32 ಕೋಟಿ ರೂಗೆ ಬಂಗಲೆ ಮಾರಿ 3 ಕೋಟಿ ರೂ ರೇಂಜ್ ರೋವರ್ ಖರೀದಿಸಿದ ಕಂಗನಾ!

By Chethan Kumar  |  First Published Sep 30, 2024, 3:55 PM IST

ಸಂಸದನೆ, ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ಮುಂಬೈನಲ್ಲಿರುವ ಬಂಗಲೆ ಮಾರಾಟ ಮಾಡಿದ್ದರು. ಇದರ ಬೆನ್ನಲ್ಲೇ ಬರೋಬ್ಬರಿ 3 ಕೋಟಿ ರೂಪಾಯಿ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ.


ಮುಂಬೈ(ಸೆ.30) ವಿವಾದಾತ್ಮಕ ಹೇಳಿಕೆ ಮೂಲಕ ಬಿಜೆಪಿಗೆ ಮುಜುಗರ ತಂದಿಟ್ಟ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಇದೀಗ ಹೊಸ ಕಾರು ಖರೀದಿಸಿದ್ದಾರೆ. ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ಕಂಗನಾ ರಣವಾತ್ ಮುಂಬೈನಲ್ಲಿರುವ ತಮ್ಮ ಬಂಗಲೆಯನ್ನು 32 ಕೋಟಿ ರೂಪಾಯಿಗೆ ಖರೀದಿಸಿದ್ದರು. ಈ ಹಣದಲ್ಲಿ ಇದೀಗ 3 ಕೋಟಿ ರೂಪಾಯಿನ್ನು ಕಾರಿಗೆ ಖರ್ಚು ಮಾಡಿದ್ದಾರೆ.

ಬಹುನಿರೀಕ್ಷಿತ ಎಮರ್ಜೆನ್ಸಿ ಚಿತ್ರಕ್ಕೆ ಹಲವು ಅಡೆ ತಡೆ ಎದುರಾಗುತ್ತಿದ್ದಂತೆ ಕಂಗನಾ ರಣವಾತ್ ತಮ್ಮ ಬಂಗಲೆಯನ್ನು ಮಾರಾಟ ಮಾಡಿದ್ದರು. ಮುಂಬೈನ ಲ್ಯಾಂಡ್ ರೋವರ್ ಮೋದಿ ಮೋಟಾರ್ಸ್ ಶೋ ರೂಂನಿಂದ ಈ ಕಾರು ಖರೀದಿಸಿದ್ದಾರೆ. ಕಾರು ಖರೀದಿಸಿದ ಬಳಿಕ ಕಂಗನಾ ರಣವಾತ್ ಪೂಜೆ ಮಾಡಿಸಿದ್ದಾರೆ. ಸಂಬಂಧಿ ಅಶ್ವತ್ಥಾಮ ಜೊತೆ ಕಾರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದರೆ. ಬಿಳಿ ಬಣ್ಣದ ರೇಂಜ್ ರೋವರ್ ಎಸ್‌ಯುವಿ ಕಾರು ಖರೀದಿಸಿದ್ದಾರೆ.  ರೇಂಜ್ ರೋವರ್ ಯಾವ ಮಾಡೆಲ್ ಕಾರು ಅನ್ನೋದು ಬಹಿರಂಗವಾಗಿಲ್ಲ. ಮುಂಬೈನಲ್ಲಿ LWB ಸೀರಿಸ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಬೆಲೆ 3.81 ಕೋಟಿ ರೂಪಾಯಿ.

Tap to resize

Latest Videos

undefined

ಸಂಸದೆ ಕಂಗನಾಳಿಂದ ಬಿಜೆಪಿಗೆ ಮುಜುಗರ, ನಟಿಯ ವಿವಾದಾತ್ಮಕ ಹೇಳಿಕೆಗಳು ಇಲ್ಲಿದೆ!  

ಕಂಗನಾ ರಣಾವತ್ ಬಳಿ ಕೆಲ ದುಬಾರಿ ಕಾರುಗಳಿವೆ. ಈ ಸಾಲಿಗೆ ಇದೀಗ ರೇಂಜ್ ರೋವರ್ ಸೇರಿಕೊಂಡಿದೆ. ಎಪ್ರಿಲ್ ತಿಂಗಳಲ್ಲಿ ಕಂಗನಾ ದುಬಾರಿ ಮರ್ಸಿಡಿಸ್ ಬೆಂದ್ ಮೇಬ್ಯಾಕ್ ಜಿಎಲ್‌ಎಸ್ 600 ಕಾರು ಖರೀದಿಸಿದ್ದರು. 4ಮ್ಯಾಟಿಕ್ ಕಾರಿನ ಬೆಲೆ 2.91 ಕೋಟಿ ರೂಪಾಯಿ. ಈ ಕಾರು ಕಂಗನಾ ಅವರ ಮಣಿಕರ್ಣಿಕಾ ಫಿಲ್ಮ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನೋಂದಣಿ ಮಾಡಲಾಗಿದೆ. ಇದರ ಜೊತೆಗೆ ಕಂಗನಾ ಬಳಿ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಎಸ್680 ಕಾರಿನ ಮಾಲೀಕರಾಗಿದ್ದಾರೆ. ಇದರ ಬೆಲೆ 3.43 ಕೋಟಿ ರೂಪಾಯಿ.

ಕಂಗನಾ ರಣಾವತ್ ಇತ್ತೀಚೆಗೆ ಮುಂಬೈನಲ್ಲಿರುವ ಬಂಗಲೆಯನ್ನು ಮಾರಾಟ ಮಾಡಿದ್ದರು. ತಮ್ಮ ಮಣಿಕರ್ಣಿಕ ಪ್ರೊಡಕ್ಷನ್ ಹೌಸ್ ಕಚೇರಿಯಾಗಿ ಬಳಸಿಕೊಂಡಿದ್ದ ಈ ಬಂಗಲೆಯನ್ನು ಕಂಗನಾ ಮಾರಾಟ ಮಾಡಿದ್ದರು. 32 ಕೋಟಿ ರೂಪಾಯಿಗೆ ಈ ಬಂಗಲೆ ಮಾರಾಟಗೊಂಡಿತ್ತು. ಎಮರ್ಜೆನ್ಸಿ ಚಿತ್ರ ಬಿಡುಗಡೆಗೆ ಹಲವು ಅಡೆ ತಡೆಗಳು ಎದುರಾಗುತ್ತಿದ್ದಂತೆ ಕಂಗನಾ ರಣವಾತ್ ತಮ್ಮ ಬಂಗಲೆ ಮಾರಾಟ ಮಾಡಿದ್ದರು. 

ಇದೇ ಬಂಗಲೆ ಭಾರಿ ವಿವಾದಕ್ಕೂ ಕಾರಣವಾಗಿತ್ತು. ಅಕ್ರಮವಾಗಿ ಬಂಗಲೆ ನಿರ್ಮಾಣ ಮಾಡಲಾಗಿದೆ ಅನ್ನೋ ಕಾರಣಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಅಂದಿನ ಮಹಾರಾಷ್ಟ್ರ ಸರ್ಕಾರ ಕೆಡವಲು ಮುಂದಾಗಿತ್ತು. ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಕೋರ್ಟ್ ಮೊರೆ ಹೋದ ಕಂಗನಾ ರಣಾವತ್ ಮಹಾ ಸರ್ಕಾರದ ನಿರ್ಧಾರಕ್ಕೆ ತಡೆ ತಂದಿದ್ದರು. 

ಕಂಗನಾ ಹೇಳಿಕೆಗೆ ಕ್ಷಮೆ ಕೇಳ್ತಾರಾ ಮೋದಿ? ಎಚ್ಚರಿಕೆ ನೀಡಿದ್ರೂ ಮಾತಿನ ಭರಾಟೆ ನಿಲ್ಲಿಸದ ಕಾಂಟ್ರವರ್ಸಿ ಕ್ವೀನ್!
 

click me!