ರಿಷಬ್‌ ಶೆಟ್ಟಿ ಮೇಲೆ ಬಿತ್ತು ರಾಖಿ ಸಾವಂತ್‌ ಕಣ್ಣು! ನಟನ ಮುಂದೆ ಇಟ್ರು ಬಹುದೊಡ್ಡ ಬೇಡಿಕೆ

Published : Sep 27, 2023, 01:12 PM ISTUpdated : Sep 29, 2023, 08:52 PM IST
ರಿಷಬ್‌ ಶೆಟ್ಟಿ ಮೇಲೆ ಬಿತ್ತು ರಾಖಿ ಸಾವಂತ್‌ ಕಣ್ಣು! ನಟನ ಮುಂದೆ ಇಟ್ರು ಬಹುದೊಡ್ಡ ಬೇಡಿಕೆ

ಸಾರಾಂಶ

ಡ್ರಾಮಾಕ್ವೀನ್‌ ರಾಖಿ ಸಾವಂತ್‌ ಅವರ ಕಣ್ಣು ಇದೀಗ ಕನ್ನಡದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರ ಮೇಲೆ ಬಿದ್ದಿದ್ದು, ಬಹುದೊಡ್ಡ ಬೇಡಿಕೆಯನ್ನು ಅವರ ಮುಂದಿಟ್ಟಿದ್ದಾರೆ. ಏನದು?  

ಮೈಸೂರಿನ ಯುವಕ ಆದಿಲ್‌ ಖಾನ್‌ ದುರ್‍ರಾನಿಯನ್ನು ಮದ್ವೆಯಾಗಿರೋ ಬಾಲಿವುಡ್‌ ನಟಿ, ಡ್ರಾಮಾ ಕ್ವೀನ್‌ ರಾಖಿ ಸಾವಂತ್‌ (Rakhi Sawant) ಕೆಲವು ತಿಂಗಳುಗಳಿಂದ ಸಕತ್‌ ಸುದ್ದಿಯಲ್ಲಿರುವ ನಟಿ. ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ.

ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ.

ಮೊನ್ನೆಯಷ್ಟೇ ಜೆಸಿಬಿ ಮೂಲಕ ಮೈಸೂರಿನ ಅತ್ತೆ ಮನೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ ರಾಖಿ. ಅದೂ ಬಾಜಾ ಬಜಂತ್ರಿಯವರ ಜೊತೆ!  ಈ ಧೈರ್ಯ ಮಾಡಲು ರಾಖಿಗೆ ಮಾತ್ರ ಸಾಧ್ಯ ಎನ್ನುವ ಶೀರ್ಷಿಕೆಯಿಂದ ಈ ವಿಡಿಯೋ ವೈರಲ್‌ ಆಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿರುವ ಆದಿಲ್‌ ಅವರ ತಾಯಿ ತನ್ನನ್ನು ಮನೆಯೊಳಕ್ಕೆ ಕರೆದುಕೊಳ್ಳಲಿಲ್ಲ ಎಂದೆಲ್ಲಾ ರಾಖಿ ಆರೋಪ ಮಾಡಿದ್ದರು. ಇಷ್ಟಾದರೂ ಪುನಃ ಅವರು ಅತ್ತೆ ಮನೆಗೆ ಬಂದಿದ್ದಾರೆ.

ಮೈಸೂರಿಗೆ ರಾಖಿ ಸಾವಂತ್​: ಜೆಸಿಬಿ ಮೂಲಕ ಅತ್ತೆ ಮನೆಗೆ ಭರ್ಜರಿ ಎಂಟ್ರಿ! ವಿಡಿಯೋ ವೈರಲ್

ಇದೀಗ ಇನ್ನೊಂದು ಹೊಸ ವಿಷಯ ರಾಖಿ ಸಾವಂತ್‌ ಕುರಿತು ಹೊರಬಿದ್ದಿದೆ. ಅದೇನೆಂದರೆ, ಆರು ಗಂಡಸರನ್ನು ಮದ್ವೆಯಾಗಿರುವುದಾಗಿ ಆರೋಪ ಹೊತ್ತ ರಾಖಿ ಸಾವಂತ್‌ ಕಣ್ಣು ಈಗ ಕನ್ನಡದ ನಟ, ನಿರ್ದೇರ್ಶಕ ರಿಷಬ್‌ ಶೆಟ್ಟಿ ಅವರ ಮೇಲೆ ಬಿದ್ದಿದೆ. ಅಷ್ಟಕ್ಕೂ ರಾಖಿ ಅವರು ರಿಷಬ್‌ ಅವರನ್ನು ಮದ್ವೆಯಾಗುವ ಉದ್ದೇಶ ಹೊಂದಿಲ್ಲ. ಬದಲಿಗೆ ಅವರು ರಿಷಬ್‌ ಶೆಟ್ಟಿ ಅವರಿಂದ ಕುತೂಹಲದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇನೆಂದರೆ, ತಮ್ಮ  ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕಂತೆ. ಅದಕ್ಕೆ ರಿಷಬ್​ ಶೆಟ್ಟಿಯವರು ನಿರ್ದೇಶನ ಮಾಡಬೇಕು ಎಂದು ನಟಿ ಹೇಳಿದ್ದಾರೆ. ಮೈಸೂರಿನಲ್ಲಿ ನಡೆದಿರುವ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ!

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ಜೀವನದ ಕಥೆಯನ್ನು ಇಟ್ಟುಕೊಂಡು ಚಿತ್ರ ಮಾಡಲು  ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ಅದರಲ್ಲಿ ತಮ್ಮ ಪಾತ್ರವನ್ನು ತಾವೇ ಮಾಡುವ ಬಗ್ಗೆ ಯೋಚಿಸಿಲ್ಲ, ಬದಲಿಗೆ ಆ  ಪಾತ್ರವನ್ನು ವಿದ್ಯಾ ಬಾಲನ್​ ಮಾಡಿದರೆ ಉತ್ತಮ ಎಂದಿರುವ ನಟಿ,  ರಿಷಬ್​ ಶೆಟ್ಟಿ ಇದರ ನಿರ್ದೇಶನ ಮಾಡಬೇಕು ಎಂದಿದ್ದಾರೆ.  ಇದಕ್ಕೆ ಕಾರಣವನ್ನೂ ಕೊಟ್ಟಿರುವ ನಟಿ,  ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್​ ಶೆಟ್ಟಿ ಹೆಚ್ಚು ಇಷ್ಟ. ಆದ್ದರಿಂದ ಅವರೇ ನಿರ್ದೇಶನ ಮಾಡಬೇಕು ಎಂದಿದ್ದಾರೆ. ಸದ್ಯ ಈ ಚಿತ್ರದ  ನಿರ್ದೇಶನ ಮಾಡಬೇಕು ಎಂಬುದರ ಚರ್ಚೆ ನಡೆಯುತ್ತಿದೆ. ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.  

ಆರನೇ ಗಂಡಿಗೆ ಬಲೆ ಬೀಸಿದ್ತಾಳೆ ರಾಖಿ, ಹಣ ಪಡೆದು ಕೊಲ್ಲೋದೇ ಪ್ಲ್ಯಾನ್! ಶಾಕಿಂಗ್​ ವಿಷ್ಯ ರಿವೀಲ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?