ಶೈಕ್ಷಣಿಕ ಪದವಿಯೇ ಎಲ್ಲವೂ ಅಲ್ಲ. ನೀನು ಮುಂದೊಂದು ದಿನ ನಿನ್ನ ಪ್ರತಿಭೆ ಮೂಲಕ ಜಗತ್ತಿಗೇ ಪರಿಚಯವಾಗಬಹುದು. ನಿನ್ನ ಪ್ರತಿಭೆ ನಿನ್ನ ಜೀವನೋಪಾಯಕ್ಕೆ ಹಾಗೂ ಅದಕ್ಕಿಂತ ಹೆಚ್ಚಿನದನ್ನು ನಿನಗೆ ನೀಡಬಹುದು.
ನಟ ಅಲ್ಲು ಅರ್ಜುನ್ (Allu Arjun) ಮಾತನಾಡುತ್ತ ಒಂದು ತುಂಬಾ ಮುಖ್ಯವಾದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಜೀವನದಲ್ಲಿ ತುಂಬಾ ಮುಖ್ಯವಾದ ಸಂಗತಿ ಯಾವುದು ಎಂಬ ಬಗ್ಗೆ ಹೇಳಿದ್ದಾರೆ. ಅಲ್ಲು ಅರ್ಜುನ್ ತಮ್ಮ ಪ್ರಾಥಮಿಕ ಶಾಲೆಯ ಟೀಚರ್ ಒಬ್ಬರ ಉದಾಹರಣೆ ಮೂಲಕ ಈ ಬಗ್ಗೆ ಹೇಳಿ, ದಯೆ ಅಥವಾ ಕರುಣೆ ಎಂಬುದು ತುಂಬಾ ಮುಖ್ಯ ಎಂದಿದ್ದಾರೆ. ನಟ ಅಲ್ಲು ಅರ್ಜುನ್ ಮಾತಿಗೆ ಯಾರಾದರೂ ಫಿದಾ ಆಗಲೇಬೇಕು ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ.
ನಟ ಅಲ್ಲು ಅರ್ಜುನ್ ಈ ಬಗ್ಗೆ 'ನಾನು ಆಗ 3ನೇ ಕ್ಲಾಸಿನಲ್ಲಿ ಓದುತ್ತಿದ್ದೆ. ನನಗೆ ಜಿಯಾಗ್ರಫಿಯನ್ನು ಅಂಬಿಕಾ ಮೇಡಂ ಇದ್ದರು. ನಾನು ಓದಿನಲ್ಲಿ ತುಂಬಾ ವೀಕ್, ಕ್ಲಾಸಿನಲ್ಲಿ ಲಾಸ್ಟ್ ನಂಬರ್ ಸ್ಟೂಡೆಂಟ್ ಎನ್ನಬಹುದು. ಆದರೆ ಅಂಬಿಕಾ ಮೇಡಂಗೆ ನನ್ನ ಮೇಲೆ ಸ್ವಲ್ಪವೂ ಬೇಸರವಿರಲಿಲ್ಲ. ಅವರು ನನ್ನನ್ನು ಕರೆದು 'ನೀನು ಸ್ವಲ್ಪವೂ ಚಿಂತಿಸಬೇಡ. ಈ ಅಕಾಡೆಮಿಕ್ ಶಿಕ್ಷಣವೇ ಎಲ್ಲವೂ ಅಲ್ಲ. ದೇವರು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸ್ಕಿಲ್ಸ್ ಕೊಟ್ಟಿರುತ್ತಾನೆ.
ನಿಮ್ಮ ಆರೋಗ್ಯ ಕೆಟ್ಟಿದ್ದರೆ, ಜೀವನದಲ್ಲಿ ಕತ್ತಲೆ ಆವರಿಸಿದ್ದರೆ ಚಿಂತಿಸಬೇಡಿ; ನಟಿ ಸಮಂತಾ!
ಶೈಕ್ಷಣಿಕ ಪದವಿಯೇ ಎಲ್ಲವೂ ಅಲ್ಲ. ನೀನು ಮುಂದೊಂದು ದಿನ ನಿನ್ನ ಪ್ರತಿಭೆ ಮೂಲಕ ಜಗತ್ತಿಗೇ ಪರಿಚಯವಾಗಬಹುದು. ನಿನ್ನ ಪ್ರತಿಭೆ ನಿನ್ನ ಜೀವನೋಪಾಯಕ್ಕೆ ಹಾಗೂ ಅದಕ್ಕಿಂತ ಹೆಚ್ಚಿನದನ್ನು ನಿನಗೆ ನೀಡಬಹುದು. ನೀನು ಸ್ಟಡೀಸ್‌ನಲ್ಲಿ ತುಂಬಾ ಹಿಂದಿದ್ದೀಯಾ ಎಂಬ ಚಿಂತೆ ಬಿಡು. ಆದರೆ, ನಿನ್ನಲ್ಲಿ ಯಾವ ಟ್ಯಾಲೆಂಟ್ ಇದೆಯೋ ಅದನ್ನು ಬಳಸಿಕೊಂಡು, ಬೆಳೆಸಿಕೊಂಡು ಹೋಗು' ಎಂದಿದ್ದರು ಅಂಬಿಕಾ ಮೇಡಂ.
ಡಾ ರಾಜ್ ಮೇಲೆ ನಡೆದಿತ್ತು ಆ್ಯಸಿಡ್ ದಾಳಿಗೆ ಯತ್ನ; ಕೇಸ್ ಹಾಕಿದ್ರು ವಿಲನ್ ರೋಲ್ ನಟ!
ಅವರಲ್ಲಿ ನಾನು ನನ್ನ ಬಗ್ಗೆ ಕರುಣೆ, ದಯೆ, ಅನುಕಂಪ ಎಲ್ಲವನ್ನೂ ನೋಡಿದ್ದೇನೆ. ಜೀವನದ ಬಗ್ಗೆ ವಿಶಾಲ ದೃಷ್ಟಿಕೋನ ನೋಡಿದ್ದೇನೆ. ನಮ್ಮಲ್ಲಿ ಇಲ್ಲದಿರುವುದರ ಬಗ್ಗೆ ಕೊರಗಬೇಕಾಗಿಲ್ಲ, ಇರುವುದನ್ನು ಅರಿತು ಅದನ್ನು ಬಳಸಲು ಕಲಿತರೆ ಸಾಕು ಎಂಬುದನ್ನು ನನ್ನ ಅಂಬಿಕಾ ಟೀಚರ್ ಚೆನ್ನಾಗಿ ನನಗೆ ಮನದಟ್ಟು ಮಾಡಿಸಿದ್ದರು. ಇಂದು ನಾನೇನಾಗಿರುವೆನೋ ಅದಕ್ಕೆ ಈ ನನ್ನ ಅಂಬಿಕಾ ಟೀಚರ್ ಕಾರಣ ಎಂದಿದ್ದಾರೆ ನಟ ಅಲ್ಲು ಅರ್ಜುನ್. ಅಂದಹಾಗೆ, ನಟ ಅಲ್ಲು ಅರ್ಜುನ್ ಸದ್ಯ 'ಪುಷ್ಪಾ 2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಸಾನ್ಯಾ ಅಯ್ಯರ್ ಜೊತೆ ಬಿಎಂಎಸ್ ಕಾಲೇಜಿನಲ್ಲಿ ಲುಕ್ ಕೊಟ್ಟಿದ್ದೇಕೆ ಸಮರ್ಜಿತ್ ಲಂಕೇಶ್!