
ಕಳೆದ 10 ದಿನಗಳು ತಮ್ಮ ಕುಟುಂಬ ಸದಸ್ಯರಿಗೆ ಕಷ್ಟಕರವಾಗಿತ್ತು ಎಂದು ನಟಿ ಶಿಲ್ಪಾ ಶೆಟ್ಟಿ ಪೋಸ್ಟ್ ಶೇರ್ ಮಾಡಿದ್ದಾರೆ. ಆಕೆಯ ಅತ್ತೆ, ತಾಯಿ, ಪತಿ ರಾಜ್ ಕುಂದ್ರಾ ಮತ್ತು ಮಕ್ಕಳಾದ ಸಮಿಶಾ ಮತ್ತು ವಯಾನ್ ಕೊರೋನಾವೈರಸ್ ಪಾಸಿಟಿವ್ ದೃಢಪಟ್ಟಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಆದರೂ ನಟಿಗೆ ನೆಗೆಟಿವ್ ಬಂದಿತ್ತು.
ಶಿಲ್ಪಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿಪೋಸ್ಟ್ ಶೇರ್ ಮಾಡಿ ಫ್ಯಾನ್ಸ್ ಜೊತೆ ಈ ಬಗ್ಗೆ ಹೇಳಿದ್ದಾರೆ. "ಕಳೆದ 10 ದಿನಗಳು ಕುಟುಂಬವಾಗಿ ನಮಗೆ ಕಷ್ಟದ ದಿನಗಳಾಗಿತ್ತು. ನನ್ನ ಅತ್ತೆಗೆ COVID-19 ಗಾಗಿ ಪಾಸಿಟವ್ ಬಂತು. ನಂತರ ಸಮಿಶಾ, ವಯಾನ್-ರಾಜ್, ನನ್ನ ತಾಯಿಗೂ ಪಾಸಿಟಿವ್ ಆಯ್ತು ಎಂದಿದ್ದಾರೆ.
ಖ್ಯಾತ ಗಾಯಕಿ ಆ್ಯಂಡ್ರಿಯಾ ಜೆರಮಿಯಾಗೆ ಕೊರೋನಾ ಪಾಸಿಟಿವ್!
ಮಾರ್ಗಸೂಚಿಗಳ ಪ್ರಕಾರ ಅವರೆಲ್ಲರೂ ಮನೆಯಲ್ಲಿ ತಮ್ಮ ಕೋಣೆಗಳಲ್ಲಿ ಪ್ರತ್ಯೇಕವಾಗಿದ್ದಾರೆ. ವೈದ್ಯರ ಸಲಹೆಯನ್ನು ಅನುಸರಿಸುತ್ತಿದ್ದಾರೆ. ನಮ್ಮ ಮನೆಯ ಇಬ್ಬರು ಸಿಬ್ಬಂದಿಗೂ ಪಾಸಿಟಿವ್ ಬಂದಿದೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ದೇವರ ಅನುಗ್ರಹದಿಂದ, ಪ್ರತಿಯೊಬ್ಬರೂ ಚೇತರಿಕೆಯ ಹಾದಿಯಲ್ಲಿದ್ದಾರೆ. ನನಗೆ ನೆಗೆಟಿವ್ ಬಂದಿದೆ ಎಂದಿದ್ದಾರೆ.
ಪ್ರೋಟೋಕಾಲ್ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ. ತ್ವರಿತ ಸಹಾಯ ಮತ್ತು ಪ್ರತಿಕ್ರಿಯೆಗಾಗಿ ನಾವು ಬಿಎಂಸಿ ಮತ್ತು ಅಧಿಕಾರಿಗಳಿಗೆ ಕೃತಜ್ಞರಾಗಿರುತ್ತೇವೆ. ನಿಮ್ಮ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ದಯವಿಟ್ಟು ಮಾಸ್ಕ್ ಹಾಕಿ, ಕೈಗಳನ್ನು ಸ್ವಚ್ಛಗೊಳಿಸಿ, ಸುರಕ್ಷಿತವಾಗಿರಿ, ಮಾನಸಿಕವಾಗಿ ಪಾಸಿಟಿವ್ ಆಗಿಯೇ ಇರಿ ಎಂದು ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.