1 ಗಂಟೆಗೆ 5 ಲಕ್ಷ ರೂ.; ತನ್ನನ್ನು ಭೇಟಿಯಾಗೋಕೆ ಹಣ ಫಿಕ್ಸ್ ಮಾಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್!

Published : Mar 24, 2024, 09:55 AM IST
1 ಗಂಟೆಗೆ 5 ಲಕ್ಷ ರೂ.; ತನ್ನನ್ನು ಭೇಟಿಯಾಗೋಕೆ ಹಣ ಫಿಕ್ಸ್ ಮಾಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್!

ಸಾರಾಂಶ

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಾವು ಬಹಳ ಕ್ರಿಯೇಟಿವ್ ಎಂದು ಹೇಳಿಕೊಂಡು ಬರುವ ಜನರಿಂದ ದಣಿದಿದ್ದು, ಇನ್ನು ಮುಂದೆ ತಮ್ಮನ್ನು ಭೇಟಿ ಮಾಡಬೇಕೆನ್ನುವವರು ಹಣ ನೀಡಬೇಕು. ತಾವು 10 ನಿಮಿಷಕ್ಕೆ 1 ಲಕ್ಷ ರೂ. ಚಾರ್ಜ್ ಮಾಡುವುದಾಗಿ ಹೇಳಿದ್ದಾರೆ. 

ಬಾಲಿವುಡ್ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಶನಿವಾರ (ಮಾರ್ಚ್ 23) ಅವರು ಹೊಸಬರಿಗಾಗಿ ತಮ್ಮ ಸಮಯವನ್ನು ವ್ಯರ್ಥ ಮಾಡುವುದರಿಂದ ದಣಿದಿರುವುದಾಗಿ ಹೇಳಿದ್ದು, ಅವರನ್ನು ಭೇಟಿ ಮಾಡಲು ಬಯಸುವವರಿಂದ ಹಣವನ್ನು ವಸೂಲಿ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಏಕೆ, ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಮ್ಮ ದರಗಳನ್ನು ಸಹ ಬಹಿರಂಗಪಡಿಸಿದ್ದಾರೆ!

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ, 'ಗ್ಯಾಂಗ್ಸ್ ಆಫ್ ವಾಸ್ಸೇಪುರ್' ನಿರ್ದೇಶಕ, 'ನಾನು ಹೊಸಬರಿಗೆ ಸಹಾಯ ಮಾಡಲು ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿದ್ದೇನೆ ಮತ್ತು ತಾವು ಅಸಾಧಾರಣ ಪ್ರತಿಭೆ ಎಂದು ಹೇಳಿಕೊಂಡು ಬರುವವರಿಂದ ಹೆಚ್ಚಾಗಿ ಸಾಧಾರಣ ವ್ಯರ್ಥ ಕತೆಗಳೊಂದಿಗೆ ಕೊನೆಗೊಂಡಿದ್ದೇನೆ. ಹಾಗಾಗಿ ಈಗ ನಾನು ಈ ಹೊಸಬರನ್ನು ಭೇಟಿಯಾಗಲು ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಅವರು ಸೃಜನಾತ್ಮಕ ಪ್ರತಿಭೆ ಎಂದು ಭಾವಿಸುವವರು ನನ್ನನ್ನು ಭೇಟಿ ಮಾಡಬೇಕೆಂದರೆ ಇದಕ್ಕಾಗಿ ಹಣ ಪಾವತಿ ಮಾಡಬೇಕು. ಯಾರಾದರೂ ನನ್ನನ್ನು 10-15 ನಿಮಿಷಗಳ ಕಾಲ ಭೇಟಿಯಾಗಲು ಬಯಸಿದರೆ ನಾನು 1 ಲಕ್ಷ, ಅರ್ಧ ಗಂಟೆಗೆ 2 ಲಕ್ಷ ಮತ್ತು 1 ಗಂಟೆಗೆ 5 ಲಕ್ಷ ರೂ. ಶುಲ್ಕ ವಿಧಿಸುತ್ತೇನೆ' ಎಂದು ಬರೆದಿದ್ದಾರೆ. 

ಈ ಪೋಸ್ಟ್‌ನ ಕೆಳಗೆ 'ನಿಜವಾಗಿಯೂ ನಾನಿದನ್ನು ಹೇಳುತ್ತಿದ್ದೇನೆ. ನನಗೆ ಕರೆ ಮಾಡುವುದಾಗಲೀ, ಸಂದೇಶ ಕಳುಹಿಸುವುದಾಗಲೀ ಮಾಡಬೇಡಿ. ಹಣ ನೀಡಿ, ನನ್ನ ಸಮಯ ಪಡೆಯಿರಿ. ಏಕೆಂದರೆ ನಾನು ಸೇವೆಗಾಗಿ ಏನನ್ನೂ ಮಾಡುತ್ತಿಲ್ಲ. ಶಾರ್ಟ್‌ಕಟ್ ಹುಡುಕಿ ಬರುವವರಿಂದ ನಾನು ನಿಜವಾಗಿ ದಣಿದಿದ್ದೇನೆ' ಎಂದಿದ್ದಾರೆ. 

ಇಲ್ನೋಡಿ, ಅನಂತ್ ಅಂಬಾನಿಯ 200 ಕೋಟಿ ಮೌಲ್ಯದ ವಾಚ್‌ಗಳ ಸಂಗ್ರಹ!
 

ಅವರು ಪೋಸ್ಟ್ ಅನ್ನು ಹಂಚಿಕೊಂಡ ತಕ್ಷಣ, ಅವರ ಮಗಳು ಆಲಿಯಾ ಕಶ್ಯಪ್ ತಮಾಷೆಯಾಗಿ ಹೇಳಿದ್ದಾರೆ, 'ನನ್ನ ಡಿಎಂಎಸ್ ಮತ್ತು ಇಮೇಲ್‌ನಲ್ಲಿರುವ ಎಲ್ಲರಿಗೂ ಇದನ್ನು ಫಾರ್ವರ್ಡ್ ಮಾಡುತ್ತಿದ್ದೇನೆ, ಅವರು ನಿಮಗೆ ಫಾರ್ವರ್ಡ್ ಮಾಡಲು ಸ್ಕ್ರಿಪ್ಟ್‌ಗಳನ್ನು ಕಳುಹಿಸುತ್ತಿದ್ದಾರೆ.'

ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿವಿಧ ಸಮಸ್ಯೆಗಳನ್ನು ಚರ್ಚಿಸುವಾಗ ಅವರು ಪ್ರಾಮಾಣಿಕ ಮತ್ತು ನೇರವಾದ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ. ವಿಭಿನ್ನ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರು ಎಂದಿಗೂ ಹಿಂಜರಿಯುವುದಿಲ್ಲ.

ರಾಮಾಯಣ ಸ್ಪೂರ್ತಿಯಿಂದ ತನ್ನದೇ ಚರ್ಮದ ಚಪ್ಪಲಿ ಮಾಡಿಸಿ ತಾಯಿಗೆ ತೊಡಿಸಿದ ಮಗ!
 

ಅನುರಾಗ್ ಗ್ಯಾಂಗ್ಸ್ ಆಫ್ ವಾಸೇಪುರ್, ಮನ್ಮರ್ಜಿಯಾನ್, ದೇವ್ ಡಿ, ನೋ ಸ್ಮೋಕಿಂಗ್, ಮತ್ತು ರಮಣ್ ರಾಘವ್ 2.0 ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಹಲವಾರು ಮಾಧ್ಯಮಗಳ ವರದಿಗಳ ಪ್ರಕಾರ, ಅವರು ಶೀಘ್ರದಲ್ಲೇ ಮಲಯಾಳಂ ಚಿತ್ರಗಳಲ್ಲಿ ನಟನೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌