ಡ್ರಾಮಾ ಕ್ವೀನ್​ನನ್ನೇ ಮೀರಿಸಿದ ಪೂನಂ ಪಾಂಡೆ: ನಿನಗಾಗಿ ತ್ಯಾಗ ಮಾಡಿದೆ ಎನ್ನುತ್ತಲೇ ರಾಖಿ ಹೀಗೆ ಆಕ್ರೋಶ!

Published : Feb 03, 2024, 04:09 PM IST
ಡ್ರಾಮಾ ಕ್ವೀನ್​ನನ್ನೇ ಮೀರಿಸಿದ ಪೂನಂ ಪಾಂಡೆ: ನಿನಗಾಗಿ ತ್ಯಾಗ ಮಾಡಿದೆ ಎನ್ನುತ್ತಲೇ ರಾಖಿ ಹೀಗೆ ಆಕ್ರೋಶ!

ಸಾರಾಂಶ

ಪೂನಂ ಪಾಂಡೆ ಸತ್ತಿರುವುದಾಗಿ ತಿಳಿದು ಕಂಬನಿ ಮಿಡಿದಿದ್ದ ರಾಖಿ ಸಾವಂತ್​ ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ನಟಿ ಹೇಳಿದ್ದೇನು?   

ನಿನ್ನೆ ಬಾಲಿವುಡ್​ ಮಾದಕ ನಟಿ ಪೂನಂ ಪಾಂಡೆಗಾಗಿ ಎಲ್ಲರ ಕಣ್ಣೀರು, ಇಂದು ಅವರಿಗೆ ಛೀಮಾರಿ.. ಸತ್ತರೆಂದು ಅತ್ತವರು, ಬದುಕಿದುದಕ್ಕಾಗಿ ಶಾಪ ಹಾಕುವಂಥ ಸ್ಥಿತಿ ತಂದುಕೊಂಡಿದ್ದಾರೆ ಪೂನಂ ಪಾಂಡೆ.  ಸದ್ಯ ಈಗ ಎಲ್ಲೆಲ್ಲೂ ಬಾಲಿವುಡ್​ ನಟಿ ಪೂನಂ ಪಾಂಡೆಯ ವಿಷಯವೇ ಓಡಾಡುತ್ತಿದೆ. ನಿನ್ನೆ ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದ ಸುದ್ದಿ ಬಂತು.  ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ 32 ವರ್ಷದ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತು.  ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು.  ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು.  ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.

ಇವರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಕಂಬನಿ ಹರಿಸಿದ ನಟಿಯರಲ್ಲಿ ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ನಟಿ ರಾಖಿ ಸಾವಂತ್​ ಕೂಡ ಒಬ್ಬರು. ನಿನ್ನೆ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದ ರಾಖಿ. ನೀನು ಯಾವಾಗಲೂ ಹೇಳುತ್ತಿದ್ದಿ, ನೀನು ಲಂಬೋರ್ಘಿನಿ,  ಮರ್ಸಿಡೀಸ್ ಕಾರು ಆದ್ರೆ ನಾನು ನ್ಯಾನೋ ಕಾರ್​ ಎಂದು. ಇವತ್ತು ನಾನು ಹೇಳ್ತಾ ಇದ್ದೇನೆ. ಹೌದು ನಾನು ನ್ಯಾನೋ ಕಾರೆ... ಬಾ ಗೆಳತಿ... ಎಲ್ಲಿಗೆ ಹೋದೆ... ಹೀಗೆ ಯಾರನ್ನಾದರೂ ಬಿಟ್ಟು ಹೋಗ್ತಾರಾ? ಹೇಳದೇ ಕೇಳದೇ ಎಲ್ಲಿಗೆ ಹೋದೆ. ಕ್ಯಾನ್ಸರ್​ ಆಗಿ ಇಷ್ಟು ನೋವು ಇಟ್ಟುಕೊಂಡರೂ ಒಂದು ಮಾತನ್ನೂ ಹೇಳಲಿಲ್ಲ ನೀನು, ಯಾಕೆ ಹೀಗೆ  ಮಾಡಿದೆ, ಎಲ್ಲಿ ಹೋಗಿರುವೆ, ಬೇಗ ಬಾ... ಎಂದು ಕಣ್ಣೀರು ಹಾಕಿದ್ದರು.

ನೀನು ಲಂಬೋರ್ಘಿನಿ, ನಾನು ನ್ಯಾನೋ ಕಾರ್​... ಎಲ್ಲಿ ಹೋದೆ ಗೆಳತಿ... ಪೂನಂ ನೆನೆದು ಭಾವುಕರಾದ ರಾಖಿ

ಇದೀಗ ಸಾವಿನ ಸುದ್ದಿ ಸುಳ್ಳು ಎಂದು ತಿಳಿಯುತ್ತಲೇ ಪೂನಂ ಪಾಂಡೆ ಅವರಿಗೆ ಛೀಮಾರಿ ಹಾಕಿದ್ದಾರೆ. ಹೀಗೆ ಮಾಡಬಹುದಾ ಕೇಳಿದ್ದಾರೆ. ನೀನು ಸತ್ತಿ ಎಂದು ತಿಳಿದು ನಾನು ನಿನ್ನೆ ನನ್ನ ಇನ್​ಸ್ಟಾಗ್ರಾಮ್​ನಲ್ಲಿ ಬೇರೆ ವಿಡಿಯೋ ಹಾಕದೇ ತ್ಯಾಗ ಮಾಡಿದೆ. ಇವತ್ತು ಯಾವುದೇ ಒಳ್ಳೆಯ ಕೆಲಸ ಮಾಡಬಾರದು ಎಂದು ನೋವಿನಲ್ಲಿ ಇದ್ದೆ. ನೀನು ನೋಡಿದ್ರೆ ಹೀಗೆ ಮಾಡ್ದಿ ಎಂದು ರಾಖಿ, ಪೂನಂ ಅವರಿಗೆ ಬೈದಿದ್ದಾರೆ. 

ಇದೇ ವೇಳೆ, ಈಗ ಹೇಳ್ತೇನೆ ಕೇಳು. ನಾನು ಲಂಬೋರ್ಘಿನಿ,  ಮರ್ಸಿಡೀಸ್ ಕಾರು ಆದ್ರೆ ನೀನು ನ್ಯಾನೋ ಕಾರು. ಹೀಗೆಲ್ಲಾ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಹೀಗೆ ಮಾಡಿದ್ದು ಸರಿಯಲ್ಲ, ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿರುವುದು ಸರಿಯಲ್ಲ. ಈ ರೀತಿ ಮಾಡುತ್ತಿ ಎಂದು ಅಂದುಕೊಂಡಿರಲಿಲ್ಲ. ನೀನು ಸತ್ತಿರೋ ಸುದ್ದಿ ಸುಳ್ಳಾಗಲಿ ಎಂದು ಅದೆಷ್ಟು ಫೋನ್​, ವಾಯ್ಸ್​ ಮೆಸೇಜ್​ ಮಾಡಿದೆ. ಒಂದಕ್ಕೂ ರಿಪ್ಲೈ ಮಾಡಲಿಲ್ಲ. ಈಗ ಬಂದು ನೋಡಿದ್ರೆ ನಾನು ಸತ್ತಿಲ್ಲ ಅನ್ನುತ್ತಿಯಾ. ಹೀಗೆ ಹೇಗೆ ಮಾಡುತ್ತಿ ಎಂದಿದ್ದಾರೆ. 

ಪೂನಂ ಪಾಂಡೆ ವಿರುದ್ಧ ದಾಖಲಾಗತ್ತಾ ಕೇಸ್​? ಪ್ರಚಾರಕ್ಕಾಗಿ ಸತ್ತೆನೆಂದ ನಟಿಗೆ ಹೀಗಿದೆ ಶಿಕ್ಷೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?