ಕಂಗನಾ ರಣಾವತ್, ರಾಮಾಯಾಣ ನಟ ಅರುಣ್ ಗೋವಿಲ್‌‌ಗೆ ಟಿಕೆಟ್ ಘೋಷಿಸಿದ ಬಿಜೆಪಿ!

By Suvarna NewsFirst Published Mar 24, 2024, 10:26 PM IST
Highlights

ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಪರ ಒಲವು ಹೊಂದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಟಿಕೆಟ್ ನೀಡಲಾಗಿದೆ. ಶ್ರೀರಾಮಾಯಣ ಸೀರಿಯಲ್ ನಟ ಅರುಣ್ ಗೋವಿಲ್‌ಗೂ ಬಿಜೆಪಿ ಟಿಕೆಟ್ ನೀಡಿದೆ
 

ನವದೆಹಲಿ(ಮಾ.24) ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಇದೀಗ ತನ್ನ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯ ಕೆಲ ಕ್ಷೇತ್ರಗಳು ಬಾರಿ ಕುತೂಹಲ ಕೆರಳಿತ್ತು. ಇಷ್ಟೇ ಅಲ್ಲ ಇದೇ ಪಟ್ಟಿಯಲ್ಲಿ ಕೆಲ ಅಚ್ಚರಿಗಳನ್ನು ಬಿಜೆಪಿ ನೀಡಿದೆ. ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ಈ ಮೂಲಕ  ಬಾಲಿವುಡ್ ಸೆಲೆಬ್ರೆಟಿ ಕಳೆಯನ್ನು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರಕ್ಕೆ ನೀಡಿದೆ. ಇತ್ತ ಉತ್ತರ ಪ್ರದೇಶ ಮೀರತ್ ಕ್ಷೇತ್ರದಿಂದ ಶ್ರೀರಾಮಾಯಣ ಸೀರಿಯಲ್‌ ನಟ ಅರುಣ್ ಗೋವಿಲ್‌ಗೆ ಬಿಜೆಪಿ ಟಿಕೆಟ್ ನೀಡಿದೆ.

ಕಂಗನಾ ರಣವಾತ್ ಬಿಜೆಪಿ ವಿಚಾರಧಾರೆಯತ್ತ ಒಲವು ಹೊಂದಿದ್ದರು. ಇಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿಯ ಅನುಯಾಯಿ ಆಗಿರುವ ಕಂಗನಾ ಇದೀಗ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ನಡೆಸುತ್ತಿದ್ದಾರೆ. ಹಿಮಾಚಲ ಪ್ರದೇಶ ಮೂಲದವರರಾಗಿರುವ ಕಂಗನಾ ಇದೀಗ ಲೋಕಸಭಾ ಚುನಾವಣಾ ಅಖಾಡದ ರೇಂಗೇರಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಬೆಳಗಾವಿಯಿಂದ ಶೆಟ್ಟರ್, ಸಂಸದ ಅನಂತ್ ಕುಮಾರ್ ಹೆಗಡೆಗೆ ಕೊಕ್!

ಟ್ವೀಟ್ ಮೂಲಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸುವ ಕಂಗನಾ ರಣಾವತ್ ಇದೀಗ ಭರ್ಜರಿ ಪ್ರಚಾರಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಇತ್ತ ಜನಪ್ರಿಯ ರಾಮಾಯಣ ಧಾರವಾಹಿಯಲ್ಲಿ ಶ್ರೀರಾಮನ ಪಾತ್ರಮಾಡಿ ಜನರ ಪ್ರೀತಿಗೆ ಪಾತ್ರರಾಗಿರುವ ಅರುಣ್ ಗೋವಿಲ್‌ಗೆ ಮೀರತ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಈಗಲೂ ಅರುಣ್ ಗೋವಿಲ್ ಎದುರಾದರೆ ಜನರು ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಇದೀಗ ಅರುಣ್ ಗೋವಿಲ್ ಮತದಾರರ ಬಳಿಕ ತೆರಳಿದಾಗ ಅವರ ಪ್ರತಿಕ್ರಿಯೆ ಏನಾಗಲಿದೆ ಅನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. 

ಆಂಧ್ರ ಪ್ರದೇಶ, ಬಿಹಾರ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್ , ಕರ್ನಾಟಕ, ಕೇರಳ,ಮಹಾರಾಷ್ಟ್ರ, ಮಿಜೋರಾಮ್, ಒಡಿಶಾ,ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಕರ್ನಾಟಕದಲ್ಲಿ ಬಾಕಿ ಉಳಿದಿದ್ದ 5 ಕ್ಷೇತ್ರಗಳ ಬೈಕಿ 4 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.

ಕಾಂಗ್ರೆಸ್‌ಗೆ ರಾಜೀನಾಮೆ ಶಾಕ್, ಪಕ್ಷ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ನವೀನ್ ಜಿಂದಾಲ್!

ಆಂಧ್ರ ಪ್ರದೇಶದಲ್ಲಿ ಎನ್‌ಟಿಆರ್ ಪುತ್ರಿ ಡಿ ಪುರಂದೇಶ್ವರಿಗೆ ರಾಜಮಂಡ್ರಿಯಿಂದ ಟಿಕೆಟ್ ಘೋಷಿಸಲಾಗಿದೆ.  ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಎನ್ ಕಿರಣ್ ಕಮಾರ್ ರೆಡ್ಡಿಗೆ ರಾಜಂಪೇಟ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.  

ಇದೇ ವೇಳೆ ಪ್ರಮುಖ ನಾಯಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಕೇಂದ್ರ ಸಚಿವ ಅಶ್ವಿನಿ ಚೌಬೆ, ವರುಣ್ ಗಾಂಧಿ, ರಾಜೀವ್ ಸಿಂಗ್ ಡೈಲರ್, ಸತ್ಯೇದವ್ ಪಚುರಿ, ಸಂಗಮಿತ್ರ ಮೌರ್ಯ, ರಾಜೇಂದ್ರ ಅಗರ್ವಾಲ್, ಸಂತೋಷ್ ಗಂಗವಾರ್, ವಿಕೆ ಸಿಂಗ್ ಸೇರಿದಂತೆ ಕೆಲ ಪ್ರಮುಖರು ಈ ಬಾರಿಯ ಲೋಕಸಭಾ ಚುನಾವಣಾ ಟಿಕೆಟ್ ಮಿಸ್ ಮಾಡಿಕೊಂಡಿದ್ದಾರೆ.  
 

click me!