗ ಪಡಿಸಿದ್ದರು. ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿರುವಾಗ ದೇಹವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ ಎಂದು ಹೇಳಿದ್ದಾರೆ.
'ಮೊದಲು ನನ್ನನ್ನು ತುಂಬಾ ತೆಳ್ಳಗಾಗಿದ್ದಾಳೆ ಎನ್ನುತ್ತಿದ್ದರು. ಆಗ ಅವರೇ ಅವಳು ದಪ್ಪ ಆಗಿದ್ದಾಳೆ ಎಂದು ಹೇಳುತ್ತಿದ್ದಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಧೈರ್ಯ ಮತ್ತು ಆತ್ಮ ವಿಶ್ವಾಸದ ಹುಡುಗಿ. ನನ್ನ ಕಾಯಿಲೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ನಾನು ಗೋಧಿ ಮತ್ತು ಅನೇಕ ವಸ್ತುಗಳನ್ನು ತಿನ್ನಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಈ ಕಾಯಿಲೆ ಇಂದ ಬಳಲುವವರು ತೂಕ ಹೆಚ್ಚಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಈ ರೋಗಲಕ್ಷಣಗಳನ್ನು ನಿಯಂತ್ರಣದಲ್ಲಿ ಇಡಬಹುದು. ಆಹಾರ ಪದ್ದತಿಯಲ್ಲಿ ನಿಯಂತ್ರಣದಲ್ಲಿ ಇರಬೇಕಾಗುತ್ತದೆ. ಇನ್ನು ಈ ಕಾಯಿಲೆ ಇರುವವರು ಮಗುವಿಗೆ ಜನನ ನೀಡುವ ಸಮಯದಲ್ಲಿ ಸಮಸ್ಯೆಯಾಗಲಿದೆ.
ಹಿಜಾಬ್ ಧರಿಸುವ ಬಗ್ಗೆ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಹೇಳಿದ್ದೇನು ?
ಹರ್ನಾಜ್ ಸಂಧು 2021ರಲ್ಲಿ ಮಿಸ್ ಯೂನಿವರ್ಸ್ ಪಟ್ಟ ಗೆಲ್ಲುವ ಮೂಲಕ 21 ವರ್ಷದ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ ಬಂದಿತ್ತು. ಪಂಜಾಬ್ ಮೂಲದ ಸುಂದರಿ ಹರ್ನಾಜ್ ಕೌರ್ ಸಂಧು 70ನೇ ಮಿಸ್ ಯುೂನಿವರ್ಸ್ ಪಟ್ಟ ಒಲಿಸಿಕೊಂಡಿದ್ದರು. ಕೊನೆಯ ಬಾರಿ 2000ರಲ್ಲಿ ಬಾಲಿವುಡ್ನಟಿ ಲಾರಾ ದತ್ತ ಅವರಿಗೆ ಮಿಸ್ ಯೂನಿವರ್ಸ್ ಪಟ್ಟ ಒಲಿದಿತ್ತು. ಇಸ್ರೇಲ್ ನಲ್ಲಿ ನೆರವೇರಿದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದರು.