ರಕ್ಷಿತ್ ರಶ್ಮಿಕಾ ಫೋಟೋ ಶೇರ್ ಮಾಡೋದನ್ನ ಇನ್ನೂ ಬಿಟ್ಟಿಲ್ಲ ಫ್ಯಾನ್ಸ್! ಇದು ರಕ್ಷಿತ್‌ಗೆ ಡಿಸ್ಟರ್ಬ್ ಆಗಲ್ವಾ?

By Suvarna News  |  First Published Oct 25, 2023, 1:33 PM IST

ಕೆಲ ವರ್ಷ ಹಿಂದಿನ ಕ್ಯೂಟ್ ಕಪಲ್ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ. ಇವರ ನಡುವೆ ಬ್ರೇಕಪ್ ಆಗಿ ವರ್ಷ ಕಳೆದರೂ ಫ್ಯಾನ್ಸ್ ಫೋಟೋ ಶೇರ್ ಮಾಡೋದು ಬಿಟ್ಟಿಲ್ಲ. ಇದು ರಕ್ಷಿತ್‌ ಶೆಟ್ಟಿಗೆ ಡಿಸ್ಟರ್ಬ್ ಆಗಲ್ವಾ?


ಕಿರಿಕ್ ಪಾರ್ಟಿ ಅನ್ನೋ ಸಿನಿಮಾ ಮೂಲಕ ಪರಿಚಿತರಾಗಿ, ಸ್ನೇಹಿತರಾಗಿ, ಪ್ರೇಮಿಗಳೂ ಆಗಿ ಕೊನೆಗೆ ಮದುವೆ ಆಗ್ತೀವಿ ಅಂತ ಎಂಗೇಜ್‌ಮೆಂಟ್ ಮಾಡ್ಕೊಂಡು ಆಮೇಲೆ ಬ್ರೇಕ್‌ಅಪ್ ಮಾಡಿಕೊಂಡ ಫೇಮಸ್ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ. ಕೆಲವು ವರ್ಷಗಳ ಹಿಂದೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಈ ಕ್ಯೂಟ್ ಕಪಲ್ ಬಗ್ಗೆಯೇ ಮಾತು. ಯಾವಾಗ ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆಯ್ತೋ ಸಿನಿಮಾ ನೋಡಿದವರೆಲ್ಲ ಇದರಲ್ಲಿ ಬರೋ ಕರ್ಣ ಮತ್ತು ಸಾನ್ವಿಯನ್ನು ಮತ್ತೆ ಮತ್ತೆ ಮಿಸ್ ಮಾಡ್ಕೊಂಡ್ರು. ನಿಜ ಜೀವನದಲ್ಲೂ ಈ ಜೋಡಿ ಒಂದಾಗಿದ್ರೆ ಎಷ್ಟು ಚಂದ ಅಂತ ಮಾತಾಡ್ಕೊಂಡ್ರು. ಅದಕ್ಕೆ ಸರಿಯಾಗಿ ಈ ಜೋಡಿಯೂ ಲವ್ವಲ್ಲಿ ಬಿತ್ತು. ರಿಲೇಶನ್‌ಶಿಪ್ ಬೆಳೆಯಿತು. ಎಂಗೇಜ್‌ಮೆಂಟೂ ಆಯ್ತು. ಇನ್ನೇನು ಮದುವೆ ಆಗಿ ಸೆಟಲ್ ಆಗ್ತಾರೆ ಅನ್ನೋಷ್ಟರಲ್ಲಿ ಸೀನ್ ಕಟ್‌. ಮುಂದಿನ ಸೀನ್‌ನಲ್ಲಿ ಎಲ್ಲವೂ ಚೇಂಚ್. ರಶ್ಮಿಕಾ ಮಂದಣ್ಣ ಅಂತ ಗೂಗಲಲ್ಲಿ ಸರ್ಚ್ ಕೊಟ್ಟರೆ ಅಂಬಾನಿ ಮನೆ ಫಂಕ್ಷನ್‌ನಲ್ಲಿ ಕ್ಯಾಮರಗೆ ಫೋಸ್ ನೀಡೋದೋ ಇಲ್ಲಾ ಏರ್‌ಪೋರ್ಟಲ್ಲಿ ಪಾಪರಾಜಿಗಳಿಂದ ತಪ್ಪಿಸಿಕೊಂಡು ಹೋಗ್ತಿರೋದೋ ಫೋಟೋಗಳು ಕಾಣಸಿಗುತ್ತೆ.

ಈ ಕ್ಯೂಟ್ ಕಪಲ್ ಬ್ರೇಕಪ್‌ ಮಾಡ್ಕೊಂಡ್ರೂ ಈ ಇಬ್ಬರನ್ನು ಇನ್ನೂ ಸ್ಕ್ರೀನ್ ಮೇಲೆ ನೋಡ್ಬೇಕು ಅಂತ ಕಾತರಿಸೋ ಅಭಿಮಾನಿಗಳಿದ್ದಾರೆ. ಇವರಿಬ್ಬರೂ ಈ ಮೆಮೊರಿಯಿಂದ ಹೊರಬಂದರೂ ಅಭಿಮಾನಿಗಳು ಮಾತ್ರ ಮತ್ತೆ ಮತ್ತೆ ಈ ಕಪಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತನೇ ಇದ್ದಾರೆ. ಹೀಗೆ ಪೋಸ್ಟ್ ಆದ ಫೋಟೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಪರ, ವಿರೋಧದ ಚರ್ಚೆ ನಡೆದು ಮತ್ತೆ ಈ ಜೋಡಿಯ ಲವ್ ಅಫೇರ್‌ಗೆ ಜೀವ ಬರಿಸುತ್ತೆ. ಇದೀಗ ಅಂಥಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿದೆ. ಅದನ್ನು ನೋಡಿದ್ರೆ ಛೇ ಎಂಥಾ ಚೆಂದದ ಜೋಡಿ, ಜೊತೆಗಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಅನಿಸುತ್ತೆ.

Tap to resize

Latest Videos

undefined

ಜಾಕಿ ಚಾನ್, ಶಾರುಖ್ ಖಾನ್ ಜೊತೆ ಹಾಂಗ್ ಕಾಂಗ್ ನಲ್ಲಿ ದೀಪಿಕಾ ದಾಸ್!

ಆದರೆ ಕೆಲವೊಬ್ಬರ ಪ್ರಕಾರ ರಶ್ಮಿಕಾ ಏನಾದರೂ ಎಂಗೇಜ್‌ಮೆಂಟ್ ಆದಮೇಲೆ ಮದುವೆ ಆಗಲು ಹೊರಟಿದ್ದರೆ ಈ ಮಟ್ಟಿಗೆ ಬೆಳೆಯಲು ಸಾಧ್ಯ ಆಗುತ್ತಿರಲಿಲ್ಲ. ತೀರಾ ಚಿಕ್ಕ ವಯಸ್ಸಿಗೇ ಸಂಸಾರದ ಜವಾಬ್ದಾರಿ ಮೈಮೇಲೆ ಎಳೆದುಕೊಂಡು ಹೈರಾಣಾಗಬೇಕಿತ್ತು. ಸಿನಿಮಾ ರಂಗದಲ್ಲಿ ಬೆಳೆಯುವ ಆಕೆಯ ಕನಸು ನನಸಾಗುತ್ತಿರಲಿಲ್ಲ. ಅದಕ್ಕೂ ಹೆಚ್ಚಾಗಿ ದಕ್ಷಿಣ ಭಾರತೀಯ ಭಾಷೆಗೆ ಮಾತ್ರವಲ್ಲದೇ ಬಾಲಿವುಡ್‌ಗೂ (Bollywood) ಒಬ್ಬ ಕ್ಯೂಟ್ ಹೀರೋಯಿನ್‌ ಮಿಸ್ ಆಗ್ತಿದ್ದಳು.

ಈ ಕಡೆ ಈ ಜೋಡಿ ಬ್ರೇಕ್ ಅಪ್ ಆಗಿ ಲವ್‌ ಸ್ಟೋರಿ ಎಲ್ಲ ಹಳೆಯದಾಗಿದ್ದರೂ ಒಬ್ಬರನ್ನೊಬ್ಬರು ಮರೆತ ಹಾಗಿಲ್ಲ. ಇತ್ತೀಚೆಗೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಪ್ರಮೋಶನ್‌ಗೆ ರಕ್ಷಿತ್ ಬೇರೆ ಭಾಷೆಗಳ ಚಾನೆಲ್‌ಗೆ ಇಂಟರ್‌ವ್ಯೂ ಕೊಟ್ಟರು. ಅಲ್ಲೂ ಸಂದರ್ಶಕರು ರಶ್ಮಿಕಾ ಅವರ ಹೆಸರನ್ನು ಎಳೆದು ತಂದರು. ರಕ್ಷಿತ್ ಈ ಬಗ್ಗೆ ಮಾತಾಡುತ್ತಾ, ನಾವಿನ್ನೂ ಸಂಪರ್ಕದಲ್ಲಿ ಇದ್ದೇವೆ ಅಂದುಬಿಟ್ಟರು. ಹಾಗಿದ್ದರೆ ಇವರ ರಿಲೇಶನ್‌ಶಿಪ್ ಮತ್ತೆ ಬೆಳೆಯುತ್ತಾ ಅನ್ನೋ ಆಸೆ ಫ್ಯಾನ್ಸ್ ಮನಸ್ಸಲ್ಲಿ ಬೆಳೆಯಿತು. ಆದರೆ ಅದು ಅಸಾಧ್ಯ ಅನ್ನೋದು ಅವರಿಗೂ ಗೊತ್ತು. ರಶ್ಮಿಕಾ ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಇದಕ್ಕೂ ಮೊದಲು ರಕ್ಷಿತ್ ಬಗ್ಗೆ, ಕನ್ನಡ ಸಿನಿಮಾ ಬಗ್ಗೆ ಹಗುರವಾಗಿ ಮಾತಾಡಿ ಸಿಕ್ಕಾಪಟ್ಟೆ ಟ್ರೋಲ್ ಗೂ ಬಲಿಯಾಗಿದ್ದಾರೆ. ಹೀಗಿರುವಾಗ ಅವರು ಮರಳಿ ಬರೋದು ಕನಸೇ. ವಾಸ್ತವದಲ್ಲಿ ಇದೆಲ್ಲ ಸಾಧ್ಯ ಆಗದಿದ್ದರೂ ಕನಸಲ್ಲಾದರೂ ಈ ಪೇರ್ ಒಂದಾಗಿರೋ ಥರ ಊಹಿಸಿಕೊಳ್ಳೋಣ ಅಂತಿದ್ದಾರೆ ಫ್ಯಾನ್ಸ್. ಇದಕ್ಕೇನು ಹೇಳೋಣ!

ನಂಗೆ ಆ ಸಮಸ್ಯೆ ಇತ್ತು, ಅದಿದ್ರೆ ಮಕ್ಕಳಾಗಲ್ಲ ಅಂತಾನೂ ಗೊತ್ತಿತ್ತು: ಸಂಗೀತ ಶೃಂಗೇರಿ ಹೇಳಿದ ಆ ಸಮಸ್ಯೆ ಯಾವುದು?

click me!