ಬುರ್ಖಾ ಮೊರೆ ಹೋಗಿದ್ದ ರಾಖಿಯಿಂದ ಟವಲ್​ ಡ್ಯಾನ್ಸ್: ಎರಡು ಕಣ್ಣು ಸಾಲ್ತಿಲ್ಲ ಅಂತಿದ್ದಾರೆ ಅಭಿಮಾನಿಗಳು!

By Suchethana D  |  First Published May 14, 2024, 1:22 PM IST

 ಸರೆಂಡರ್​ ಆಗುವಂತೆ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದ  ಬೆನ್ನಲ್ಲೇ ಬುರ್ಖಾದ ಮೊರೆ ಹೋಗಿದ್ದ ರಾಖಿ ಸಾವಂತ್​ ಈಗ ಬೀದಿ ಬದಿಯಲ್ಲಿ ಟವಲ್​ ಡ್ಯಾನ್ಸ್​ ಮಾಡಿದ್ದಾರೆ. 
 


ನಾನೊಬ್ಬಳು ಭಾರತೀಯ ನಾರಿ, ನೀವು ನನ್ನ ಶರೀರದ ಎಲ್ಲೆಲ್ಲೋ ಕ್ಯಾಮೆರಾ ಪೋಕಸ್​ ಮಾಡ್ಬೇಡಿ ಎನ್ನುತ್ತಲೇ ದೇಹ ಪ್ರದರ್ಶನ ಮಾಡುತ್ತಾ, ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದವರು ನಟಿ ರಾಖಿ ಸಾವಂತ್​. ಮಾಜಿ ಪತಿ ಆದಿಲ್​ ಖಾನ್​ರ  ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪದ ಮೇಲೆ ಇವರು ಬಂಧನದ ಭೀತಿ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಬಂಧನದ ಭೀತಿ ಇವರಿಗಿದೆ.  ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದುಕೊಂಡು  ಬುರ್ಖಾದಲ್ಲಿ ಕಾಣಿಸಿಕೊಂಡಿದ್ದ ರಾಖಿ ಈಚೆಗೆ, ಮೊದಲ ಪತಿ ರೀತೇಶ್​ ಬಳಿ ಓಡಿ ಹೋಗಿದ್ದರು.  ತಮ್ಮ ವಿರುದ್ಧ ಆದಿಲ್​ ಖಾನ್​ ದೂರು ದಾಖಲು ಮಾಡುತ್ತಿದ್ದಂತೆಯೇ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡಿದ್ದ ರಾಖಿ, ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಇವರ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸರೆಂಡರ್​ ಆಗುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ನಟಿ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದರು. 

ಆದರೆ ಈ ಘಟನೆಯಾದ ಬಳಿಕ ದಿನವೂ ಹೊಸ ವೇಷದಲ್ಲಿ ನಟಿ ರಸ್ತೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಟೋ ಒಂದರಲ್ಲಿ ಇಳಿದುಬಂದಿರುವ ನಟಿ, ಆಟೋದಲ್ಲಿ ಸಿಲುಕಿ ಹಾಕಿಕೊಂಡವರಂತೆ ಡ್ರಾಮಾ ಮಾಡಿದ್ದಾರೆ. ಅದಾದ ಬಳಿಕ ಕೆಳಕ್ಕೆ ಇಳಿದು, ಟವಲ್​ ಡ್ಯಾನ್ಸ್​ ಮಾಡಿದ್ದಾರೆ. ಲುಂಗಿ ಡ್ಯಾನ್ಸ್​ ಹಾಡಿನ ಬದಲು ಟವಲ್​ ಡ್ಯಾನ್ಸ್​ ಟವಲ್​ ಡ್ಯಾನ್ಸ್​ ಎನ್ನುತ್ತಾ ಕುಣಿದಾಡಿದ್ದಾರೆ. ಇವರಿಗೆ ಮೆಂಟಲ್​ ಆಸ್ಪತ್ರೆಗೆ ಯಾಕೆ ಕಳಿಸ್ತಿಲ್ಲಾ ಎಂದು ಹಲವರು ಕೇಳುತ್ತಿದ್ದರೆ, ಸುಪ್ರೀಂ ಕೋರ್ಟ್​ ಆರ್ಡರ್​ ಆದ್ರೂ ಇನ್ನೂ ಅರೆಸ್ಟ್​ ಮಾಡಿಲ್ವಾ ಎಂದು ಇನ್ನುಹಲವರು ಪ್ರಶ್ನಿಸುತ್ತಿದ್ದಾರೆ. ಬುರ್ಖಾದ ಮೊರೆ ಹೋಗಿದ್ದ ಈಕೆ ಮತ್ತೆ ಇಂಥ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದು ನೋಡಲು ಎರಡು ಕಣ್ಣು ಸಾಲುತ್ತಿಲ್ಲ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. 

Tap to resize

Latest Videos

ಆದಿಲ್​ ಖಾನ್​ನಿಂದ ರಾಖಿಗೆ ಬಂಧನದ ಭೀತಿ: ಬುರ್ಖಾದಲ್ಲಿ ಮೊದಲ ಗಂಡ ರಿತೇಶ್​ನ ಆಶ್ರಯ ಪಡೆದ ನಟಿ ಹೇಳಿದ್ದೇನು?

ಅಷ್ಟಕ್ಕೂ ವಿವಾದಗಳ ರಾಣಿ ರಾಖಿ ಸಾವಂತ್ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್​ ಖಾನ್​ ಅವರನ್ನು ಮದುವೆಯಾಗಿ  ಧರ್ಮ ಬದಲಿಸಿ ಫಾತಿಮಾ ಆಗಿದ್ದರು. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದರು. ಇಷ್ಟಾದರೂ ಗಂಡನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಜೈಲಿಗೆ ಕಳುಹಿಸಿದ್ದ ರಾಖಿ ಸಾವಂತ್​,   ಮೆಕ್ಕಾಕ್ಕೆ ಹೋಗಿ ಉಮ್ರಾ  ನೆರವೇರಿಸಿದ್ದರು. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ತಮ್ಮ ಹೆಸರನ್ನು ಫಾತೀಮಾ ಎಂದು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದರು. ಕೆಲ ದಿನಗಳ ಹಿಂದೆ ಈ ಡ್ರಾಮಾ ಕ್ವೀನ್​ ಬಂದೂಕು ಹಿಡಿದು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ದಿಲ್​ ದಿಯಾ ಹೈ ಜಾನ್​ ಭೀ ದೇಂಗೆ ಹಾಡನ್ನು ಗುನುಗಿದ್ದರು. ಭಾರತೀಯ ಸೈನಿಕರ ಸಮವಸ್ತ್ರ ತೊಟ್ಟ ನಟಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಬಂದೂಕು ಹಿಡಿದು ಪ್ಯಾಲೆಸ್ತೀನ್​ಗೆ ಹೋಗು. ಅಲ್ಲಿ ನಿನ್ನ ಜೀವ ಕೊಡು, ಹೇಗಿದ್ದರೂ ಮತಾಂತರಗೊಂಡಿರುವೆಯಲ್ಲ, ನಿನ್ನವರು ಅಲ್ಲಿ ಕಾಯುತ್ತಿದ್ದಾರೆ ಹೋಗು ಎಂದು ಹೇಳಿದ್ದರು. ಸೈನಿಕರ ಸಮವಸ್ತ್ರ ತೊಟ್ಟು ಅವರನ್ನು ಅವಮಾನ ಮಾಡಬೇಡ ಎಂದು ಹಲವರು ನಟಿಯ ವಿರುದ್ಧ ಕಿಡಿ ಕಾರಿದ್ದರು. 

ಅದೇ ಇನ್ನೊಂದೆಡೆ ಆದಿಲ್​ ಖಾನ್​,  ಮತ್ತೊಂದು ಮದುವೆ ಆಗಿದ್ದಾರೆ.  ರಾಖಿ ಜೊತೆ ನನ್ನ ಮದುವೆ ಆಗಿರಲಿಲ್ಲ. ಈಗ ಆಗ್ತಿರೋದು ನನ್ನ  ಮೊದಲ ಮದುವೆ ಎಂದು ಹೇಳಿಕೆ ನೀಡಿದ್ದರು.  ರಾಜಸ್ಥಾನದ ಜೈಪುರದಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ಸೋಮಿ ಖಾನ್ ಜೊತೆ ಹಸೆಮಣೆ ತುಳಿದಿದ್ದಾರೆ.  ಆದರೆ ಈ ಮದ್ವೆಯ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ ಆದಿಲ್​.  ಸೋಮಿ ಖಾನ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ 2018ರಲ್ಲಿ ಕಾಣಿಸಿಕೊಂಡಿದ್ದರು.  ನಂತರ ಸುಪ್ರೀಂ ಕೋರ್ಟ್​ನಿಂದ ತೀರ್ಪು ಹೊರಬೀಳುತ್ತಲೇ ಲೈವ್​ಗೆ ಬಂದು  ನಾನೀಗ ನನ್ನ ಪತ್ನಿ ಜೊತೆ ಖುಷಿಯಾಗಿದ್ದೇನೆ. ಸುಮ್ಮನೇ ಈ ಕಾನೂನು ಸಮರವೆಲ್ಲಾ ಮುಗಿಸೋಣ. ಈ ಗಲಾಟೆಯೆಲ್ಲಾ ಸಾಕು ಎಂದಿದ್ದರು. ಇದರ ಹೊರತಾಗಿಯೂ ರಾಖಿ ಸಾವಂತ್​ ಬೀದಿ ಬದಿಯಲ್ಲಿ ಹೊಸ ಹೊಸ ವೇಷ ತೊಟ್ಟು ಬರುತ್ತಿದ್ದಾರೆ. ಪಾಪರಾಜಿಗಳು ಅವರ ಹಿಂದೆ ಬಿದ್ದಿದ್ದಾರೆ. 

ನಾನೊಬ್ಳು ಭಾರತೀಯ ನಾರಿ... ಕ್ಯಾಮೆರಾ ಎಲ್ಲೆಲ್ಲೋ ಝೂಮ್​ ಮಾಡ್ಬೇಡಿ... ರಾಖಿ ಗರಂ
 

click me!