ಬಾಣಸಿಗರ ಕರೆದೊಯ್ದು ಸೈನಿಕರಿಗೆ ರುಚಿ ರುಚಿ ಭೋಜನ ಸಿದ್ದಪಡಿಸಿದ ರಾಮ್‌ ಚರಣ್‌

Published : Apr 20, 2022, 08:29 PM IST
ಬಾಣಸಿಗರ ಕರೆದೊಯ್ದು ಸೈನಿಕರಿಗೆ ರುಚಿ ರುಚಿ ಭೋಜನ ಸಿದ್ದಪಡಿಸಿದ ರಾಮ್‌ ಚರಣ್‌

ಸಾರಾಂಶ

ಬಿಎಸ್‌ಎಫ್‌ ಯೋಧರೊಂದಿಗೆ ಕಾಲ ಕಳೆದ ರಾಮ್‌ಚರಣ್‌ ಬಾಣಸಿಗರ ಕರೆದೊಯ್ದು ರುಚಿ ರುಚಿ ಭೋಜನ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ ನಟ

ನವದೆಹಲಿ: ಟಾಲಿವುಡ್‌ ನಟ ರಾಮ್ ಚರಣ್ ಅಮೃತಸರದಲ್ಲಿ ಬಿಎಸ್‌ಎಫ್‌ ಸೈನಿಕರಿಗೆ ಅಡುಗೆ ಮಾಡಲು ತನ್ನ ವೈಯಕ್ತಿಕ ಬಾಣಸಿಗನನ್ನು ಕರೆದುಕೊಂಡು ಹೋಗಿ ಅವರಿಗೆ ಅಡುಗೆ ಮಾಡಿ ಬಡಿಸಿ ಅವರೊಂದಿಗೆ ಊಟ ಮಾಡಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೃತಸರದ (Amritsar) ಖಾಸಾ ಪ್ರದೇಶದ ಬಿಎಸ್‌ಎಫ್ ಕ್ಯಾಂಪಸ್‌ನಲ್ಲಿ ಬೀಡುಬಿಟ್ಟಿರುವ ಬಿಎಸ್‌ಎಫ್ ಜವಾನರಿಗೆ ರುಚಿಕರವಾದ ಊಟವನ್ನು ನೀಡಲು ರಾಮ್ ಚರಣ್ ತಮ್ಮ ಬಾಣಸಿಗರನ್ನು ಕರೆದೊಯ್ದಿದ್ದರು. ಎಸ್‌ಎಸ್ ರಾಜಮೌಳಿ ಅವರ ಸಿನಿಮಾ 'ಆರ್‌ಆರ್‌ಆರ್'ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ರಾಮ್ ಚರಣ್ (Ram Charan), ಪ್ರಸ್ತುತ ನಿರ್ಮಾಪಕ ಶಂಕರ್ ಅವರ ಇನ್ನೂ ಹೆಸರಿಡದ ಮುಂಬರುವ ತ್ರಿಭಾಷಾ ಚಿತ್ರದ ಚಿತ್ರೀಕರಣದ ಸಲುವಾಗಿ ಅಮೃತಸರದಲ್ಲಿದ್ದಾರೆ. 

ಈ ಚಿತ್ರಕ್ಕೆ 'RC 15' ಎಂದು ಹೆಸರಿಡಲಾಗಿದೆ ಮತ್ತು ನಟಿ ಕಿಯಾರಾ ಅಡ್ವಾಣಿ (Kiara Advani) ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ರಾಮ್ ಚರಣ್‌, ಅಮೃತಸರದ ಖಾಸಾದಲ್ಲಿ (Khasa) ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರೊಂದಿಗೆ ಮಧ್ಯಾಹ್ನ ಕಳೆದಿದ್ದೇನೆ . ಯೋಧರ ತ್ಯಾಗ ಮತ್ತು ಸಮರ್ಪಣೆಯ ಸ್ಪೂರ್ತಿದಾಯಕ ಕಥೆಗಳನ್ನು ಕೇಳಿದ್ದೇನೆ ಎಂದು ಅವರು ತಮ್ಮ ಅಭಿಮಾನಿಗಳೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ. ಸೂಪರ್‌ಸ್ಟಾರ್ ರಾಮ್‌ಚರಣ್‌ ಅವರ ಬಾಣಸಿಗರು ಹೈದ್ರಾಬಾದ್‌ನಿಂದ (Hyedrabad)ಅಮೃತಸರಕ್ಕೆ ಅವರೊಂದಿಗೆ ಬಂದಿದ್ದರು. ಅಲ್ಲದೇ ಬಿಎಸ್‌ಎಫ್‌ (Border Security Force) ಕ್ಯಾಂಪ್‌ನಲ್ಲಿ ಎಲ್ಲಾ ಸೈನಿಕರಿಗೆ ಮನಪೂರ್ವಕವಾಗಿ ಊಟವನ್ನು ಸಿದ್ಧಪಡಿಸಿದ್ದರು.

ಅಜ್ಜಿ ಜೊತೆ ಬೆಣ್ಣೆ ಕಡೆಯುತ್ತಿರುವ ರಾಮ್‌ ಚರಣ್‌; ನೋಡಲು ಕೃಷ್ಣನಂತೆ!

ಭಿಎಸ್‌ಎಫ್‌ ಶಿಬಿರದಲ್ಲಿ ಸೈನಿಕರೊಂದಿಗೆ ಕಳೆದ ಸಮಯದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ರಾಮ್ ಚರಣ್, 'ಅಮೃತಸರದ ಖಾಸಾದಲ್ಲಿರುವ ಬಿಎಸ್‌ಎಫ್ ಕ್ಯಾಂಪಸ್‌ನಲ್ಲಿ ಗಡಿ ಭದ್ರತಾ ಪಡೆಗಳ ಕಥೆಗಳು, ತ್ಯಾಗಗಳು ಮತ್ತು ಸಮರ್ಪಣೆಗಳನ್ನು ಕೇಳಲು ಕಳೆದ ಸ್ಪೂರ್ತಿದಾಯಕ ಮಧ್ಯಾಹ್ನ'ಎಂದು ಬರೆದುಕೊಂಡಿದ್ದಾರೆ. ಫೋಟೋಗಳಲ್ಲಿ 'RRR' ನಟ ಸೈನಿಕರೊಂದಿಗೆ ಊಟ ಮಾಡುವುದನ್ನು ಕಾಣಬಹುದು. ತಟ್ಟೆಯಲ್ಲಿ ದಕ್ಷಿಣ ಭಾರತದ ಖಾದ್ಯಗಳಾದ ಇಡ್ಲಿ, ವಡಾ ಮತ್ತು ಸಾಂಬಾರ್ ಅನ್ನು ಕಾಣಬಹುದು. ಅಮೃತಸರದಲ್ಲಿರುವ ನಟಿ ಕಿಯಾರಾ ಅಡ್ವಾಣಿ ಅವರು ಈ ಹಿಂದೆ ಗೋಲ್ಡನ್ ಟೆಂಪಲ್‌ನ ಮುಂದೆ ಕೈ ಜೋಡಿಸಿ ನಿಂತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು.

ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಆಕ್ಟಿಂಗ್ ಬಗ್ಗೆ ನಟ ರಾಮ್‌ ಚರಣ್‌ ಮಾತುಗಳಿದು!

ರಾಮ್ ಮತ್ತು ಕಿಯಾರಾ ಎರಡನೇ ಬಾರಿಗೆ ಚಿತ್ರವೊಂದಕ್ಕೆ ಕೈ ಜೋಡಿಸಿದ್ದಾರೆ. ಇವರಿಬ್ಬರು ಈ ಹಿಂದೆ ‘ವಿನಯ ವಿಧೇಯ ರಾಮ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದಾಗ್ಯೂ, ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅವರು ಚಲನಚಿತ್ರ ನಿರ್ಮಾಪಕ ಶಂಕರ್ ಅವರೊಂದಿಗೆ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.

 

ಜುಲೈ 2021 ರಲ್ಲಿ, ಈ ಯೋಜನೆಯ ಅಧಿಕೃತ ಘೋಷಣೆಗೆ ಮುಂಚಿತವಾಗಿ ರಾಮ ಚರಣ್‌ ಅವರು ಶಂಕರ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಅದೇ ಫೋಟೋಗಳನ್ನು ಹಂಚಿಕೊಂಡ ರಾಮ್, 'ನಿನ್ನೆ ಚೆನ್ನೈನಲ್ಲಿ ಅಸಾಧಾರಣ ದಿನವನ್ನು ಹೊಂದಿದ್ದೆವು! ಇಂತಹ ಶ್ರೇಷ್ಠ ಆತಿಥೇಯರಾದ @shanmughamshankar ಸರ್ ಮತ್ತು ಕುಟುಂಬಕ್ಕೆ ಧನ್ಯವಾದಗಳು. #RC15 ಗಾಗಿ ಎದುರು ನೋಡುತ್ತಿದ್ದೇವೆ. ಈ ಬಗ್ಗೆ ಹೊಸ ಅಪ್‌ಡೇಟ್‌ಗಳು ಶೀಘ್ರದಲ್ಲೇ ಬರಲಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!