'ಕೃಷ್ಣ ಆಂಡ್ ಹಿಸ್ ಲೀಲಾ' ಚಿತ್ರದ ನಟಿ ಶೇರ್ ಮಾಡಿಕೊಂಡ ವಿಡಿಯೋ ಸೋಷಿಯಾಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. U-ಟರ್ನ್ ಬೇಡ ಎಂದು ಹೇಳಿ ಅವರೇ ಈಗ ಎಡವಟ್ಟು ಮಾಡ್ಕೊಂಡ್ರಾ ಈ ನಟಿ ?
ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾ 'U-Turn'. ವಕೀಲೆಯಾಗಿ ರಂಗಭೂಮಿ ಹಿನ್ನಲೆಯಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರದ್ಧಾ ಶ್ರೀನಾಥ್ ಈಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಶ್ರದ್ಧಾ ತಮ್ಮ ಶೂಟಿಂಗ್ ಹೇಗಿತ್ತು ಏನೆಲ್ಲಾ ಮಾಡಿದ್ರೂ ಎಂದು ವೃತ್ತಿ ಜೀವನದ ಬಗ್ಗೆ ಪ್ರೇಕ್ಷಕರ ಜೊತೆ ಹಂಚಿಕೊಳ್ಳಲು ಆರಂಭಿಸಿದ್ದಾರೆ.
ಮನೆಯಲ್ಲಿ ಪೂಜೆ ನಡೆಯುತ್ತಿರುವಾಗಲೇ ಮೈ ನೆರದ್ರಂತೆ ಶ್ರದ್ಧಾ ಶ್ರೀನಾಥ್!
'ಯು ಟರ್ನ್' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶ್ರದ್ಧಾ ಈಗ ಪರಭಾಷೆ ಚಿತ್ರರಂಗದ ಬೇಡಿಕೆಯ ನಟಿ. ಸಿನಿಮಾ ರಿಲೀಸ್‌ವರೆಗೂ ಬಹಿರಂಗವಾಗಿ ಮಾಹಿತಿ ನೀಡಲು ಇಚ್ಚಿಸದ ಶ್ರದ್ಧಾ ಈಗ ತೆರೆಕಾಣಲು ಸಿದ್ಧವಾಗುತ್ತಿರುವ ತಮಿಳು ಸಿನಿಮಾ 'ಕೃಷ್ಣ ಆಂಡ್ ಹಿಸ್ ಲೀಲಾ' ಚಿತ್ರೀಕರಣದಲ್ಲಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.
ಶ್ರದ್ಧಾ ಬುಲೆಟ್ ಸವಾರಿ:
'ಕೃಷ್ಣ ಆಂಡ್ ಹಿಸ್ ಲೀಲಾ' ಚಿತ್ರದಲ್ಲಿ ಶ್ರದ್ಧಾ ಬುಲೆಟ್ ಓಡಿಸುವ ಸನ್ನಿವೇಶ ಚಿತ್ರೀಕರಣವಿತ್ತು. ನಿಧಾನವಾಗಿ ಬೈಕ್ ಚಲಿಸಲು ಆರಂಭಿಸಿದಾಗ ಯು ಟರ್ನ್ ಮಾಡಲು ಹೋಗಿ ಬೀಳುತ್ತಾರೆ. 'ಭಾರತೀಯ ಸಿನಿಮಾದಲ್ಲಿ ನಾನು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡ ಮೇಲೆ ಒಂದು ಬೈಕ್ ಓಡಿಸುವ ದೃಶ್ಯ ಇಲ್ಲದಿದ್ದರೆ ಹೇಗೆ? ಇದು 2017ರಲ್ಲಿ ಸೆರೆ ಹಿಡಿದ ವಿಡಿಯೋ. ನಾವು ನಂದಿ ಬೆಟ್ಟದಲ್ಲಿ ಶೂಟಿಂಗ್ ಮಾಡುತ್ತಿದ್ದೇವು. ಮಳೆ ಬಂದು ರಸ್ತೆಯಲ್ಲಾ ಹಸಿಯಾಗಿತ್ತು. ನಮ್ಮ ನಿರ್ದೇಶಕರು ನಿಮಗೆ ಬೈಕ್ ಓಡಿಸಲು ಬರುತ್ತಾ ಎಂದು ಕೇಳಿದ್ದರು ನಾನು ಅದಕ್ಕೆ ನೇರವಾಗಿ 'ನೋ' ಎಂದು ಹೇಳಿದ್ದೆ. ಆದರೆ 8 ವರ್ಷವಿದ್ದಾಗ ಅಲ್ಪ ಸ್ವಲ್ಪ ಬೈಕ್‌ಗಳ ಬಗ್ಗೆ ತಿಳಿದುಕೊಂಡಿದ್ದೆ ಆ ಧೈರ್ಯದ ಮೇಲೆ ಗೇರ್ ಅರ್ಥ ಮಾಡಿಕೊಳ್ಳೋಣ ಎಂದು ಟ್ರೈ ಮಾಡಿದೆ. ನಾನು ಬಿದ್ದಾಗ ಎಲ್ಲರೂ ನನಗೆ ಏನಾಯ್ತು ಅಂತ ಹೆದರಿದರು ಆದರೆ ಮನಸ್ಸಿನಲ್ಲಿ ಬೈಕ್‌ಗೆ ಏನಾಯ್ತಪ್ಪ ಅಂತ ಆತಂಕ ಇತ್ತು' ಎಂದು ಬರೆದುಕೊಂಡಿದ್ದಾರೆ.
ಶ್ರದ್ಧಾ ಶೇರ್ ಮಾಡಿಕೊಂಡಿರುವ ವಿಡಿಯೋ ಬಗ್ಗೆ ಬರೆದ ಸಾಲುಗಳನ್ನು ಓದದೆ ಜನರು ಈ ಘಟನೆ ಈಗ ನಡೆದಿರುವುದೆಂದು ತಿಳಿದು ತುಂಬಾನೇ ಮೆಸೇಜ್ ಮಾಡುತ್ತಿದ್ದಾರೆ. ಈ ಕಾರಣ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಪಷ್ಟನೇ ನೀಡಿದ್ದಾರೆ.
'ನಾನು ಬೈಕಿಂದ ಬಿದ್ದಿರುವ ವಿಡಿಯೋ ಪೋಸ್ಟ್ ಮಾಡಲು ಕಾರಣ ನನಗೆ ಅದು ತಮಾಷೆ ಎಂದೆನಿಸಿತ್ತು. ನಾನು ಓಡಿಸಲು ಪ್ರಯತ್ನಿಸುತ್ತಿದ್ದ ಹಾಗೆ ಬಿದ್ದೆ. ಇದೇನು ದೊಡ್ಡ ವಿಷಯವೇನಲ್ಲ.ನಾವು ನಮ್ಮ ಸೋಷಿಯಲ್ ಮೀಡಿಯಾದಲ್ಲಿ ನಮಗೇನು ಬೇಕು ಅದನ್ನು ಶೇರ್ ಮಾಡಿಕೊಳ್ಳುತ್ತೇವೆ.ವಾಸ್ತವಕ್ಕೆ ಹತ್ತಿರವಿಲ್ಲದ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಇಷ್ಟವಿಲ್ಲ. ರಿಯಲ್ ಆಗಿರುವ ವಿಷಯಗಳನ್ನೇ ಹಂಚಿಕೊಳ್ಳಲು ಇಚ್ಚಿಸುತ್ತೇನೆ ಹಾಗೂ ನಿಮ್ಮೊಂದಿಗೆ ಡೀಪ್ ಸಂದರ್ಶನ ಮಾಡಲು ಇಷ್ಟ ಪಡುತ್ತೇನೆ. ನೀವೆಲ್ಲರೂ ತೋರಿಸಿದ ಪ್ರೀತಿಗೆ ನಾನು ಆಭಾರಿ. ಮೂರು ವರ್ಷಗಳ ಹಿಂದಿನ ಈ ವಿಡಿಯೋ ನಿಮಗೆ ನಗು ತರಿಸಿರುವುದಕ್ಕೆ ನನಗೆ ಸಂತೋಷವಾಗಿದೆ ' ಎಂದು ಹೇಳಿದ್ದಾರೆ.