
ಟಾಲಿವುಡ್‌ನ ನಟ ನಂದಮೂರಿ ಬಾಲಕೃಷ್ಣ.. ಒಮ್ಮೆ ಕಥೆ ಕೇಳಿದ್ರಂತೆ, ಅವ್ರಿಗೆ ಇಷ್ಟ ಆಯ್ತು ಅಂತ ಅಂದ್ರೆ ಮತ್ತೆ ಆಲೋಚನೆ ಇಲ್ಲದೆ ಸಿನಿಮಾ ಮಾಡ್ತಾರೆ. ಡೈರೆಕ್ಷನ್‌ನಲ್ಲೂ ಇನ್‌ವಾಲ್ವ್ ಆಗ್ತಾರೆ. ನಿರ್ದೇಶಕರಿಗೆ ಪೂರ್ತಿ ಸ್ವಾತಂತ್ರ್ಯ ಕೊಡ್ತಾರೆ. ಅದಕ್ಕೇ ಅವರ ಜೊತೆ ಕೆಲಸ ಮಾಡೋದು ತುಂಬಾ ಕಂಫರ್ಟ್ ಅಂತ ಹಲವು ನಿರ್ದೇಶಕರು ಹೇಳ್ತಾರೆ. ಆದ್ರೆ ತಮಗೆ ಐಡಿಯಾಗಳು ಬಂದ್ರೆ ಹೇಳ್ತಾರಂತೆ. ಹಲವು ನಿರ್ದೇಶಕರು ಅದನ್ನು ತಗೋತಾರಂತೆ, ಅದಕ್ಕೆ ತಕ್ಕಂತೆ ಮಾಡ್ತಾರಂತೆ, ತಮ್ಮ ಸಲಹೆಗಳು ಹಲವು ಬಾರಿ ವರ್ಕ್‌ಔಟ್ ಆಗಿವೆ ಅಂತ ಬಾಲಯ್ಯ ಸಹ ಹೇಳಿದ್ದಾರೆ. ಹೀಗೆ ಒಬ್ಬ ಸ್ಟಾರ್ ಹೀರೋಗೆ ಕೂಡ ಸಲಹೆ ಕೊಟ್ಟಿದ್ರಂತೆ. ಆದ್ರೆ ಕೇಳಿಲ್ಲವಂತೆ. ಫಲಿತಾಂಶ ಏನಾಯ್ತು ಅಂತ ಹೇಳಿದ್ದಾರೆ ಬಾಲಯ್ಯ. ಆ ಕಥೆ ಏನು ಗೊತ್ತಾ?
ಬಾಲಕೃಷ್ಣ ನಂದಮೂರಿ ತಾರಕ ರಾಮರಾವ್ ಅವರ ನಟನಾ ವಾರಸುದಾರರಾಗಿ ಎಂಟ್ರಿ ಕೊಟ್ಟರು. ತಂದೆಗೆ ತಕ್ಕ ಮಗನಾಗಿ ನಟನೆಯಲ್ಲಿ ಈಗಲೂ ಅದೇ ಜೋಶ್ ತೋರಿಸ್ತಿದ್ದಾರೆ. ಸತತ ಹ್ಯಾಟ್ರಿಕ್ ಹಿಟ್ಸ್‌ಗಳಿಂದ ಮುನ್ನುಗ್ಗುತ್ತಿದ್ದಾರೆ. `ಅಖಂಡ`, `ವೀರಸಿಂಹ ರೆಡ್ಡಿ`, `ಭಗವಂತ್ ಕೇಸರಿ` ಚಿತ್ರಗಳ ಯಶಸ್ಸಿನಲ್ಲಿದ್ದಾರೆ ಬಾಲಯ್ಯ. ಈಗ ಅವರು ಬಾಬಿ ನಿರ್ದೇಶನದ `ಎನ್‌ಬಿಕೆ109` ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇದು ಬಾಲಯ್ಯ ಅವರ ಮೆಗಾಮಾಸ್ ಸಿನಿಮಾ ಆಗಿದೆ. ಜೊತೆಗೆ ಆಕ್ಷನ್ ಥ್ರಿಲ್ಲರ್ ಆಗಿ ತೆರೆಗೆ ಬರ್ತಿದೆ ಅಂತ ಗೊತ್ತಾಗ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಗ್ಲಿಂಪ್ಸ್, ಟೀಸರ್‌ಗಳು ಗಮನ ಸೆಳೆದಿದೆ. ಅಲ್ಲದೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಈ ಸಿನಿಮಾ ಚಿತ್ರೀಕರಣ ಭರದಿದಂದ ನಡೆಯುತ್ತಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.
ಬಾಲಯ್ಯ ಇತ್ತೀಚೆಗೆ ಒಂದು ಯೂಟ್ಯೂಬ್‌ಗೆ (ನ್ಯೂಸ್ 18) ಕೊಟ್ಟ ಸಂದರ್ಶನದಲ್ಲಿ ಕುತೂಹಲಕಾರಿ ವಿಷಯಗಳನ್ನ ಹಂಚಿಕೊಂಡಿದ್ದಾರೆ. ಅತಿಲೋಕ ಸುಂದರಿ ಶ್ರೀದೇವಿ ಜೊತೆ ಒಂದೇ ಒಂದು ಸಿನಿಮಾ ಕೂಡ ಮಾಡದೇ ಇರೋದಕ್ಕೆ ಕಾರಣಗಳನ್ನ ತಿಳಿಸಿದ್ದಾರೆ. ಶ್ರೀದೇವಿ ಅಂದ್ರೆ ಅವರ ದೃಷ್ಟಿಯಲ್ಲಿ ದೊಡ್ಡ ನಟಿ. ದೊಡ್ಡ ಸ್ಟಾರ್. ಅಂಥ ನಟಿ ಸಿನಿಮಾ ಮಾಡ್ತಾರೆ ಅಂದ್ರೆ ಅವರ ರೇಂಜ್‌ನಲ್ಲಿ ಸಿನಿಮಾ ಇರಬೇಕು. ಇಲ್ಲ ಅಂದ್ರೆ ಲೈಟ್ ಆಗುತ್ತೆ. ಅವರ ಮಟ್ಟದ ಪಾತ್ರ ತಮ್ಮ ಸಿನಿಮಾಗಳಲ್ಲಿ ಸಿಗಲಿಲ್ಲ, ಹೀಗಾಗಿ ಅವರ ಜೊತೆ ನಟಿಸುವ ಅವಕಾಶ ಸಿಗಲಿಲ್ಲ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರ ಕಾಂಬಿನೇಷನ್ ಸೆಟ್ ಆಗಲ್ಲ ಅಂತ ಅನಿಸಿತು, ಅದಕ್ಕೇ ನಟಿಸಲಿಲ್ಲ ಅಂತ ಹೇಳಿದ್ದಾರೆ. ಶ್ರೀದೇವಿ ಸಿನಿಮಾ ಮಾಡ್ತಾರೆ ಅಂದ್ರೆ ಅವರ ಮಟ್ಟದಲ್ಲಿ ಆ ಪಾತ್ರ ಇರಬೇಕು ಅಂತ ನಾನು ಭಾವಿಸ್ತೀನಿ ಅಂತ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಕುತೂಹಲಕಾರಿ, ಶಾಕಿಂಗ್ ವಿಷಯವನ್ನ ಬಹಿರಂಗ ಪಡಿಸಿದ್ದಾರೆ ಬಾಲಯ್ಯ. ಒಬ್ಬ ಸ್ಟಾರ್ ಹೀರೋ ಸಿನಿಮಾದಿಂದ ಶ್ರೀದೇವಿಯನ್ನ ತೆಗೆದು ಹಾಕಬೇಕು ಅಂತ ಹೇಳಿದ್ರಂತೆ.
ನಾನು ಬೇರೆ ಹೀರೋಗಳಿಗೂ ಸಲಹೆ ಕೊಡ್ತೀನಿ ಅಂತ ಹೇಳಿದ್ದಾರೆ ಬಾಲಯ್ಯ. ಹಾಗೆ ಒಬ್ಬ ದೊಡ್ಡ ಹೀರೋ ಸಿನಿಮಾದಲ್ಲಿ ಹೀರೋಯಿನ್ ಆಗಿ ಶ್ರೀದೇವಿಯನ್ನ ತಗೊಂಡ್ರಂತೆ. ಆ ವಿಷಯ ತಿಳಿದು ಹೀರೋ, ನಿರ್ದೇಶಕರಿಗೆ ಹೇಳಿದ್ರಂತೆ. ಆದ್ರೆ ಅವರ ಮಾತನ್ನ ಯಾರೂ ಕೇಳಿಸಿಕೊಳ್ಳಲಿಲ್ಲವಂತೆ. ನಾನು ಬೇಡ ಅಂದರೂ ಶ್ರೀದೇವಿಯನ್ನೇ ಹೀರೋಯಿನ್ ಆಗಿ ತಗೊಂಡ್ರಂತೆ. ಆಮೇಲೆ ಸಿನಿಮಾ ಬಿಡುಗಡೆಯಾಗಿ ಕನಿಷ್ಠ ಹತ್ತು ದಿನ ಕೂಡ ಚಿತ್ರಮಂದಿರದಲ್ಲಿ ಓಡಲಿಲ್ಲ. ಅಷ್ಟೇ ಅಲ್ಲ, ಅದರಲ್ಲಿ ಮತ್ತೊಬ್ಬ ಲೇಡಿ ಆರ್ಟಿಸ್ಟ್‌ನ ಕೂಡ ತೆಗೆದು ಹಾಕಬೇಕು ಅಂತ ಹೇಳಿದ್ರಂತೆ. ಅದನ್ನೂ ಚಿತ್ರತಂಡ ಕೇಳಿಲ್ಲ, ಜೊತೆಗೆ ಆ ಸಿನಿಮಾ ಫ್ಲಾಫ್ ಅಂತ ಮೊದಲೇ ಹೇಳಿದ್ರಂತೆ. ಡಬ್ ಮಾಡಿ ಬಿಡುಗಡೆ ಮಾಡಿದ್ರೆ ಬೆಟರ್, ರೀಮೇಕ್ ವರ್ಕ್‌ಔಟ್ ಆಗಲ್ಲ ಅಂದ್ರಂತೆ. ಆದ್ರೆ ಕೇಳದೆ ಮಾಡಿದ್ರು, ಆ ಸಿನಿಮಾ ಫ್ಲಾಫ್ ಆಯ್ತು, ಕೊನೆಗೆ ನಾನು ಹೇಳಿದ್ದೇ ಆಯ್ತು ಅಂತ ಚಿತ್ರತಂಎಡ ನಾಲಿಗೆ ಕಚ್ಚಿಕೊಂಡ್ರು ಎಂದರು ಬಾಲಯ್ಯ. ಮತ್ತೆ ಆ ಹೀರೋ ಯಾರು? ಆ ಸಿನಿಮಾ ಯಾವುದು? ಅನ್ನೋದು ಸಸ್ಪೆನ್ಸ್.
ಬಾಲಯ್ಯ ಸಮಕಾಲೀನರಲ್ಲಿ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಜೊತೆ ನಟಿ ಶ್ರೀದೇವಿ ನಟಿಸಿದ್ದಾರೆ. ಚಿರು ಜೊತೆ ಐದಾರು ಸಿನಿಮಾಗಳಲ್ಲಿ ನಟಿಸಿದ್ರೂ ಬಾಲಯ್ಯ ಚುರುಕಾಗಿ ಸಿನಿಮಾಗಳಲ್ಲಿ ನಟಿಸ್ತಿದ್ದಾಗ ಮಾಡಿದ್ದು `ಜಗದೇಕ ವೀರುಡು ಅತಿಲೋಕ ಸುಂದರಿ`. ಆಮೇಲೆ `ಎಸ್ಪಿ ಪರುಶುರಾಮ್` ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ `ಎಸ್ಪಿ ಪರಶುರಾಮ್` ರೀಮೇಕ್ ಸಿನಿಮಾ. ಇದರಲ್ಲಿ ಚಿರುಗೆ ಜೋಡಿಯಾಗಿ ಶ್ರೀದೇವಿ ನಟಿಸಿದ್ದರು. ಈ ಸಿನಿಮಾ ಹೆಚ್ಚು ಕಡಿಮೆ ಯಶಸ್ಸು ಕಾಣಲಿಲ್ಲ. ಬಹುಶಃ ಈ ಸಿನಿಮಾ ಬಗ್ಗೆಯೇ ಬಾಲಯ್ಯ ಈ ಕಮೆಂಟ್ ಮಾಡಿರಬಹುದು ಅಂತ ಹೇಳಲಾಗ್ತಿದೆ. ಯಾಕಂದ್ರೆ ನಾಗಾರ್ಜುನ ಜೊತೆ ಶ್ರೀದೇವಿ ನಟಿಸಿದ ಸಿನಿಮಾಗಳು ರೀಮೇಕ್ ಅಲ್ಲ, ಹಾಗೆಯೇ ವೆಂಕಿ ಜೊತೆ ಮಾಡಿದ ಒಂದೇ ಒಂದು ಸಿನಿಮಾ `ಕ್ಷಣಕ್ಷಣಂ` ದೊಡ್ಡ ಹಿಟ್ ಆಯ್ತು. ಈ ಹೋಲಿಕೆಯಲ್ಲಿ ಚಿರಂಜೀವಿ ಜೊತೆ ಮಾಡಿದ ಸಿನಿಮಾ ಬಗ್ಗೆಯೇ ಬಾಲಯ್ಯ ಈ ಸಲಹೆ ಕೊಟ್ಟಿರಬಹುದು ಅಂತ ಅರ್ಥ ಆಗ್ತಿದೆ. ತಮ್ಮ ಸಂದರ್ಶನದಲ್ಲಿ ಬಾಲಯ್ಯ ಹೇಳಿರೋ ಈ ವಿಷಯಗಳು ಈಗ ಕುತೂಹಲ ಮೂಡಿಸುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.