
ಟಾಲಿವುಡ್ ಚಿತ್ರರಂಗದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುವ ನಿರ್ದೇಶಕ ಅಂದ್ರೆ ಆರ್‌ಜಿವಿ. ವೃತ್ತಿ ವಿಚಾರಕ್ಕಿಂತಲೂ ವೈಯಕ್ತಿಕ ವಿಚಾರಗಳಿಗೆ ಸೋಷಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸುವ ವರ್ಮಾ ಈಗ ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ನಾಥೂರಾಮ್ ಗೋಡ್ಸೆ ಪರ ನಿಂತ RGV;ನ್ಯೂ ಪ್ರಾಜೆಕ್ಟ್ ಸುತ್ತಾ ವಿವಾದಗಳು ?
ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡುವುದಾಗಿ ಟ್ಟೀಟ್ ಮಾಡಿದ್ದಾರೆ. ಬರೆದಿರುವ ಪೋಸ್ಟ್‌ನಲ್ಲಿ ಎಲ್ಲಾ ಸ್ಟಾರ್ ನಟರ ಹೆಸರನ್ನು ಶಾರ್ಟ್‌ಫಾರ್ಮ್‌ನಲ್ಲಿ ಬರೆದಿದ್ದಾರೆ. 'ನಾನೊಂದು ಹೊಸ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದೇನೆ. ಅದಕ್ಕೆ ಪಿಕೆ ನಟ. ಈ ಚಿತ್ರದಲ್ಲಿ ಪಿಕೆ ಜೊತೆ ಎಂಎಸ್, ಎಸ್‌ಬಿ ಮತ್ತು ಟಿಎಸ್ ನಟಿಸಲಿದ್ದಾರೆ' ಎಂದು ಹೇಳಿದ್ದಾರೆ.
ರಾಮ್‌ಗೋಪಾಲ್ ವರ್ಮಾ ಬಳಸಿರುವ ಹೆಸರುಗಳು ಅಭಿಮಾನಿಗಳಿಗೆ ಗೊತ್ತಿರುವವರೆ ಆದರೂ ಒಬ್ಬ ಕಲಾವಿದನನ್ನು ಕರೆಯುವ ರೀತಿ ಅದಲ್ಲವೆಂದು ನೆಟ್ಟಿಗರು ಗರಂ ಆಗಿದ್ದಾರೆ. ಪಿಕೆ ಅಂದ್ರೆ ಪವನ್ ಕಲ್ಯಾಣ್, ಎಂಎಸ್ ಅಂದ್ರೆ ಮೆಗಾ ಸ್ಟಾರ್ ಚಿರಂಜೀವಿ, ಎನ್‌ಬಿ ಅಂದ್ರೆ ಚಿರಂಜೀವಿ ಸಹೋದರ ನಾಗಬಾಬು ಮತ್ತು ಟಿಎಸ್ ಅಂದ್ರೆ ತ್ರಿವಿಕ್ರಮ್ ಎಂದು.
ಇನ್ನು ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ರಷ್ಯಾ ದೇಶದಿಂದ ನಟಿ ಬಂದು ಅಭಿನಯಿಸುತ್ತಾರೆ ಹಾಗೂ ಚಿತ್ರದಲ್ಲಿ ಸದಾ ಎಂಟು ಎಮ್ಮೆಗಳು ಇದ್ದು ಅವುಗಳೂ ಅಭಿನಯಿಸಲಿವೆ ಎಂದು ತಿಳಿಸಿದ್ದಾರೆ. ವೈಯಕ್ತಿಕ ಜೀವನದಲ್ಲೂ ಪವನ್ ಪತ್ನಿ ರಷ್ಯಾದವರಾಗಿದ್ದು ವರ್ಮಾ ಪರ್ಸನಲ್ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ನೋಡಲು ಸೇಮ್ ಪವನ್ ನಂತೆ ಇರುವ ಜೂನಿಯರ್ ಆರ್ಟಿಸ್ಟ್ ವಿಡಿಯೋ ಶೇರ್ ಮಾಡಿ ಇವನೇ ನಮ್ಮ ಚಿತ್ರದ ಹೀರೋ ಎಂದು ಗೇಲಿ ಮಾಡಿದ್ದಾರೆ.
ನಟಿ ಪೂನಂ ಕೌರ್, ರಾಮ್‌ಗೋಪಾಲ್ ವರ್ಮಾ ಮಾಡಿರುವ ಟ್ಟೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. 'ಈ ಚಿತ್ರದಲ್ಲಿ ಪ್ಲೀಸ್ ಆರ್‌ಜಿವಿ ಅಂತ ಒಂದು ಕ್ಯಾರೇಕ್ಟರ್ ಇರಲಿ. ಹೆಣ್ಣು ಮಕ್ಕಳ ವೀಕ್‌ನೆಸ್ ತಿಳಿದುಕೊಂಡು ಅವರಿಗೆ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿ ಟ್ಟೀಟ್ ಮಾಡಿಸುವವರು ಎಂದು. ನಾನು ಪುಟ್ಟ ಹುಡುಗಿಯಾಗಿದ್ದಾಗ ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿದ್ದೆ ಆದರೆ ಈಗ ಬೇಸರವಾಗುತ್ತದೆ. ನೀವು ನನಗೆ ಕಾಲ್ ಮಾಡಿ ಮಾತನಾಡುವ ರೀತಿಯನ್ನು ರೆಕಾರ್ಡ್ ಮಾಡಿಕೊಂಡರೆ ಅಭಿಮಾನಿಗಳಿಗೆ ನಿಮ್ಮ ಇನ್ನೊಂದು ಮುಖ ತಿಳಿಯುತಿತ್ತು' ಎಂದು ಬರೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಹುಚ್ಚಾಟ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ನಿಜಕ್ಕೂ ವರ್ಮಾ ಹುಚ್ಚಾನಾ? ಎಂದು ತಮಗೇ ತಾವೇ ಪ್ರಶ್ನೆ ಹಾಕಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.