ದೇವಲೋಕದ ಅಪ್ಸರೆ ನನ್ನನ್ನು ಬಿಟ್ಟು ಮುದುಕನನ್ನು ಮದ್ವೆಯಾದ್ಲು! ರಾಮ್‌ ಗೋಪಾಲ್‌ ವರ್ಮಾ ಮಾತು ಮತ್ತೆ ಮುನ್ನೆಲೆಗೆ

By Suchethana D  |  First Published Sep 30, 2024, 6:04 PM IST

ವಿವಾದಿತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ನಟಿಯೊಬ್ಬಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಆ ನಟಿ ಈಗ ಬದುಕಿಲ್ಲವಾದರೂ ಅವಳು ತಮಗೆ ಸಿಗಿಲಿಲ್ಲ ಎನ್ನುವ ಕೊರಗು ಇಂದಿಗೂ ಕಾಡುತ್ತಿದೆ!
 


ರಾಮ್ ಗೋಪಾಲ್ ವರ್ಮಾ ಒಂದು ಕಾಲದಲ್ಲಿ ಸೆನ್ಸೇಷನಲ್ ಡೈರೆಕ್ಟರ್ ಎಂದು ಹೆಸರಾಗಿದ್ದರು. ಶಿವ,  ಸರ್ಕಾರ್,  ಕ್ಷಣಸಾಕ್ಷಂ, ಮುಂತಾದ ಸಿನಿಮಾಗಳಿಂದ ಅವರು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ತೆಲುಗು ಮತ್ತು ಬಾಲಿವುಡ್ ಎರಡರಲ್ಲೂ ಟ್ರೆಂಡ್ ಸೆಟ್ಟರ್ ಆದರು. ಎಸ್.ಎಸ್.ರಾಜಮೌಳಿಯಂತಹ ನಿರ್ದೇಶಕರೂ ವರ್ಮಾ ಅವರ ಸಾಮರ್ಥ್ಯದ ಬಗ್ಗೆ ಹಾಡಿ ಕೊಂಡಾಡುತ್ತಿದ್ದರು. ಆದರೆ ಸದ್ಯ ರಾಮ್‌ ಗೋಪಾಲ ವರ್ಮಾ ಸದ್ಯ ವಿವಾದಗಳಿಂದಲೇ ಸುತ್ತುವರೆಯುತ್ತಿದ್ದಾರೆ. ಅವರ ಕ್ರೇಜ್ ಕಡಿಮೆಯಾಗುತ್ತಿದೆ. ಅವರ ಪೋಸ್ಟ್‌ಗಳು ಮತ್ತು ಅವರು ಮಾಡುತ್ತಿರುವ ಚಿತ್ರಗಳು ವಿವಾದಗಳಾಗುತ್ತಿವೆ. ಹೌದು. ಹಿಂದಿನ ವರ್ಮಾ ಈಗಿಲ್ಲ. ಈಗ ರಾಮ್‌ ಗೋಪಾಲ್‌ ವರ್ಮಾದಿಂದ ಬರುತ್ತಿರುವ ಚಿತ್ರಕ್ಕೆ ತಲೆಕೆಡಿಸಿಕೊಳ್ಳುವವರು ಕಡಿಮೆ. ವಿವಾದಾತ್ಮಕ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೂ ಇದೇ ಕಾರಣ. ನಿರ್ದೇಶಕರಾಗಿ ಅವರ ಸಿನಿಮಾಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ರಾಮ್ ಗೋಪಾಲ್ ವರ್ಮಾ ಸಿನಿಮಾ ಈಗ ಗಲಾಟೆಯೇ ಹೊರತು ಬೇರೇನೂ ಅಲ್ಲ ಎಂಬ ಮಟ್ಟಿಗೆ ಅವರ ಚಿತ್ರಗಳು ವಿವಾದಕ್ಕೆ ಕಾರಣವಾಗುತ್ತಿವೆ.  

ಇದೇ ವೇಳೆ, ವರ್ಮಾ ಅವರ ಹಳೆಯ ಟ್ವೀಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಹುಡುಗಿಯರ ವಿಷಯದಲ್ಲಿ ವರ್ಮಾ ಹೇಗೆ ವರ್ತಿಸುತ್ತಿದ್ದಾರೆ ಎನ್ನುವುದು ಬೇರೆ ಹೇಳಬೇಕಾಗಿಲ್ಲ. ಆದರೆ ಒಬ್ಬ ನಟಿಯನ್ನು ಮಾತ್ರ ಇವರು ಹುಚ್ಚನಂತೆ ಪ್ರೀತಿಸುತ್ತಿದ್ದರು. ಇದನ್ನು ಖುದ್ದು  ಅವರೇ ಈಗಲೂ ಒಪ್ಪಿಕೊಳ್ಳುತ್ತಾರೆ. ಅವರು ಬಹಿರಂಗವಾಗಿ ಹೇಳುತ್ತಾರೆ. ಆ ನಾಯಕಿಯೇ  ಶ್ರೀದೇವಿ. ಅವರಿಗೆ ಅತಿಲೋಕ ಸುಂದರಿ ಎಂದರೆ ತುಂಬಾ ಇಷ್ಟ, ಇಂದಿಗೂ ಶ್ರೀದೇವಿಯ  ಪೂಜೆ ಮಾಡುತ್ತಾರೆ ಅವರು. ಇದೀಗ ಶ್ರೀದೇವಿಯವರ ಎಐ ಫೋಟೋ ಒಂದನ್ನು ಶೇರ್‍ ಮಾಡಿಕೊಂಡಿರುವ ರಾಮ್‌ ಗೋಪಾಲ್‌ ನಟಿಯನ್ನು ತಾವು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

Tap to resize

Latest Videos

undefined

ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್​ ಮಾತು

ಅಷ್ಟಕ್ಕೂ ಬೋನಿ ಕಪೂರ್ ಜೊತೆಗೆ ಶ್ರೀದೇವಿ ಮದುವೆಯಾದಾಗ ರಾಮ್‌ ಗೋಪಾಲ್‌ ಕಣ್ಣೀರು ಹಾಕಿದ್ದರಂತೆ. ಶ್ರೀದೇವಿ ಸತ್ತಾಗ ಬೋನಿ ಕಪೂರ್‌ಗಿಂತಲೂ ಹೆಚ್ಚಾಗಿ ದುಃಖಿತರಾಗಿದ್ದಂತೆ.  ಅಷ್ಟಕ್ಕೂ ರಾಮ್‌ಗೋಪಾಲ್‌ ಅವರಿಗೆ ಶ್ರೀದೇವಿಯ ಮೇಲೆ ಇದ್ದ ಹುಚ್ಚು ಅಷ್ಟಿಷ್ಟಲ್ಲ. ಆಕೆಯನ್ನು ಪಡೆಯಲು ಏನು ಬೇಕಾದರೂ ಮಾಡಲು ರೆಡಿ ಇದ್ದರು. ಬೋನಿ ಕಪೂರ್‌ ಮೇಲೆ ಅದೆಷ್ಟು ಮಟ್ಟಿಗಿನ ಸಿಟ್ಟು ಮತ್ತು ಹೊಟ್ಟೆಕಿಚ್ಚು ಇತ್ತೆಂದರೆ ಶ್ರೀದೇವಿ ಅವರನ್ನು ಮದುವೆಯಾದಾಗ ಮುದುಕನನ್ನು ಮದುವೆಯಾದಳು ಎಂದು ಅಸಮಾಧಾನ ಹೊರ ಹಾಕಿದ್ದರಂತೆ! ಶ್ರೀದೇವಿ ಮದುವೆಯಾಗಿ ಪಂಜರದ ಹಕ್ಕಿಯಾಗಿದ್ದಾಳೆ. ಆಕೆಯ ವೃತ್ತಿಜೀವನದ ಅವನತಿಗೆ ಅವರೇ ಪ್ರಮುಖ ಕಾರಣ.   ಶ್ರೀದೇವಿಯ  ಚಾರ್ಮ್, ಸೌಂದರ್ಯ, ಅಂಗಸೌಷ್ಠವ, ವ್ಯಕ್ತಿತ್ವ ಎಲ್ಲವೂ ನನಗೆ ಹುಚ್ಚು ಹಿಡಿಸಿತ್ತು. ಆದರೆ  ಸಿನಿ ಕರಿಯರ್‌ನಲ್ಲಿ ಉತ್ತುಂಗದಲ್ಲಿದ್ದಾಗ, ಮುದುಕ ಬೋನಿ ಕಪೂರ್‌ರನ್ನು ಮದುವೆಯಾದಳು.  ಬೋನಿ ಕಪೂರ್ ಮನೆಯಲ್ಲಿ ಸಾಧಾರಣ ಗೃಹಿಣಿಯಾಗಿ ಟೀ ಕೊಡುವುದನ್ನು ನೋಡಿದ್ದೇನೆ. ದೇವಲೋಕದ ಅಪ್ಸರೆಯನ್ನು ಭುವಿಗೆ ತಂದು ಸಾಧಾರಣ ಗೃಹಿಣಿಯಂತೆ ನಡೆಸಿಕೊಂಡ ಬೋನಿ ಕಪೂರ್‌ನನ್ನು ನಾನು ದ್ವೇಷಿಸುತ್ತೇನೆ' ಎಂದಿದ್ದರು. 

ದೇವರು ಸೃಷ್ಟಿಸಿದ "ಸೆಕ್ಸಿಯೆಸ್ಟ್ ಮತ್ತು ಅತ್ಯಂತ ಸುಂದರ ಮಹಿಳೆಯ ಲೈಫ್‌ ಬೋನಿಯಿಂದ ಹಾಳಾಯಿತು ಎಂದಿದ್ದರು. ಇದೀಗ ಈ ಫೋಟೋದಿಂದಾಗಿ ಮತ್ತೆಲ್ಲವೂ ಮುನ್ನೆಲೆಗೆ ಬಂದಿದೆ. ಈ ವಿಷಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿದೆ. ಅಭಿಮಾನಿಯೊಬ್ಬರು AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮೂಲಕ ಶ್ರೀದೇವಿ ಚಿತ್ರವನ್ನು  ರಚಿಸಿದ್ದಾರೆ. ಅದನ್ನು ರಾಮ್‌ಗೋಪಾಲ್‌ ಶೇರ್‌ ಮಾಡಿಕೊಂಡಿದ್ದು  ಶ್ರೀದೇವಿಗೆ ಕಣ್ಣೀರಿಡುವುದಾಗಿ  ಪೋಸ್ಟ್ ಮಾಡಿದ್ದಾರೆ.  ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾ‌ಮ್‌ ಗೋಪಾಲ್‌ ವರ್ಮಾ ಅಭಿಮಾನಿಗಳು ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.  ಚಿಂತಿಸಬೇಡಿ ವರ್ಮಾಜಿ. ಶ್ರೀದೇವಿ ಎಲ್ಲರ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎನ್ನುತ್ತಿದ್ದಾರೆ.  
 

ನಟ ಬಾಲಚಂದ್ರ ಗುಂಪು ರತಿಕ್ರೀಡೆ ನಡೆಸ್ತಿದ್ರು, ಆ ಕೋಣೆಯಲ್ಲಿ ನನ್ನನ್ನು... ಮೀನು ಭಯಂಕರ ಆರೋಪ!

This INTELLIGENTLY made ARTIFICIAL Sreedevi made me CRY 😔 pic.twitter.com/5ncBsSPwFh

— Ram Gopal Varma (@RGVzoomin)
click me!