ಕೇನ್ಸ್ ಉತ್ಸವದ ಸಂದರ್ಭದಲ್ಲಿ ತೆಗೆದ ನಟಿ ಐಶ್ವರ್ಯ ರೈ ಮತ್ತು ಆರಾಧ್ಯ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ತೀವ್ರ ಬೇಸರ ಹೊರಹಾಕುತ್ತಿದ್ದಾರೆ.
ಇದೇ 17ರಿಂದ ಆರಂಭವಾಗಿರುವ ವಿಶ್ವವಿಖ್ಯಾತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಅವರು ತಮ್ಮ ಪುತ್ರಿ ಆರಾಧ್ಯ ಜೊತೆ ಪಾಲ್ಗೊಂಡಿದ್ದಾರೆ. ಮೇ 25ರ ವರೆಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹಲವು ದೇಶಗಳ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಆಗಮಿಸಿದ್ದಾರೆ. ನಟಿ ಐಶ್ವರ್ಯ ಎಂದಿನಂತೆ ಇಲ್ಲಿ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನಟಿ ಕೈ ಮುರಿದುಕೊಂಡಿದ್ದರೂ ರೆಡ್ ಕಾರ್ಪೆಟ್ ಮೇಲೆ ಮಾರ್ಜಾಲ ನಡಿಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಆದರೆ ಇದೇ ವೇಳೆ ಐಶ್ವರ್ಯ ಮತ್ತು ಆರಾಧ್ಯ ಅವರ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದರಲ್ಲಿ ಐಶ್ವರ್ಯ ಅವರ ಲುಕ್ ನೋಡಿದ ನೆಟ್ಟಿಗರು ನೋಡಲು ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇವರು ಐಶ್ವರ್ಯ ರೈನೋ, ರಾಖಿ ಸಾವಂತೋ ಗೊತ್ತಾಗ್ತಿಲ್ಲ ಎನ್ನುತ್ತಿದ್ದಾರೆ. ಇದೇ ವೇಳೆ ಆರಾಧ್ಯಳ ಡ್ರೆಸ್ ಬಗ್ಗೆಯೂ ಸಕತ್ ನೆಗೆಟಿವ್ ಕಮೆಂಟ್ಗಳ ಸುರಿಮಳೆಯಾಗಿದೆ. ಐಶ್ವರ್ಯ ರೈ ಅವರ ಬಗ್ಗೆಯಂತೂ ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ಕೆಟ್ಟದ್ದಾಗಿ ಯಾಕೆ ಕಾಣಿಸುತ್ತಿದ್ದಾರೆ, ಇಂಥ ಫೋಟೋ ಹಾಕುವ ಅಗತ್ಯವೇನಿತ್ತು ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವು ಐಶ್ ಫ್ಯಾನ್ಸ್ ಪ್ಲೀಸ್ ದಯವಿಟ್ಟು ಈ ಫೋಟೋ ಡಿಲೀಟ್ ಮಾಡಿ ನೋಡಲು ಆಗ್ತಿಲ್ಲ ಎಂದಿದ್ದಾರೆ. ಇನ್ನು ಕೆಲವರು ಆರಾಧ್ಯ ಡ್ರೆಸ್ ನೋಡಿ, ವಿದೇಶದಲ್ಲಿ ಈಕೆ ಇಷ್ಟು ಕೆಟ್ಟ ಡ್ರೆಸ್ ಹಾಕಿರೋದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.
ತೋಳ ಬಂತು ತೋಳ ಆಯ್ತಾ ರಾಖಿ ಕಥೆ? ಇಂದು ಆಪರೇಷನ್- ನಟಿ ಕಣ್ಣೀರಿಟ್ರೂ ನೆಟ್ಟಿಗರು ಹೀಗೆಲ್ಲಾ ಹೇಳೋದಾ?
ನಿನ್ನೆಯಷ್ಟೇ ಐಶ್ವರ್ಯ ಐಶ್ವರ್ಯಾ ರೈ ಉದ್ದವಾದ ಸ್ಟೈಲಿಶ್ ಮಾದರಿಯ ಗೌನ್ ಧರಿಸಿ ಗಮನ ಸೆಳೆದಿದ್ದರು. ಬೃಹತ್ ಚಿನ್ನದ ಹೂವುಗಳ ಡಿಸೈನ್ ಹೊಂದಿತ್ತು. ಇದು ಮೆಟ್ ಗಾಲಾ ಥೀಮ್ 'ದಿ ಗಾರ್ಡನ್ ಆಫ್ ಟೈಮ್'ಗೆ ಸೂಕ್ತವಾಗಿ ಒಪ್ಪುವಂತಿತ್ತು. ಫಲ್ಗುಣಿ ಮತ್ತು ಶೇನ್ ವಿನ್ಯಾಸಗೊಳಿಸಿದ ಬೃಹತ್ ಗೌನ್ ರಫಲ್ಡ್ ಸ್ಲೀವ್ಸ್ ಮುಂಭಾಗದಲ್ಲಿ ಗೋಲ್ಡನ್ ಮಾದರಿಯನ್ನು ಹೊಂದಿತ್ತು. ಜೊತೆಗೆ ಐಶ್ವರ್ಯ ದೊಡ್ಡ ಗೋಲ್ಡನ್ ಕಿವಿಯೋಲೆಗಳನ್ನು ಧರಿಸಿ ರೆಟ್ರೋ ಫೀಲ್ ನೀಡಿದ್ದರು. ಈ ಬಾರಿ ಐಶ್ವರ್ಯಾ ರೈ ಜೊತೆ ಮಗಳು ಆರಾಧ್ಯ ಬಚ್ಚನ್ ಸಹ ಕಾಣಿಸಿಕೊಂಡರು. ಐಶ್ವರ್ಯ ಜೊತೆ ಎಲ್ಲರ ಗಮನ ಸೆಳೆದಿದ್ದು ಮಗಳು ಆರಾಧ್ಯಳ ಮೆಚ್ಯೂರ್ಡ್ ವರ್ತನೆ. ಕೈಗೆ ಗಾಯಗೊಂಡಿದ್ದ ಐಶ್ವರ್ಯಾ ನಡೆಯಲು ಮಗಳು ಆರಾಧ್ಯ ಕೈ ಹಿಡಿದುಕೊಂಡು ನೆರವಾದರು.
ಐಶ್ವರ್ಯಾ ರೈ ಬಚ್ಚನ್ ಧರಿಸಿರುವಂತೆ ಆರಾಧ್ಯ ಬಚ್ಚನ್ ಸಹ ಮ್ಯಾಚಿಂಗ್ ಬ್ಲ್ಯಾಕ್ ಡ್ರೆಸ್ ಧರಿಸಿದ್ದರು. ಐಶ್ವರ್ಯಾ ವಾಕ್ ಮಾಡಲು ಸಹಾಯ ಮಾಡಿದರು. ಆರಾಧ್ಯ ತನ್ನ ತಾಯಿ ಐಶ್ವರ್ಯಾ ರೈಗೆ ಕೇನ್ಸ್‌ನಲ್ಲಿ ಸಹಾಯ ಮಾಡುತ್ತಿರುವ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಒಂದು ವೀಡಿಯೊದಲ್ಲಿ, ಅವಳು ತಾಯಿಯ ಕೈಯನ್ನು ಹಿಡಿದು ಎಚ್ಚರಿಕೆಯಿಂದ ಅವಳ ಪಕ್ಕದಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ಮತ್ತೊಂದು ವೀಡಿಯೊದಲ್ಲಿ ಅವಳು ತನ್ನ ತಾಯಿಯನ್ನು ಹೋಟೆಲ್‌ನ ಮೆಟ್ಟಿಲುಗಳ ಕೆಳಗೆ ಇಳಿಯಲು ಸಹಾಯ ಮಾಡಿದ್ದಳು.
ಮನೆ ಎರಡು ಭಾಗವಾಗಿದ್ಯಲ್ಲಾ... ಟಾಯ್ಲೆಟ್ ಹೇಗೆ ಯೂಸ್ ಮಾಡ್ತೀರಾ? ಸೃಜನ್ ಪ್ರಶ್ನೆಗೆ ಭಾಗ್ಯ ಹೇಳಿದ್ದೇನು?