ಈ ಕಾರಣಕ್ಕೆ ಮಗು ಮಾಡಿಕೊಂಡಿಲ್ಲ ಎಂದ ರಾಮ್ ಚರಣ್ ಪತ್ನಿ ಉಪಾಸನಾ

Published : Jul 09, 2022, 05:58 PM IST
ಈ ಕಾರಣಕ್ಕೆ ಮಗು ಮಾಡಿಕೊಂಡಿಲ್ಲ ಎಂದ ರಾಮ್ ಚರಣ್ ಪತ್ನಿ ಉಪಾಸನಾ

ಸಾರಾಂಶ

ಉಪಾಸನಾ ಮಗುವನ್ನು ಯಾಕೆ ಹೊಂದಿಲ್ಲ ಎಂದು ಸದ್ಗುರು ಜೊತೆಗಿನ ಸಂವಾದದಲ್ಲಿ ರಿವೀಲ್ ಮಾಡಿದರು. ಜನಸಂಖ್ಯೆ ನಿಯಂತ್ರಣದ ಕಾರಣದಿಂದ ಮಗುವನ್ನು ಹೊಂದಿಲ್ಲ ಎಂದು ಉಪಾಸನಾ ಬಹಿರಂಗ ಪಡಿಸಿದರು.

ಯಾವಾಗಾ ಮದುವೆ, ಮದುವೆ ಯಾಕಾಗಿಲ್ಲ ಎಂದು ಸಾಮಾನ್ಯವಾಗಿ ಯುವಕರಿಗೆ ಎದುರಾಗುವ ಪ್ರಶ್ನೆ. ಮದುವೆ ಬಳಿಕ ಮಕ್ಕಳು ಯಾಕೆ ಮಾಡಿಕೊಂಡಿಲ್ಲ, ಇನ್ನು ಮಕ್ಕಳಾಗಿಲ್ಲವಾ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಈ ಪ್ರಶ್ನೆ ಸೆಲೆಬ್ರಿಟಿಗಳನ್ನು ಬಿಟ್ಟಿಲ್ಲ. ನಟಿಮಣಿಯರಿಗೆ ಮದುವೆ ಯಾವಾಗ? ಮದುವೆಯಾದ ಬಳಿಕ ಮಕ್ಕಳು ಯಾವಾಗ? ಎನ್ನುವ ಪ್ರಶ್ನೆ ಎಲ್ಲೇ ಹೋದರು ಎದುರಾಗುತ್ತಲೇ ಇರುತ್ತದೆ. ಈ ಪ್ರಶ್ನೆ ಟಾಲಿವುಡ್ ಸ್ಟಾರ್ ಕಪಲ್ ರಾಮ್ ಚರಣ್  ಮತ್ತು ಉಪಾಸನಾ (Ram Charan Wife Upasana) ಅವರಿಗೂ ತಪ್ಪಿಲ್ಲ. ನಟ-ನಟಿಯರ ಬಗ್ಗೆ ತಿಳಿದುಕೊಳ್ಳಲು ಅನೇಕರು ಆಸಕ್ತರಾಗಿರುತ್ತಾರೆ. ಹಾಗೆಯೇ ರಾಮ್ ಚರಣ್ ದಂಪತಿಯಿಂದ ಗುಡ್ ನ್ಯೂಸ್ ಕೇಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಹಾಗಾಗಿ ರಾಮ್ ಚರಣ್ ಜೋಡಿ ಎಲ್ಲೇ ಹೋದರು ಜೂ. ರಾಮ್ ಅಥವಾ ಉಪಾಸನಾ ಎಂಟ್ರಿ ಯಾವಾಗಾ ಎಂದು ಕೇಳುತ್ತಲೇ ಇರುತ್ತಾರೆ. 

ಅಂದಹಾಗೆ ರಾಮ್ ಚರಣ್ ಮತ್ತು ಉಪಾಸನಾ ಮದುವೆಯಾಗಿ 10 ವರ್ಷಗಳು ಪೂರೈಸಿದೆ. 2012ರಲ್ಲಿ ರಾಮ್ ಚರಣ್, ಉಪಾಸನ ಜೊತೆ ಹಸೆಮಣೆ ಏರಿದರು. 10 ವರ್ಷಗಳಾದರೂ ಯಾಕೆ ಇನ್ನು ಮಕ್ಕಳು ಮಾಡಿಕೊಂಡಿಲ್ಲ ಎನ್ನುವ ಪ್ರಶ್ನೆ ಸ್ಟಾರ್ ಜೋಡಿಗೆ ಎದುರಾಗುತ್ತಲೇ ಇದೆ. ಈ ಬಗ್ಗೆ ಉಪಾಸನಾ ಅನೇಕ ಬಾರಿ ಉತ್ತರ ನೀಡಿದ್ದು ಇದು ತಮ್ಮ ವೈಯಕ್ತಿಕ ವಿಚಾರ, ಒಂದು ವೇಳೆ ಹಾಗೇನಾದಾರೂ ಆದರೆ ಖಂಡಿತ ಹೇಳುತ್ತೇವೆ ಎಂದು ಉತ್ತರ ನೀಡಿ ನುಣುಚಿಕೊಳ್ಳುತ್ತಾರೆ. 

ಹೊಸ ಹೇರ್ ಸ್ಟೈಲ್‌‌ನಲ್ಲಿ ರಾಮ್ ಚರಣ್ ಮಿಂಚಿಂಗ್; ಫೋಟೋ ವೈರಲ್

ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ ಮತ್ತು ಅದನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ಆದರೆ ದಂಪತಿ ಏಕೆ ಮಗುವನ್ನು ಹೊಂದಿಲ್ಲ ಎಂದು ಅವರನ್ನು ಪ್ರಶ್ನೆಮಾಡಲಾಗುತ್ತಿದೆ. ಅನೇಕ ಬಾರಿ ಇಬ್ಬರೂ ಶೀಘ್ರದಲ್ಲೇ ಮಗುವನ್ನು ಹೊಂದಲು ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದೀಗ ಮತ್ತೊಮ್ಮೆ ಉಪಾಸನಾ ಈ ಬಗ್ಗೆ ಮಾತನಾಡಿದ್ದಾರೆ. ಸದ್ಗುರು ಜೊತೆ ಉಪಾಸನರ ಇತ್ತೀಚಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 

ಉಪಾಸನಾ, ಸಂಬಂಧ, ಉತ್ಪಾದನೆ ಮತ್ತು ಜೀವನದ ಬಗ್ಗೆ ಮಾತನಾಡಿದ್ದಾರೆ. ಬಳಿಕ ಉಪಾಸನಾ ಮಗುವನ್ನು ಯಾಕೆ ಹೊಂದಿಲ್ಲ ಎಂದು ರಿವೀಲ್ ಮಾಡಿದರು. ಜನಸಂಖ್ಯೆ ನಿಯಂತ್ರಣದ ಕಾರಣದಿಂದ ಮಗುವನ್ನು ಹೊಂದಿಲ್ಲ ಎಂದು ಉಪಾಸನಾ ಬಹಿರಂಗ ಪಡಿಸಿದರು.ಉಪಾಸನಾ ಮಾತಿಗೆ ಪ್ರತಿಕ್ರಿಯೆ ನೀಡಿದ ಸದ್ಗುರು, 'ಮನುಷ್ಯ ಹೊರ ಬಿಡುವ ಇಂಗಾಲದ ಡಯಾಕ್ಸೈಡ್‌ನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು ಎಲ್ಲರಿಗೂ ಕಳವಳದ ವಿಚಾರವಾಗಿದೆ. ಮಾನವ ಸಂಕುಲ ಕಡಿಮೆಯಾದರೆ ಇಂಗಾಲದ ಡಯಾಕ್ಸೈಡ್‌ ಕೂಡ ಕಡಿಮೆಯಾಗಲಿದೆ. ಒಬ್ಬ ಮಹಿಳೆ ಮಗುವಿಗೆ ಜನ್ಮ ನೀಡುವುದಿಲ್ಲ ಎಂಬ ತೀರ್ಮಾನ ಮಾಡಿದರೆ ಅದು ಪ್ರಕೃತಿಗೆ ಒಳ್ಳೆಯದು'ಎಂದು ಹೇಳಿದರು.

ಬಾಲಿವುಡ್‌ಗೆ ಹಾರಿದ ರಾಮ್ ಚರಣ್; ಸಲ್ಮಾನ್ ಜೊತೆ ನಟನೆ

ಸದ್ಗುರುಗಳ ಮಾತು ಕೇಳಿ ಉಪಾಸನಾ ಇಂಪ್ರೆಸ್ ಆಗಿದ್ದಾರೆ.  ಸದ್ಗುರು ಆಲೋಚನೆ ಕೇಳಿ ರಾಮ್ ಅವರ ಪತ್ನಿ ಪ್ರಭಾವಿತರಾದರು ಮತ್ತು ಅವರು ಶೀಘ್ರದಲ್ಲೇ ತನ್ನ ತಾಯಿ ಮತ್ತು ಅತ್ತೆಯನ್ನು ಭೇಟಿ ಮಾಡಿಸಲು ಇಷ್ಟಪಡುತ್ತೇನೆ ಎಂದು ಹೇಳಿದರು. 'ನಾನು  ನಿಮ್ಮನ್ನು ನನ್ನ ಅಮ್ಮ ಮತ್ತು ಅತ್ತೆಯೊಂದಿಗೆ ಶೀಘ್ರದಲ್ಲೇ ಮಾತನಾಡುವಂತೆ ಮಾಡುತ್ತೇನೆ' ಎಂದು ಉಪಾಸನಾ ಹೇಳಿದರು. ಈ ಮೂಲಕ ಉಪಾಸನಾ ಪದೇ ಪದೇ ಎದುರಾಗುತ್ತಿದ್ದ ಪ್ರಶ್ನೆಗೆ ಬ್ರೇಕ್ ಹಾಕಿದ್ದಾರೆ. 

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!