
ಡಿಫರೆಂಟ್ ಪಾತ್ರಗಳನ್ನು ಮಾಡೋ ನಟಿ ರಾಕುಲ್‌ಪ್ರೀತ್ ಸಿಂಗ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಟಾಲಿವುಡ್‌ನಲ್ಲಾಗಿದ್ರೂ ಮಿಂಚುತ್ತಿರೋದು ಬಾಲಿವುಡ್‌ನಲ್ಲಿ. ಇದೀಗ ನಟಿಗೆ ಹೊಸ ಕೆಲಸ ಸಿಕ್ಕಿದೆ. ಇದು ನಟಿಯ ನೆಕ್ಸ್ಟ್ ಪ್ರಾಜೆಕ್ಟ್. ಕೆಲಸ ಕಾಂಡೋಮ್ ಟೆಸ್ಟ್ ಮಾಡೋದು.
ತೇಜಸ್ ಡಿಯೋಸ್ಕರ್ ನಿರ್ದೇಶಿಸಲಿರುವ ಮುಂಬರುವ ಈ ಹೊಸ ಸಿನಿಮಾದಲ್ಲಿ ಟಾಪ್ ನಟಿಯರಲ್ಲೊಬ್ಬರಾದ ರಾಕುಲ್ ಪ್ರೀತ್ ಸಿಂಗ್ ಅವರು ಕಾಂಡೋಮ್ ಪರೀಕ್ಷಕಿಯ ಪಾತ್ರವನ್ನು ಮಾಡಲಿದ್ದಾರೆ.
ಪುಟ್ಟ ಮಗಳು ಸಮೀಶಾ ಸೇರಿ ಶಿಲ್ಪಾಶೆಟ್ಟಿ ಫ್ಯಾಮಿಲಿಗೆ ಕೊರೋನಾ ಪಾಸಿಟಿವ್
ಇನ್ನೂ ಟೈಟಲ್ ಇಡದ ಸಿನಿಮಾದ ಕುರಿತು ಮಾತನಾಡಿದ ಚಲನಚಿತ್ರ ನಿರ್ಮಾಪಕ, ಇದು ಸಾಮಾಜಿಕ ಫ್ಯಾಮಿಲಿ ಎಂಟರ್‌ಟೈನರ್ ಆಗಿದೆ ಎಂದಿದ್ದಾರೆ.
ಸಿನಿಮಾದಲ್ಲಿ ಕಾಂಡೋಮ್ಗಳ ಬಳಕೆಕುರಿತು ಚಿತ್ರಿಸಲಾಗಿದೆ ಎಂದು ಹೇಳಿದ್ದಾರೆ. ರಾಕುಲ್ ಪಾತ್ರಕ್ಕೆ ಹೆಚ್ಚು ಸೂಕ್ತವೆಂದು ನಾನು ನಂಬಿದ್ದೇನೆ ಎಂದು ಅವರು ಹೇಳಿದ್ದಾರೆ.
ಗಂಡಸರಿಗೆ ಮಾತ್ರವಲ್ಲ ಹೆಂಗಸರಿಗೂ ಇದೆ ಕಾಂಡೋಮ್, ಬಳಸೋದು ಹೇಗೆ..?
ರಾಕುಲ್ ಪ್ರೀತ್ ಅವರು ಸರ್ದಾರ್ ಕಾ ಗ್ರಾಂಡ್‌ಸನ್ ಬಿಡುಗಡೆಗೆಯನ್ನು ಎದುರು ನೋಡುತ್ತಿದ್ದಾರೆ. ಅವರ ಮುಂಬರುವ ಹಿಂದಿ ಸಿನಿಮಾಗಳಲ್ಲಿ ಅಟ್ಯಾಕ್, ಮೇಡೇ ಮತ್ತು ಥಾಂಕ್ಯೂ ಸೇರಿವೆ.
ಕಾಂಡೋಮ್ ಟೆಸ್ಟರ್ ಕೆಲಸವೇನು?
ಕಾಂಡೋಮ್ ಪರೀಕ್ಷಕರು ಲೈಂಗಿಕ-ಕಾರ್ಯನಿರ್ವಾಹಕರು. ದೊಡ್ಡ ಕಂಪನಿಗಳು ತಮ್ಮ ಕಾಂಡೋಮ್ಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ಪರೀಕ್ಷಿಸಲು ಕಾಂಡೋಮ್ ಟೆಸ್ಟರ್‌ಗಳನ್ನು ನೇಮಿಸಿಕೊಳ್ಳುತ್ತಾರೆ. ಈ ಕೆಲಸ ಮಾಡುವಾಗ ಪರೀಕ್ಷಾ ಕಾರ್ಯನಿರ್ವಾಹಕರು ಸ್ವಲ್ಪ ಸಮಯದವರೆಗೆ ಸೆಕ್ಸ್ ಮಾಡುವುದು ಅಗತ್ಯವಾಗಿರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.