
ಬಹುಭಾಷಾ ಗಾಯಕಿ ಹಾಗೂ ನಟಿ ಆ್ಯಂಡ್ರಿಯಾ ಜೆರೆಮಿಯಾಗೆ ಕೊರೋನಾ ಸೋಂಕು ತಗುಲಿದ್ದು ಕಳೆದ ಒಂದು ವಾರದಿಂದ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ವೈದ್ಯರು ಸೂಚಿಸಿದ ಸಲಹೆಯಿಂದ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ವಿವಾಹಿತನನ್ನು ಪ್ರೀತಿಸಿ ಡಿಪ್ರೇಶನ್‌ಗೆ ಹೋದೆ; ನೋವು ತೋಡಿಕೊಂಡ ನಟಿ!
ಆ್ಯಂಡ್ರಿಯಾ ಪೋಸ್ಟ್:
'ಈ ಪ್ರಪಂಚವೇ ನನ್ನದಾಗಿದ್ದರೆ? ಪ್ರೀತಿಯ ಆತ್ಮೀಯರೆ, ಕಳೆದ ವಾರ ನನಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ನನ್ನ ಕುಟುಂಬಸ್ಥರು ಹಾಗೂ ಸ್ನೇಹಿತರು ನನ್ನ ನೆರವಿಗೆ ನಿಂತು ಕೊಂಡರು. ನಾನು ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವೆ. ಚೇತರಿಸಿಕೊಳ್ಳುತ್ತಿರುವೆ. ಸೋಷಿಯಲ್ ಮೀಡಿಯಾದಿಂದ ನಾನು ಬ್ರೇಕ್ ತೆಗೆದುಕೊಳ್ಳಲು ಎರಡು ಕಾರಣಗಳಿವೆ. ಒಂದು ನನಗೆ ನಿಜಕ್ಕೂ ರೆಸ್ಟ್ ಬೇಕಿತ್ತು, ಮತ್ತೊಂದು ಈ ಇಡೀ ದೇಶವೇ ದುಃಖದಲ್ಲಿರುವಾಗ ನಾನು ಆ ಸಮಯದಲ್ಲಿ ಏನು ಪೋಸ್ಟ್ ಮಾಡಬೇಕೆಂದು ಗೊತ್ತಾಗಲಿಲ್ಲ. ದಯವಿಟ್ಟು ಎಲ್ಲರೂ ಮನೆಯಲ್ಲಿಯೇ ಇರಿ, ಈ ಸಮಯ ಕಳೆಯುತ್ತದೆ, ಸುಖದ ದಿನಗಳು ಮರುಳಿ ಬರುತ್ತವೆ,' ಎಂದು ಆ್ಯಂಡ್ರಿಯಾ ಬರೆದುಕೊಂಡಿದ್ದಾರೆ.
'If the word were mine' ಎಂಬ ಹಾಡನ್ನು ಹಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ನೋ ಎಂಟ್ರಿ, ವಟ್ಟಾಂ, ಮಾಲಿಗೈ, ಕಾ, ಪಿಸಾಸು 2 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಆ್ಯಂಡ್ರಿಯಾ ಅಭಿನಯಿಸಿದ್ದಾರೆ. ವಿಜಯ್ ನಟನೆ ಮಾಸ್ಟರ್‌ನಲ್ಲಿಯೂ ಆ್ಯಂಡ್ರಿಯಾ ಕಾಣಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.