ಹತ್ತು ತಲೆ ಧರಿಸಿ ರಾವಣನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ರಾಖಿ ಸಾವಂತ್. ಮತಾಂತರಗೊಂಡ ಮೇಲೆ ನಟಿ ಹೀಗೇಕೆ ಆದರು ಎಂದು ಹಲವರು ಕಾಲೆಳೆಯುತ್ತಿದ್ದಾರೆ.
ವಿವಾದಗಳ ರಾಣಿ ರಾಖಿ ಸಾವಂತ್ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್ ಖಾನ್ ಅವರನ್ನು ಮದುವೆಯಾಗಿ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಇಷ್ಟಾದರೂ ಗಂಡನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಜೈಲಿಗೆ ಕಳುಹಿಸಿದ್ದ ರಾಖಿ ಸಾವಂತ್, ಮೆಕ್ಕಾಕ್ಕೆ ಹೋಗಿ ಉಮ್ರಾ ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಈ ಡ್ರಾಮಾ ಕ್ವೀನ್ ಬಂದೂಕು ಹಿಡಿದು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ದಿಲ್ ದಿಯಾ ಹೈ ಜಾನ್ ಭೀ ದೇಂಗೆ ಹಾಡನ್ನು ಗುನುಗಿದ್ದರು. ಭಾರತೀಯ ಸೈನಿಕರ ಸಮವಸ್ತ್ರ ತೊಟ್ಟ ನಟಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಬಂದೂಕು ಹಿಡಿದು ಪ್ಯಾಲೆಸ್ತೀನ್ಗೆ ಹೋಗು. ಅಲ್ಲಿ ನಿನ್ನ ಜೀವ ಕೊಡು, ಹೇಗಿದ್ದರೂ ಮತಾಂತರಗೊಂಡಿರುವೆಯಲ್ಲ, ನಿನ್ನವರು ಅಲ್ಲಿ ಕಾಯುತ್ತಿದ್ದಾರೆ ಹೋಗು ಎಂದು ಹೇಳುತ್ತಿದ್ದಾರೆ. ಸೈನಿಕರ ಸಮವಸ್ತ್ರ ತೊಟ್ಟು ಅವರನ್ನು ಅವಮಾನ ಮಾಡಬೇಡ ಎಂದು ಹಲವರು ನಟಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವೆ ಅಂದಿದ್ರಲ್ಲ, ಅಲ್ಲಿಂದ ನೇರವಾಗಿ ಪ್ಯಾಲಿಸ್ತೀನ್ಗೆ ಹೋಗಿ ನಿನ್ನವರ ಜೊತೆ ಸೇರಿಕೋ. ಅಲ್ಲಿ ಜೀವ ಕೊಡು ಎಂದು ಗಂಭೀರವಾಗಿ ರಾಖಿ ವಿರುದ್ಧ ಟ್ರೋಲ್ ಮಾಡಿದ್ದರು.
ಪಾಕಿಸ್ತಾನ ಆಯ್ತು, ಈಗ ಪ್ಯಾಲೆಸ್ತೀನ್ಗೆ ಹೊರಟ್ರಾ ರಾಖಿ? ಬಂದೂಕು ಹಿಡಿದ ನಟಿ ಸಕತ್ ಟ್ರೋಲ್!
ಇದೀಗ ದಸರಾ ನಿಮಿತ್ತ ಮತ್ತೊಮ್ಮೆ ಎಲ್ಲರ ಗಮನ ಸೆಳೆಯಲು ನಟಿ ರಾಖಿ ಸಾವಂತ್ 10 ತಲೆ ಧರಿಸಿ ರಾವಣನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಬಿಲ್ಲು ಹಿಡಿದು ಬಂದು ಬಾಣ ಬಿಡುವಂತೆ ಪೋಸ್ ಕೊಟ್ಟಿದ್ದಾರೆ. ತಮಗೆ ಎಲ್ಲರೂ ದಾರಿ ಬಿಡಿ ಎಂದು ಹೇಳಿದ್ದಾರೆ. ಇದನ್ನು ನೋಡಿ ಥಹರೇವಾರಿ ಕಮೆಂಟ್‌ಗಳು ಬಂದಿವೆ. ಒಟ್ಟಿನಲ್ಲಿ ನಿಮ್ಮ ಅಸಲಿ ಮುಖ ಈಗ ತೋರಿಸಿದ್ರಿ ನೋಡಿ ಎಂದು ಕೆಲವರು ಹೇಳುತ್ತಿದ್ದರೆ, ರಾಖಿಗೆ ಮತಾಂತರವಾದ ಮೇಲೆ ಇದೇನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ ಮತ್ತೆ ಕೆಲವರು. ರಾಖಿಯಿಂದ ಫಾತಿಮಾ ಆದ ಬಳಿಕ ರಾವಣನ ವೇಷ ತೊಟ್ಟಿದ್ದು ಸರಿಯಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ. ಈ ಮಾನಸಿಕ ಅಸ್ವಸ್ಥೆಯನ್ನು ಬೇಗನೇ ಆಸ್ಪತ್ರೆಗೆ ಸೇರಿಸಿ ಎಂದು ಇನ್ನೊಂದಿಷ್ಟು ಮಂದಿ ಸಜೆಸ್ಟ್ ಮಾಡಿದ್ದಾರೆ.
ಅಷ್ಟಕ್ಕೂ ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ರಾಖಿ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡದ್ದು ಎಲ್ಲವೂ ಸಿನಿಮೀಯವೇ.
ಕೈಕೊಟ್ಟ ಐಶ್ವರ್ಯ ರೈ, ಮಾಜಿ ಪ್ರೇಮಿ ಸಲ್ಮಾನ್‌ರಿಂದ ಬೆದರಿಕೆ! ನೋವು ತೋಡಿಕೊಂಡ ವಿವೇಕ್ ಓಬಿರಾಯ್